Breaking
Mon. Dec 23rd, 2024

ನಟ ವಿನೋದ್ ರಾಜ್ ರೇಣುಕಾ ಸ್ವಾಮಿ ಕುಟುಂಬಕ್ಕೆ ಬೇಟಿಯಾಗಿ ಆರ್ಥಿಕ ನೆರವು……!

ಚಿತ್ರದುರ್ಗ : ರೇಣುಕಾ ಸ್ವಾಮಿ ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿದ ನಟ ದರ್ಶನ್ ಅನ್ನು ನೋಡಿಕೊಂಡು ಬಂದಿದ್ದ ವಿನೋದ್ ರಾಜಕುಮಾರ್ ಮೂರು ದಿನಗಳ ಅಂತರದಲ್ಲಿ ಕೊಲೆಯಾದ ರೇಣುಕಾ ಸ್ವಾಮಿ ಮನೆಗೆ ತೆರಳಿ, ಆತನ ಹೆಂಡತಿ ಮತ್ತು ತಂದೆ ತಾಯಿಗೆ ಸಾಂತ್ವನ ತಿಳಿಸಿ ನೊಂದ ಕುಟುಂಬಕ್ಕೆ 1 ಲಕ್ಷ ಆರ್ಥಿಕ ನೆರವು ನೀಡಿದರು.

ಚಿತ್ರದುರ್ಗ ರೇಣುಕಾ ಸ್ವಾಮಿ ಮನೆಗೆ ನಟ ವಿನೋದ್ ರಾಜ್ ಭೇಟಿ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮನೆಗೆ ಆಧಾರ ಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡಿದೆ ಕುಟುಂಬ ತೊರೆತಪ್ಪಿಸುತ್ತಿದೆ ಅವರ ಸ್ಥಿತಿ ಕಂಡು ಕರುಳು ಕಿತ್ತು ಬರುತ್ತಿದೆ ನಾವು ಮನುಷ್ಯರಾಗಿದ್ದೀವಾ ಅಂತ ಮುಟ್ಟಿ ನೋಡಿಕೊಳ್ಳುವ ಕಾಲ ಇದಾಗಿದೆ ಪ್ರತಿಯೊಂದು ಜೀವಿಗೂ ಜೀವವಿದೆ ಮಕ್ಕಳು ಬಾಳಿ ಬದುಕಬೇಕು ಬೆಳೆದು ಬೆಳಗಬೇಕು ಅಂತ ತಂದೆ ತಾಯಿ ಬೆಳೆಸುತ್ತಾರೆ. ಕೆಟ್ಟದ್ದು ಜಾಸ್ತಿಯಾಗಿದ್ದಾಗ ಇಂತಹ ಕೃತ್ಯಗಳು ನಡೆಯುತ್ತಿವೆ.

ಇಂತಹ ಘಟನೆಗಳು ಹೆಚ್ಚಾಗದಂತೆ ಎಚ್ಚೆತ್ತುಕೊಳ್ಳಬೇಕು ಕಲಾವಿದರನ್ನು ನೋಡಿ ಜನ ಅನುಕರಣೆ ಮಾಡುತ್ತಾರೆ ಇದು ಆಗಾತಕಾರಿ ವಿಷಯ ಹೆಸರು ಕೀರ್ತಿಯಲ್ಲಿರುವ ನಾವು ಎಚ್ಚರಿಕೆಯಿಂದ ಇರಬೇಕು ನಮ್ಮ ಉನ್ನತವಾದ ಸ್ಥಾನ ಎತ್ತರದ ಮಟ್ಟದಲ್ಲಿರುವವರು ವಿವೇಕ ಮೀರಬಾರದು ಆಚಾತುರ್ಯವಾಗಿ ನಡೆದೇವೆ ಮುಂದಿನ ತಲೆಮಾರಿಗಳು ಹೀಗೆ ಆಗದಂತೆ ಎಚ್ಚರಿಕೆ ವಹಿಸಬೇಕು ಮಾಧ್ಯಮಗಳು ತಿದ್ದಿ ಬುದ್ದಿ ಹೇಳುವಂತೆ ಅನುಸರಿಸಿಕೊಂಡು ಸಾಗಬೇಕೆಂದು ತಿಳಿಸಿದರು.

