Breaking
Tue. Dec 24th, 2024

ಮುಡಾದಲ್ಲಿ ಬದಲಿ ನಿವೇಶನ ಪಡೆದುಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಪಟ್ಟಿ ಬಿಡುಗಡೆ…!

ಬೆಂಗಳೂರು, (ಜುಲೈ 26) : ಮುಡಾ ಹಗರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಿಂದ ಮೈಸೂರು ವರೆಗೆ ಪಾದಯಾತ್ರೆ ಮಾಡಲು ಬಿಜೆಪಿ ಮತ್ತು ಜೆಡಿಎಸ್ ಮುಂದಾಗಿವೆ.

ಇದಕ್ಕೂ ಮುನ್ನವೇ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮುದದಲ್ಲಿ ಬದಲಿ ನಿವೇಶನ ಹೊಂದಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ವಿಪಕ್ಷಗಳಿಗೆ ತಿರುಗೇಟು ನೀಡಿದೆ. ಇನ್ನು ಮುಡಾ ಬದಲಿ ಸೈಟ್ ಗಾಗಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೆಸರು ಕೂಡ ಇದ್ದು, ಈ ಪ್ರಕರಣ ಮತ್ತಷ್ಟು ಸಂಚಲನಕ್ಕೆ ಕಾರಣವಾಗಿದೆ. ಮೂಡದಲ್ಲಿ ಬದಲಿ ನಿವೇಶನ ಪಡೆದ ರಾಜಕಾರಣಿಗಳ ಪಟ್ಟಿ

1) ಎಚ್.ಡಿ.ಕುಮಾರಸ್ವಾಮಿ(ಜೆಡಿಎಸ್) :ಇಂಡಸ್ಟ್ರಿಯಲ್ ಸಬರ್ಬ್ ಮೂರನೇ ಹಂತ ಮೈಸೂರು. 21 ಸಾವಿರ ಚದರ ಅಡಿ ಕೈಗಾರಿಕಾ ನಿವೇಶನ ಸಂಖ್ಯೆ 17/ಬಿ1.

2) ಸಾ.ರಾ.ಮಹೇಶ್(ಜೆಡಿಎಸ್) – ಮಳಲವಾಡಿ ಸರ್ವೆ ನಂಬರ್ 7/11ಎ ರಲ್ಲಿ -011 ಗುಂಟೆ ಜಮೀನು ಬೋಗಾದಿ ಸರ್ವೆ ನಂಬರ್ 170,171,173 ರಲ್ಲಿ 2-11 ಜಮೀನು

3) ಜಿ.ಟಿ.ದೇವೇಗೌಡ(ಜೆಡಿಎಸ್ -ಈರನಗೆರೆ 14/1 ರಲ್ಲಿ 2-25 ಗಿಡ್ಡ, ಮಾದಗಳ್ಳಿ 17 ರಲ್ಲಿ 1 ಖಾದ್ಯ

4) ಸಿ.ಎನ್.ಮಂಜ (ಜೆಡಿಎಸ್ ಎಂಎಲ್‌ಸಿ): ಹಿನಕಲ್ ಗ್ರಾಮ ಸರ್ವೆ ನಂ 337 ರಲ್ಲಿ 1 ಗ್ರಾ.ಪಂ. ದೇವನೂರು ಸರ್ವ ನಂಬರ್ 91 ರಲ್ಲಿ 2-25, ಕೆಸರೆ ಸರ್ವೆ ನಂಬರ್ 450 ರಲ್ಲಿ 4-15 ಜಮೀನು, ಮೈಸೂರು ಸರ್ವೆ ನಂಬರ್ 86 ರಲ್ಲಿ 7-08 ಜಮೀನು

5) ಹೆಚ್.ವಿಶ್ವನಾಥ್ (ಬಿಜೆಪಿ ಎಂಎಲ್‌ಸಿ) ಬೆಲವತ್ತ ಸರ್ವೆ ನಂಬರ್ 32 ರಲ್ಲಿ 0-05 ಜಮೀನು

6)ಮಹದೇವಸ್ವಾಮಿ (ಬಿಜೆಪಿ): 255/1, 257 ರಲ್ಲಿ 0-34 ಗುಂಟೆ ಜಮೀನು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಹೆಸರು ಕೇಳಿಬಂದಿರುವ ಪ್ರಕರಣ ಈ ತೀಬ್ರ ಸ್ವರೂಪದಲ್ಲಿದೆ. ಇದೆ ಹಗರಣವನ್ನು ಹಿಡಿದುಕೊಂಡು ವಿಪಕ್ಷಗಳು ಸಿದ್ದರಾಮಯ್ಯ ಮೇಲೆ ಮುಗಿಬಿದ್ದಿವೆ. ಈ ಇದೀಗ ಸರ್ಕಾರ ಮುಡಾದಲ್ಲಿ ಬದಲಿ ನಿವಾಸ ಪಡೆದ ವಿಪಕ್ಷ ನಾಯಕರ ಪಟ್ಟಿ ಬಿಡುಗಡೆ ಮಾಡಿದೆ ಅಷ್ಟೇ. ಆದರೆ, ಅಕ್ರಮವೋ ಸಕ್ರಮವೋ ಎಂದು ಹೇಳಿಲ್ಲ.

Related Post

Leave a Reply

Your email address will not be published. Required fields are marked *