Breaking
Tue. Dec 24th, 2024

ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಗಾಳಿಪಟ ಹಬ್ಬ ಆಚರಣೆ…..!

ಚಿತ್ರದುರ್ಗ : ನಗರದ ಜ್ಞಾನಭಾರತಿ ವಿದ್ಯಾ ಮಂದಿರದಲ್ಲಿ ಇಂದು ಗಾಳಿಪಟ ಹಬ್ಬ ಆಚರಿಸಲಾಯಿತು. ಈ ವೇಳೆ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಾಲೆಯಲ್ಲಿ ವಿಶೇಷ ಗಾಳಿಪಟ ಹಬ್ಬವನ್ನು ಹಮ್ಮಿಕೊಂಡು ಆಷಾಢದ ಶುದ್ಧ ಏಕಾದಶಿಯ ದಿನದಂದು ದೇಶದ ಅನೇಕ ಭಾಗಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಡಾಕ್ಟರ್ ಕೆ ರಾಜೀವ್ ಲೋಚನ್ ತಿಳಿಸಿದರು.

ಜೀವನದಲ್ಲಿ ಸಂಸಾರ ಎಂಬ ಸೂತ್ರಗಳನ್ನು ಮನುಷ್ಯನು ಹೇಗೆ ಸರಿದಾರಿಯಲ್ಲಿ ಕೊಂಡೊಯ್ಯುತ್ತವೆಯೋ ಹಾಗೆಯೇ ಗಾಳಿಪಟವು ಎತ್ತರ ಹಾರಲು ಸೂತ್ರ ಬಹಳ ಮುಖ್ಯ ಅದೇ ರೀತಿ ಮನುಷ್ಯ ಎಷ್ಟೇ ಉನ್ನತ ಸಾಧನೆ ಮಾಡಿದರು ಅಷ್ಟೇ ಉನ್ನತ ಹಂತದಲ್ಲಿದ್ದರೂ ಸಹ ಅವನಿಗೆ ಸಂಸಾರವೆಂಬ ಸೋತ್ರ ಮುಖ್ಯವಾಗಿರುತ್ತದೆ. ಸೂತ್ರ ಸರಿ ಇಲ್ಲದಿದ್ದರೆ ಜೀವನವು ಎಡರು ತೊಡರುಗಳಿಗೆ ಅಥವಾ ಏರುಪೇರುಗಳಿಗೆ ಒಳಗಾಗುತ್ತದೆ ಆದ್ದರಿಂದ ಗಾಳಿಪಟವನ್ನು ಹೇಗೆ ಸೂತ್ರದ ಮೂಲಕ ನಿಯಂತ್ರಿಸಲು ಸಂಸಾರಗಳು ಅಷ್ಟೇ ಅವಶ್ಯಕ ಅಂತಹ ಉನ್ನತ ಸಂಸಾರಗಳನ್ನು ರೂಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕೆಂದು ತಿಳಿಸಿದರು.

ಶಾಲೆಯ ಪ್ರಾಂಶುಪಾಲರಾದ ಪ್ರಜ್ವಲ್ ಬಿ ಎ ಅವರು ಮಾತನಾಡುತ್ತಾ ಗಾಳಿಪಟ ಹಬ್ಬ ಜನಪದ ದೇಶೀಯ ಕಲೆಗಳಲ್ಲಿ ಒಂದಾಗಿದೆ ಈ ಗಾಳಿಪಟವು ಮನಸ್ಸಿನಲ್ಲಿ ಸಂತೋಷ ಹಾಗೂ ಮಂದಹಾಸವನ್ನು ನೀಡುವುದರ ಜೊತೆಗೆ ಇತರ ಕಾರ್ಯಗಳಲ್ಲಿ ನಮ್ಮನ್ನು ಸದಾ ಹಸನ್ಮುಖಿಯಾಗಿ ಮತ್ತು ಕಾರ್ಯನ್ಮೊಖರಾಗಲು ನಮ್ಮನ್ನು ಪ್ರೇರಣೆ ನೀಡುತ್ತದೆ, ಪಾಲಕರು ಮತ್ತು ಮಕ್ಕಳು ಸಂಸಾರ ಎಷ್ಟರಮಟ್ಟಿಗೆ ಬಿಗಿ ಹಿಡಿಯುತ್ತಾರೋ ಅಷ್ಟು ಎತ್ತರಕ್ಕೆ ಮಕ್ಕಳು ಬೆಳೆಯುತ್ತಾರೆ. ಗಾಳಿಪಟ ಎಂಬ ಭಾವನೆಗಳ ರೆಕ್ಕೆ ಕಟ್ಟಿ ಹಾರುತ್ತದೆಯೋ ಹಾಗೆಯೇ ವಿದ್ಯಾರ್ಥಿಗಳು ಸಂಸ್ಕಾರಗಳನ್ನು ರೂಡಿಸಿಕೊಂಡು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಓಂಕಾರಪ್ಪ ಆಡಳಿತ ಅಧಿಕಾರಿಗಳಾದ ಹನುಮೇಶ್ ಪದಕ್ಕೆ ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಮತ್ತು ಪೋಷಕ ವರ್ಗದವರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳು ಬಣ್ಣ ಬಣ್ಣದ ಗಾಳಿಪಟಗಳನ್ನು ಮುಗಿಲೆತ್ತರಕ್ಕೆ ಹಾರಿಸಿ, ಸಂತೋಷದಿಂದ ಕುಣಿದು ಕುಪ್ಪಳಿಸಿದರು ಹಾಗೂ ಈ ಕಾರ್ಯಕ್ರಮಕ್ಕೆ ಶಿಕ್ಷಕರು ಸಹ ಗಾಳಿಪಟವನ್ನು ಆರಿಸುವುದರ ಮೂಲಕ ಮಕ್ಕಳಿಗೆ ಮಾದರಿಯಾದರೂ.

Related Post

Leave a Reply

Your email address will not be published. Required fields are marked *