ಬೆಂಗಳೂರು : ಜಗತ್ತಿನಾದ್ಯಂತ ಯುಪಿಎ ಮೂಲಕ ವ್ಯವಹಾರಗಳು ನಡೆಯುತ್ತಿವೆ ಇದರ ಮೂಲಕ ದಿನಸಿ ಅಂಗಡಿಯಿಂದ ಇಡಿದು ದೊಡ್ಡ ಮಟ್ಟದ ಅಂಗಡಿಗಳಿಗೂ ಯುಪಿಎ ಮೂಲಕ ಹಣ ವ್ಯವಹಾರ ನಡೆಯುತ್ತಿವೆ ಆದರೆ ವಿಚಿತ್ರ ಸಂಗತಿ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ನಲ್ಲಿ ಕರ್ನಾಟಕ ಹೈಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ. ಏಕೀಕೃತ ಪಾವತಿ ಇಂಪಾರ್ಟೆಂಟ್ ಅಥವಾ ಆನ್ಲೈನ್ ಪಾವತಿಯ ಸೌಲಭ್ಯಗಳು ಗ್ರಾಹಕರಿಗೆ ಏಕೆ ಒದಗಿಸಿಲ್ಲ ಎಂಬ ಬಗ್ಗೆ ಆಗಸ್ಟ್ 9ರ ಒಳಗೆ ಅಪ್ಡೇಟ್ ಸಲ್ಲಿಸುವಂತೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ ನ್ಯಾಯಮೂರ್ತಿ ಎನ್ಎಸ್ ಸಂಜಯ್ ಗೌಡ ಅವರಿಂದ ಏಕ ಸದಸ್ಯ ಪೀಠ ಈ ನಿರ್ದೇಶನ ಜಾರಿ ಮಾಡಿದೆ.
2003ರ ವಿದ್ಯುತ್ ಕಾಯಿದೆ ಸೆಶನ್ 47 ಐದರ ಪ್ರಕಾರ ಪೂರ್ವ ಪಾವತಿ ಮೀಟರ್ ಒದಗಿಸುವಂತೆ ಮತ್ತು ಯುಪಿಐ ಮೋಡ್ನಲ್ಲಿ ಪಾವತಿಸಲು ಸ್ವೀಕರಿಸಲು ಬೆಸ್ಕಾಂಗೆ ನಿರ್ದೇಶನ ನೀಡಬೇಕೆಂದು ಕೋರಿ ಹಿರಿಯ ನಾಗರಿಕರಾದ ಸೀತಾ ಲಕ್ಷ್ಮಿ ಎಂಬುವವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ವಿಚಾರಣೆ ವೇಳೆ ಈ ನಿರ್ದೇಶನ ನೀಡಲಾಗಿದೆ.
ಇಡೀ ಜಗತ್ತೇ ಯುಪಿಎಮ್ ಮೂಲಕ ಪಾವತಿಗಳನ್ನು ಸ್ವೀಕರಿಸುತ್ತಿರುವ ಈ ಯುಗದಲ್ಲಿ ಬೆಸ್ಕಾಂ ಯುಪಿಎ ಮೂಲಕ ಹಣ ಸ್ವೀಕರಿಸಲು ನಿರಾಕರಿಸುವುದು ವಿಚಿತ್ರವಾಗಿದೆ. ಯಾವುದಾದರೂ ನಿಮಗೆ ಹಣವನ್ನು ಪಾವತಿಸಲು ಬಯಸಿದರೆ ಅದು ಈಗ ಸ್ವೀಕರಿಸ ಪಟ್ಟ ವಿಧಾನವಾದರೂ ನೀವು ಅದನ್ನು ಅಳವಡಿಸಬೇಕಾದರೆ ಯಾರಾದರೂ ನ್ಯಾಯಾಲಯಕ್ಕೆ ಬಂದು ರಿಟರ್ಜಿ ಸಲ್ಲಿಸಬೇಕಾಗುತ್ತದೆ ಯಾರು ನಿಮಗೆ ಹಣ ನೀಡಲು ಬಯಸುತ್ತಾರೆ ಎಲ್ಲರೂ ಡಿಜಿಟಲ್ ಆಗಿರಿ ಎಂದು ಸರಕಾರ ಘೋಷಿಸಿದೆ ಆದರೆ ನೀವು ಕರೆನ್ಸಿ ನೋಟುಗಳನ್ನು ಸಂಗ್ರಹಿಸುವ ಕಾಲಕ್ಕೆ ಹಿಂತಿರುಗಲು ಬಯಸುತ್ತಿದ್ದೀರಿ ಎಂದು ಹೈಕೋರ್ಟ್ ಪೀಠ ಬೆಸ್ಕಾಂ ನಕಿವಿ ಹಿಂಡಿತು.
