ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಪ್ರಶಾಂತ್ ನೀಲ್ ಈಗ ತಮಿಳಿನತ್ತ ಮುಖ ಮಾಡಿದ್ದಾರೆ. ಅಜಿತ್ ಕುಮಾರ್‌ಗೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಈ ಸಿನಿಮಾ ‘ಕೆಜಿಎಫ್ 3’ಗೆ (KGF 3) ಕನೆಕ್ಟ್ ಆಗಲಿದೆ ಎಂಬ ಇಂಟ್ರಸ್ಟಿಂಗ್ ಮಾಹಿತಿ ಹೊರಬಿದ್ದಿದೆ.
ಕನ್ನಡ, ತೆಲುಗು ಸಿನಿಮಾಗಳ ಬಳಿಕ ಈಗ ತಮಿಳಿನ ಸ್ಟಾರ್ ನಟ ಅಜಿತ್ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಈಗಾಗಲೇ ಅಜಿತ್‌ರನ್ನು ಭೇಟಿಯಾಗಿ ಪ್ರಶಾಂತ್ ನೀಲ್ ಕಥೆ ಹೇಳಿದ್ದಾರೆ. ಅವರು ಹೆಣೆದಿರುವ ಕಥೆ ಅಜಿತ್‌ಗೂ ಕೂಡ ಇಷ್ಟವಾಗಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.
ವಿಶೇಷ ಅಂದರೆ, ಅಜಿತ್‌ಗೆ ಪ್ರಶಾಂತ್ ನೀಲ್ ಎರಡು ಸಿನಿಮಾಗಳನ್ನು ಮಾಡಲಿದ್ದಾರೆ. ಈ ಚಿತ್ರವು ‘ಕೆಜಿಎಫ್ ಪಾರ್ಟ್ 3’ಗೆ ಲಿಂಕ್ ಆಗಲಿದೆ. ಈ ಚಿತ್ರಗಳು 2025ರಲ್ಲಿ ಅಧಿಕೃತವಾಗಿ ಅನೌನ್ಸ್ ಆಗಲಿದೆ.
ಸದ್ಯ ಪ್ರಶಾಂತ್ ನೀಲ್ ಜ್ಯೂ.ಎನ್‌ಟಿಆರ್ ಜೊತೆಗಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಅಜಿತ್ ಕುಮಾರ್, ‘ವಿದಾ ಮುಯರ್ಚಿ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಎರಡು ಪಾಜೆಕ್ಟ್‌ಗಳ ನಂತರ ಪ್ರಶಾಂತ್ ಮತ್ತು ಅಜಿತ್ ಕುಮಾರ್ ಹೊಸ ಸಿನಿಮಾ ಶುರುವಾಗಲಿದೆ. ಸದ್ಯ ಈ ಬ್ರೇಕಿಂಗ್ ನ್ಯೂಸ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.