ಚಿತ್ರದುರ್ಗ : ಹೊಳಲ್ಕೆರೆ ರಸ್ತೆಯ ಮಾಳಪ್ಪನಟ್ಟಿ ಸಮೀಪ ಶಾಮರಾವ್ ಬಡಾವಣೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ರಕ್ಷಿಸಿ ಇಬ್ಬರನ್ನು ಬಂಧಿಸಿರುವ ಘಟನೆ ನಡೆದಿದೆ.
ಬಂದಿತ ರಾಜಪ್ಪ ಮತ್ತು ಪತ್ನಿ ರೇಖಾ ನಗರದ ವರವಲಯದ ಹೊಳಲ್ಕೆರೆ ರಸ್ತೆಯ ಚಾಮರಾವ್ ಶಾಮರಾವ್ ಬಡಾವಣೆಯಲ್ಲಿ ಬಾಡಿಗೆ ಮನೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ದಿನಕರ್ ಸಿಪಿಐ ಮುದ್ದುರಾಜ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ರಾಜಪ್ಪ ಮತ್ತು ಪತ್ನಿ ಇಬ್ಬರನ್ನು ಬಂಧಿಸಿ ಮೂರು ಜನರನ್ನು ರಕ್ಷಣೆ ಮಾಡಿದ್ದಾರೆಂದು ಪತ್ರಿಕೆಗೆ ತಿಳಿಸಿದ್ದಾರೆ.
ನಗರದಲ್ಲಿ ಹೆಚ್ಚುತ್ತಿರುವ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಿದರೂ ಜನರು ಹಣದಾಸೆಯಿಂದ ಇಂತಹ ಕೃತ್ಯಗಳನ್ನು ಎಸುಗುತ್ತಿದ್ದಾರೆ ಇವರಿಗೆ ಯಾವುದೇ ತರಹದ ಶಿಕ್ಷೆಯ ಭಯವಿಲ್ಲದೆ ಇಂತಹ ವ್ಯವಹಾರಕ್ಕೆ ಜನರನ್ನು ಬಳಸಿ ಮಾಂಸ ದಂಧೆಯಿಂದ ಹಣ ಸಂಪಾದನೆಯ ಅಡ್ಡದಾರಿ ಹಿಡಿದಿದ್ದಾರೆ ಎಂದು ಪೊಲೀಸರು ತಿಳಿಸಿದರು. ಸ್ಥಳಕ್ಕೆ ಆಗಮಿಸಿ ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.