ದರ್ಶನ್ ಬೇಟಿ ವೇಳೆ ರೇಣುಕಾ ಸ್ವಾಮಿ ಕುಟುಂಬದ ಬಗ್ಗೆ ಯಾವುದೇ ಮಾತನಾಡಲಿಲ್ಲ ಸಿಕ್ಕ ಸಮಯ ಅವಕಾಶದಲ್ಲಿ ಹೆಚ್ಚು ಮಾತನಾಡಲು ಆಗಲಿಲ್ಲ ನನ್ನನ್ನು ನೋಡಿದ ತಕ್ಷಣ ದರ್ಶನ್ ಭಾವುಕರಾದರು. ನಟ ದರ್ಶನ್ ನನ್ನನ್ನು ತಬ್ಬಿಕೊಂಡು ಇಂತಹ ಘಟನೆ ನಡೆಯಬಾರದು ಕ್ರೋದ ದ್ವೇಷ ಅಸೂಯೆ, ಎಲ್ಲ ಬಿಡಬೇಕು ಕಡಿಮಣ ಹಾಕಬೇಕು ನಮ್ಮ ತಾಯಿ ಸಿನಿಮಾವನ್ನು ನೋಡಿದ್ದೇವೆ ಎಂದು ರೇಣುಕಾ ಸ್ವಾಮಿ ತಂದೆ ತಿಳಿಸಿದರು. ಇದೆ ವೇಳೆ ನಟ ವಿನೋದ್ ರಾಜಕುಮಾರ್ ಮುಂದೆ ರೇಣುಕಾ ಸ್ವಾಮಿ ತಂದೆ ತಾಯಿ ಕಣ್ಣೀರು ಹಾಕಿದರು.

ರೇಣುಕಾ ಸ್ವಾಮಿ ತಂದೆ ಕಾಶಿನಾಥ್ ಶಿವನಗೌಡ ಬಗ್ಗೆ ಮಾತನಾಡಿ ನಾವು ಸಂತಾನಕ್ಕೆ ಹೊರಟಿದ್ದೇನೆ ಅಂತಹ ಪ್ರಚಾರ ಸರಿಯಲ್ಲ ಮಗನ ಕಳೆದುಕೊಂಡು ಕರುಳು ಕೇತು ಬರುತಿದೆ ಈ ಪ್ರಕರಣದಿಂದ ನಾವು ನೊಂದಿದ್ದೇವೆ ನಮ್ಮ ತಾಯಿಗೆ 98 ವರ್ಷ ವಯಸ್ಸಾಗಿದೆ ಇಡೀ ಕುಟುಂಬವೇ ಸಂಕಷ್ಟದಲ್ಲಿದೆ ನಮ್ಮ ಮಗ ನಿತ್ಯ ಅಜ್ಜಿಗೆ ಹಾರೈಕೆ ಮಾಡುತ್ತಿದ್ದನು. ಮಗನ ಕೊಂದ ಅಪರಾಧಿಗಳು ಯಾರು ಅಂತ ನಮಗೆ ಗೊತ್ತಿಲ್ಲ ಪ್ರಕರಣದ ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ವಿನೋದ್ ರಾಜ್ ತಾಯಿ ಬಗ್ಗೆ ಅಪಾರ ಗೌರವವಿದೆ ಅವರ ದೈವಭಕ್ತಿ ಬಗ್ಗೆ ಕೇಳಿದ್ದೇವೆ ವಿನೋದ್ ರಾಜಕುಮಾರ್ ಬಂದಿದ್ದು ಸಮಾಧಾನ ತಂದಿದೆ ಎಂದು ತಿಳಿಸಿದರು.

ದರ್ಶನ್ ಭೇಟಿ ಬಳಿಕ ರೇಣುಕಾ ಸ್ವಾಮಿ ಕುಟುಂಬದ ಬೇಡಿ ಮಾತನಾಡಿದ್ದೇನೆ ಏಕೆ ನೀವು ನಟ ದರ್ಶನ್ ಹೇಳಿದ್ದಾರೆಂದು ಮಾತುಕತೆಗೆ ಬಂದಿದ್ರಾ ಎಂದು ಮಾಧ್ಯಮಗಳಿಂದ ಪ್ರಶ್ನೆ ಕೇಳಲಾಯಿತು ಆದರೆ ಅದನ್ನು ನಿರಾಕರಿಸಿದ ವಿನೋದ್ ರಾಜ್ ಛೇ ಛೇ ಹಾಗೆಲ್ಲ ಇಲ್ಲ ದರ್ಶನ್ ನೋಡಿದರೆ ಅಲ್ಲೂ ಇದೇ ಪರಿಸ್ಥಿತಿ ಇದೆ ಇಲ್ಲಿ ನೋಡಿದರೂ ಇಂತಹ ಭಯಾನಕ ಪರಿಸ್ಥಿತಿ ಇದೆ ಎಂದು ಹೇಳಿದರು.

 

Related Post

Leave a Reply

Your email address will not be published. Required fields are marked *