ವಿಚಾರಣೆಯ ವೇಳೆ ಬೆಸ್ಕಾಂ ಪರ ವಕೀಲ ಬೆಸ್ಕಾಂ ಕೌಂಟರ್ ಗಳಲ್ಲಿ ಯುಪಿಐ ಪಾವತಿ ಮಾಡಲು ಅವಕಾಶವಿಲ್ಲ ನಗದು ಪಾವತಿಯನ್ನು ಮಾತ್ರ ಸ್ವೀಕರಿಸಲಾಗುತ್ತದೆ ಎಂದು ತಿಳಿಸಿದರು ಆದರೆ ಗ್ರಾಹಕರು ಬೆಸ್ಕಾಂ ಅಪ್ಲಿಕೇಶನ್ ಮೂಲಕ ಆನ್ಲೈನ್ ಯುಪಿಐ ಪಾವತಿಗಳನ್ನು ಮಾಡಬಹುದು ಹಿರಿಯ ನಾಗರಿಕರು ಮತ್ತು ವಯಸ್ಸಾದವರು ಕೌಂಟರ್ ಗೆ ಬರಲು ಅಗತ್ಯವಿಲ್ಲದೆ ಮನೆಯಲ್ಲೇ ಕುಳಿತು ಅಪ್ಲಿಕೇಶನ್ ನಲ್ಲಿ ಅದನ್ನು ಮಾಡಬಹುದೆಂದು ಹೇಳಿದರು. ಅಕ್ಟೋಬರ್ 25 2023 ರಂದು ಅರ್ಜಿದಾರರು ಮನೆ ಬಾಡಿಗೆಗೆ ಉದ್ದೇಶಗಳಿಂದ ಉಂಟಾಗುವ ಭಾರಿ ಶುಲ್ಕವನ್ನು ಕಟ್ಟಲು ಬೆಸ್ಕಾಂ ಹೊಸಕೋಟೆ ಶಾಖೆಯ ಕ್ಯಾಶ್ ಕೌಂಟರ್ ಗೆ ಭೇಟಿ ನೀಡಿದರು ಪಾವತಿ ಲಭ್ಯವಿಲ್ಲದ ಕಾರಣ ಕರ್ತವ್ಯದಲ್ಲಿದ್ದ ಅಧಿಕಾರಿಗಳು ಅರ್ಜಿದಾರರಿಗೆ ಡಿಡಿಎ ಮೂಲಕ ಪಾವತಿಸಲು ಸೂಚಿಸಿದರು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಶ್ರೀಧರ್ ಪ್ರಭು ಅವರು ವಯಸ್ಸಾದ ಮಹಿಳೆ ದೈನಂದಿನ ಕೆಲಸಗಳನ್ನು ನಿರ್ವಹಿಸುವಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದಾರೆ ಡಿಮ್ಯಾಂಡ್ ಡ್ರಾಪ್ ಅಥವಾ ಡಿಡಿ ಪಡೆಯಲು ಸರದಿಯಲ್ಲಿ ನಿಂತು ಕಷ್ಟ ಪಟ್ಟಿದ್ದಾರೆ ನಂತರ ಪಾವತಿ ಮಾಡಿದರೆ ಹೀಗಾಗಿ ಅವರು ತಮ್ಮ ಯೂನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ ಐಡೆಂಟಿಟಿ ಅಥವಾ ಯುಪಿಐ ಡಿ ಅನ್ನು ಒದಗಿಸಲು ಪ್ರಕ್ರಿಯೆಗಳನ್ನು ಸುಲಭಗೊಳಿಸಲುವಂತೆ ಮನವಿ ಮಾಡಿದ್ದಾರೆ ಎಂದರು.