ಚಿತ್ರದುರ್ಗ : ಕುರುಬರಹಳ್ಳಿ ಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ಶಾಲೆಯಲ್ಲಿ ಹುಲ್ಲೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಶ್ರೀ ಬಾಲಾಜಿ ಯುವಕರ ಸಂಘ ಹಾಗೂ ಎಸ್ ಎಲ್ ವಿ ನೇತೃತ್ವದ ಶಾಲೆಯಲ್ಲಿ ಆಯೋಜನೆ ಮಾಡಲಾಯಿತು ಹುಲ್ಲೂರು ಕ್ಲಸ್ಟರ್ ವ್ಯಾಪ್ತಿಯ 2 ಕಿರಿಯ ಪ್ರಾಥಮಿಕ ಶಾಲೆಗಳು, 7 ಹಿರಿಯ ಪ್ರಾಥಮಿಕ ಶಾಲೆಗಳು, ನಾಲ್ಕು ಪ್ರೌಢಶಾಲೆಗಳು ಮತ್ತು 400ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಅಧಿಕಾರಿ ಶ್ರೀಮತಿ ನಗ್ಮಾ ನಾಗರಾಜ್ ನಾಯಕ್ ಮಕ್ಕಳಲ್ಲಿ ಇರುವ ಕಲೆಗಳನ್ನು ಗುರುತಿಸಿ ಶಿಕ್ಷಕರು ಪ್ರೇರಪಿಸಬೇಕು ಎಂದು ತಿಳಿಸಿದರು. ಸಿಆರ್.ಪಿ ಬಸವರಾಜ್ ಮಾತನಾಡಿ ಇದು ಮಕ್ಕಳ ಹಬ್ಬ ಈ ಹಬ್ಬದ ವಾತಾವರಣದಲ್ಲಿ ಮಕ್ಕಳೆಲ್ಲರೂ ನಮಗೆ ಆಕರ್ಷಿಸುವ ಕಲೆಯ ಸಿಹಿಯನ್ನು ನಾವೆಲ್ಲರೂ ಸವಿದು ಮುಕ್ತ ಮನಸ್ಸಿನಿಂದ ನ್ಯಾಯವಾದ ತೀರ್ಪನ್ನು ನೀಡಬೇಕೆಂದು ತಿಳಿಸಿದರು.
ಸಿ.ಆರ್.ಪಿ ಅಜಯ್ ಮಾತನಾಡಿ ಪ್ರತಿಭಾ ಕಾರಂಜಿ ಮಕ್ಕಳ ಕಲಿಕೆಗೆ ಹೊಸದಾದ ಜೀವನ ಕೌಶಲ್ಯವನ್ನು ಒಂದುವ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುತ್ತದೆ ಮತ್ತು ತೀರ್ಪುಗಾರರ ಕೆಲಸದ ಬಗ್ಗೆ ತಿಳಿಸಿ ಮಕ್ಕಳಿಗೂ ಮತ್ತು ಕಾರ್ಯಕ್ರಮಕ್ಕೆ ಶುಭ ಕೋರಿದರು ಈ ವೇಳೆ ಪುಲ್ಲೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಬಸವರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಿ ಆರ್ ಪಿ ಮಂಜಣ್ಣ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರುು ಕುಮಾರಿ ನೇತ್ರಾವತಿ ಸ್ವಾಗತ ಭಾಷಣ ಮಾಡಿದರು ನಂತರ ಬಶೀರ್ ಅಹ್ಮದ್ ಅವರು ಕಾರ್ಯಕ್ರಮದ ವಂದನಾರ್ಪಣೆಯನ್ನು ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗ ತಾಲೂಕು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಿ ಆರ್ ಪಿ ಗಳಾದ ಬಸವರಾಜ್, ಮಂಜಪ್ಪ, ಅಜಯ್ ಕುಮಾರ್, ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಪ್ರದೀಪ್ ಕುಮಾರ್ ಎಸ್ ಹಾಗೂ ಹುಲ್ಲೂರು ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ತಿಪ್ಪೇಸ್ವಾಮಿ, ಜ್ಯೋತಿ, ರೇವಣ್ಣ, ಉಮಾದೇವಿ, ಲತಾ, ಶಂಕರ್ ಮೂರ್ತಿ, ಶೈಲಜಾ, ಶಿಕ್ಷಕರಾದ ಶಶಿಕಲಾ, ಗೀತಾ, ವಿನಯ್ ಕುಮಾರ್, ಶಶಿಕುಮಾರ್, ನವೀನ್, ಶಿವಶಂಕರ್, ನಿರ್ಮಲ, ಮೋನಿಕಾ, ಸಹನ, ಅನಿತಾ, ಸಲ್ಮಾ, ದಿವ್ಯ, ರಂಗಪ್ಪ, ಚೇತನ ಮುಂತಾದವರು ಭಾಗವಹಿಸಿದ್ದರು.