ಬಾಗೆಪಲ್ಲಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುವರ್ಣ ಕನ್ನಡ ರಥ ಮೆರವಣಿಗೆ ಶಾಸಕ ಎಸ್.ಎನ್. ಸುಬ್ಬರೆಡ್ಡಿ, ತಾಸಿಲ್ದಾರ್ ಮನಿಷಾ ಪತ್ರಿ ತಾಲೂಕು ಪಂಚಾಯಿತಿ ಸಿ.ಇ.ಒ ರಮೇಶ್ ಹಾಗೂ ಜಿಲ್ಲಾಡಳಿತ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ಕನ್ನಡ ತಾಯಿ ಭುವನೇಶ್ವರಿಗೆ ಮಾಲಾರ್ಪಣೆ ಮಾಡುವ ಮೂಲಕ ಕನ್ನಡದ ಬಾವುಟ ಹಾರಿಸಿ ಚಾಲನೆ ನೀಡಿದರು.
ಪಟ್ಟಣದ ಚಿತ್ರಾವತಿ ಮೇಲ್ ಸೇತುವೆ ಬಳಿ ಸರ್ಕಾರಿ ನೌಕರರು ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಅಂಗನವಾಡಿ ಕಾರ್ಯಕರ್ತರು ಕನ್ನಡ ರಥವನ್ನು ಸ್ವಾಗತಿಸಿದರು ಮೆರವಣಿಗೆಯಲ್ಲಿ ಕಂಸಾಳೆ ವೃತ್ತಿಯ ತಮಟೆ ವಾದ ಶಾಲಾ ಮಕ್ಕಳಿಂದ ಬ್ಯಾಂಡ್ ಸೆಟ್ ಕನ್ನಡ ಹಾಡು ಹಾಡಿಸಲಾಯಿತು ಭೂತಾಯಿ ಬಳಗದ ಕಲಾವಿದ ಮಹೇಶ್ ನಾಡಗೀತೆ ರೈತ ಗೀತೆ ಹಾಡಿದರು. ಪಟ್ಟಣದ ಡಿವಿಜಿ ಮುಖ್ಯ ರಸ್ತೆಯ ಕುಂಬಾರ ಪೇಟೆ ಡಾ.ಎಚ್.ಎನ್ ವೃತ್ತದ ಮೂಲಕ ನ್ಯಾಷನಲ್ ಕಾಲೇಜಿನ ಮುಂಭಾಗದವರೆಗೆ ಕನ್ನಡ ರಥ ಮೆರವಣಿಗೆ ಮಾಡಲಾಯಿತು.
ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮಾತನಾಡಿ ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಲು ಡಾ. ಸರೋಜಿನಿ ಮಹಿಷ ವರದಿ ಅನುಷ್ಠಾನ ಆಗಬೇಕು ಕನ್ನಡಿಗರಿಗೆ ಬದುಕು ಸಿಗಬೇಕು ಗಡಿ ಪ್ರದೇಶದಲ್ಲಿ ಕನ್ನಡ ಭಾಷೆ ಮಾತನಾಡಬೇಕು ಕನ್ನಡ ಭಾಷೆ ಬಗ್ಗೆ ಕೇಳಿರುವ ಬೇಡ ಕನ್ನಡದ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ತನುಜಾ, ಪುರಸಭೆ ಮುಖ್ಯ ಅಧಿಕಾರಿ ಶ್ರೀನಿವಾಸ್, ತಾಲೂಕು ಪಶು ವೈದ್ಯಾಧಿಕಾರಿ ಡಾ. ಕೃಷ್ಣಮೂರ್ತಿ, ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ಸಿಎನ್ ಸತ್ಯನಾರಾಯಣ ರೆಡ್ಡಿ, ಸಿ.ಡಿ.ಪಿ. ರಾಮಚಂದ್ರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ ಎನ್ ಕೃಷ್ಣಾರೆಡ್ಡಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಡಾಕ್ಟರ್ ಚಿನ್ನಕೈವಾರಮಯ್ಯ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ ಎನ್ ಕೃಷ್ಣಾರೆಡ್ಡಿ ಮುಂತಾದವರು ಭಾಗವಹಿಸಿದ್ದರು.