ಚಿತ್ರದುರ್ಗ : ಕ್ಯಾದಿಗೆರೆ ಬಳಿ ಹೊಸದಾಗಿ ನಿಮ್ಮ ನಿರ್ಮಿಸಿದ ಡಿವೈಡರ್ ಅವೈಜ್ಞಾನಿಕ ಬಳಕೆಯಿಂದ ಗೋಡೆ ಕುಸಿದು ಬಿದ್ದಿದೆ. ರಾಜ್ಯದಲ್ಲಿ ರಸ್ತೆ ಸಂಚಾರ ಸುಗಮವಾಗಲೆಂದು ರಾಷ್ಟ್ರೀಯ ಹೆದ್ದಾರಿಯ 4 ರಲ್ಲಿ ಕ್ಯಾದಿಗೆರೆಯಿಂದ ಸೀಬಾರದವರೆಗೆ ಸಂಪರ್ಕ ಕಲಪಿಸುವ ಹೊಸ ಹೈವೇಯನ್ನು ನಿರ್ಮಿಸಲಾಗಿದೆ ಈ ಭಾಗದ ಡಿವೈಡರ್ ಗೋಡೆ ಕಸಿದು ಬಿದ್ದು ಹೆಚ್ಚು ಅಪಘಾತ ಸಂಭವಿಸುತ್ತದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದರು.
ಈ ರಸ್ತೆಯ ಮೂಲಕ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತೇವೆ. ಕಳೆದ ದಿನಗಳಿಂದ ಜಿಲ್ಲೆಯಲ್ಲಿ ವಿವಿಧಡೆ ಮಳೆಯಾಗುತ್ತಿದ್ದು, ಈ ಘಟನೆಯಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಮತ್ತು ರಸ್ತೆಯ ಎಲ್ಲಾ ವಾಹನ ದಟ್ಟಣೆ ಹೆಚ್ಚಾಗಿ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೆ ಕುಸಿದು ಬಿದ್ದಿರುವ ಗೋಡೆಯನ್ನು ದುರಸ್ತಿ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದರು.
ಜಿಲ್ಲೆಯಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ನಡೆಯುತ್ತಿವೆ ಇದಕ್ಕೆ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದಿಂದ ನಿರ್ಮಾಣಗೊಂಡಿರುವ ಅವೈಜ್ಞಾನಿಕ ರಸ್ತೆ ಕಾರಣವಾಗಿದೆ ಇಂತಹ ಅನಾಹುತಗಳನ್ನು ತಪ್ಪಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು. ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಕೂಡಲೇ ಕುಸಿದು ಬಿದ್ದ ಗೋಡೆಯನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು.