ಚಿತ್ರದುರ್ಗ : ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವುದನ್ನು ವಿರೋಧಿಸಿ ರಾಜ್ಯದ್ಯಂತ ಪ್ರತಿಭಟನೆ ನಡೆಸುವಂತೆ ಕೆಪಿಸಿಸಿ ಸೂಚನೆ ಮೇರೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿ ಎದರು ಕಾರ್ಯಕರ್ತರು ಮತ್ತು ಮುಖಂಡರು ತಲೆಯ ಮೇಲೆ ಚಂಬು ಇಟ್ಟುಕೊಂಡು ಪ್ರತಿಭಟನೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತ ಭದ್ರಾ ಮೇಲ್ದಂಡೆ ಯೋಜನೆಗೆ ಕಳೆದ ಬಜೆಟ್ಟಿನಲ್ಲಿಯೇ ಕೇಂದ್ರ ಸರ್ಕಾರ 5300 ಕೋಟಿ ರೂಪಾಯಿಗಳನ್ನು ಘೋಷಿಸಿದ್ದು ಇದುವರೆಗೆ ಒಂದು ನಯಾ ಪೈಸೆ ಕೂಡ ಬಿಡುಗಡೆ ಮಾಡಿಲ್ಲ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯದ ಜನತೆಗೆ ಮಂಕುಭೂತಿ ಎರಚುತಿದ್ದಾರೆ ಬೆಂಗಳೂರು ಒಂದರಿಂದಲೇ ಶೇಕಡ 60ರಷ್ಟು ತೆರಿಗೆ ಕೇಂದ್ರಕ್ಕೆ ಪಾವತಿಯಾಗುತ್ತಿದೆ ರಾಜ್ಯದ ಎಲ್ಲಾ ಸಂಸದರು ಸೇರಿಕೊಂಡು ಕರ್ನಾಟಕಕ್ಕೆ ಹೆಚ್ಚಿನ ಅನುದಾನ ತರಬೇಕು ಅಪ್ಪರ್ ಭದ್ರ ಮೇಲ್ದಂಡೆ ಯೋಜನೆ ಮೇಕೆದಾಟು ಕೃಷ್ಣ ಬೇಸಿನ್ ಕಾಮಗಾರಿಗಳನ್ನು ಇನ್ನು ನಡೆಯುತ್ತಲೇ ಇವೆ. ಕೇಂದ್ರ ಬಜೆಟ್ಟಿನಲ್ಲಿ ರೈಲ್ವೆ ನೀರಾವರಿಗೆ ಹೆಚ್ಚಿನ ಒತ್ತು ಕೊಟ್ಟಿಲ್ಲ ಇದರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಕೇಂದ್ರದ ವಿರುದ್ಧ ಎಚ್ಚರಿಕೆ ನೀಡಿದರು.
ಮಾಜಿ ಸಂಸದ ಡಿ ಎನ್ ಚಂದ್ರಪ್ಪ ಮಾತನಾಡಿ ಕೇಂದ್ರ ಸರ್ಕಾರದ ಬಜೆಟ್ಟಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಕಳೆದ ಬಾರಿಯೂ ಕರ್ನಾಟಕಕ್ಕೆ ಅದರಲ್ಲೂ ಚಿತ್ರದುರ್ಗದ ಯಾವ ಅನುಕೂಲವು ಆಗಿಲ್ಲ ಬಿಜೆಪಿ ಜೆಡಿಎಸ್ ಸೇರಿಕೊಂಡು ರಾಜ್ಯದಲ್ಲಿ 19 ಸಂಸದರು ಗೆದ್ದಿದ್ದಾರೆ ಕಾಂಗ್ರೆಸ್ ನವರ ಜೊತೆ ಕೈಜೋಡಿಸಿ ಅಭಿವೃದ್ಧಿಗೆ ಹಣ ತರಬೇಕು ಕರ್ನಾಟಕದ ಮಾಧ್ಯಮ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಇವರುಗಳು ಕೇಂದ್ರಕ್ಕೆ ಅರ್ಜಿ ಕೊಡುತ್ತಿರುವುದು ನಗೆಪಾಟು ಮಾಡಿದೆ ಅವರದೇ ಪಕ್ಷ ಕೇಂದ್ರದಲ್ಲಿರುವಾಗ ಹಣ ತರಲು ಏಕೆ ನಿಮ್ಮ ಕೈಯಲ್ಲಿ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಸಂಸದರು