ಚಿತ್ರದುರ್ಗ: ವಿದ್ಯುತ್ ಕಂಬದಲ್ಲಿ ಸಿಲುಕಿದ್ದ ಪಾರಿವಾಳವನ್ನು ರಕ್ಷಿಸಲು ಕಂಬದಲ್ಲಿದ್ದ ಬಾಲಕನಿಗೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಹನುಮಾಪುರ ಗ್ರಾಮದಲ್ಲಿ ನಡೆದಿದೆ.
ರಾಮಚಂದ್ರ (12) ಮೃತ ಬಾಲಕ. ಈತ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಗ್ರಾಮದ ವಿದ್ಯುತ್ ಕಂಬದಲ್ಲಿನ ತಂತಿಗೆ ಪಾರಿವಾಳವೊಂದು ಸಿಲುಕಿ ಜೀವನ್ಮರಣ ಮಧ್ಯೆ ಹೋರಾಡುತ್ತಿರುವುದನ್ನು ಗಮನಿಸಿದ ಈ ಪಾರಿವಾಳವನ್ನು ರಕ್ಷಿಸಲು ವಿದ್ಯುತ್ ಕಂಬ ಏರಿದ್ದ. ಈ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕ ಸ್ಥಳದಲ್ಲಿಯೇ ಇರುತ್ತಾನೆ.
ವಿದ್ಯುತ್ ಶಾಕ್ ನಿಂದಾಗಿ ಬಾಲಕನ ಶವ ವಿದ್ಯುತ್ ಕಂಬದಲ್ಲಿನ ತಂತಿಗೆ ಸಿಲುಕಿ ನೇತಾಡುತ್ತಿದ್ದ, ಮಾನವೀಯತೆಯಿಂದ ಪಾರಿವಾಳದ ಜೀವ ಉಳಿಸಲು ಮುಂದಾಗಿದ್ದ ಬಾಲಕ ತನ್ನ ಜೀವವನ್ನೇ ಬಲಿ ನೀಡಿದ್ದಾನೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಘಟನಾ ಸ್ಥಳಕ್ಕೆ ರಾಂಪುರ ಪಿಎಎಸ್ ಐ ಮಹೇಶ್ ಹೊಸಪೇಟೆ ಭೇಟಿ ಪರಿಶೀಲನೆಯನ್ನು ನೀಡಿ.