ಬರಿ ಬೂಟಾಟಿಕೆ ಸಾಕು ಇನ್ನು ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಬೇಡಿ ಪರಿಹಾರ ಕೊಡಬೇಕು ಬರೀ ನಿಮ್ಮ ಕಣ್ಣಿಗೆ ಬಿಹಾರ ಆಂಧ್ರ ಕ್ಕೆ ಮಾತ್ರ ಬಜೆಟಿನಲ್ಲಿ ಹೆಚ್ಚಿನ ಆದ್ಯತೆ ನೀಡಿರುವುದು. ಕೇಂದ್ರ ಸರ್ಕಾರ ರಾಜ್ಯಕ್ಕೆ ನಿರಂತರವಾಗಿ ಮೋಸ ಮಾಡಿಕೊಂಡು ಬರುತ್ತಿದೆ ಅರ್ಧಕ್ಕೆ ನಿಂತಿರುವುದು ಬಹಳ ಸೂಚನೀಯವಾಗಿದೆ.
ಕೇಂದ್ರ ಸರ್ಕಾರವು ಹೇಗಾಗಲೇ ಘೋಷಣೆ ಮಾಡಿರುವ ಹಣವನ್ನು ಬಿಡುಗಡೆಗೊಳಿಸಲಿ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಿ ಸುಳ್ಳು ಹೇಳಿ ಚುನಾವಣೆಯಲ್ಲಿ ಮತ ಪಡೆದಿರುವ ಬಿಜೆಪಿ ಈಗ ಅದರ ವಿಚಾರವನ್ನು ಎತ್ತುತ್ತಿಲ್ಲ ನೀರವರಿಗೆ ಬಿಡುಗಡೆಗೊಳಿಸಿರುವ 5300 ಕೋಟಿ ರೂಪಾಯಿಗಳನ್ನು ಸಂಸದರು ಚಿತ್ರದುರ್ಗಕ್ಕೆ ತರಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಪ್ರಾದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ, ವಿಜಯಕುಮಾರ್ ಮಾತನಾಡುತ್ತ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ್ ಜಿಲ್ಲೆಗೆ ಯಾವಾಗ ಬಂದರು ಕಪ್ಪುಪಟ್ಟಿ ಧರಿಸಿ ಬಹಿಷ್ಕಾರ ಹಾಕುತ್ತಿರುವ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಉಳಿದಿರುವುದು ಕಾಂಗ್ರೆಸ್ ನಿಂದ ಮಾತ್ರ ಕೇಂದ್ರ ಸರ್ಕಾರದ ಬಜೆಟ್ ಶ್ರೀಮಂತರ ಪರವಾಗಿದೆ ಜಿಲ್ಲೆಗೆ ಯಾವುದೇ ಅನುದಾನವು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ ಕೆ ತಾಜ್ಪೀರ್, ಕಾರ್ಯಧ್ಯಕ್ಷ ಕೆಎಂ ಹಾಲಸ್ವಾಮಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಪಿ ಸಂಪತ್ ಕುಮಾರ್, ಡಿ.ಎನ್ ಮೈಲಾರಪ್ಪ, ಕರ್ನಾಟಕ ರಾಜ್ಯ ಆದಿ ಜಾಂಬವ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿಎಸ್ ಮಂಜುನಾಥ್, ಚಿತ್ರದುರ್ಗ ನಗರ ಪ್ರಾಧಿಕಾರ ಮಾಜಿ ಅಧ್ಯಕ್ಷ ಆರ್ ಕೆ ಸರ್ದಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಜಯಮ್ಮ ಬಾಲರಾಜ್, ಮಹಿಳಾ ಕಾರ್ಯದರ್ಶಿ ಕಾಂಗ್ರೆಸ್ ಅಧ್ಯಕ್ಷ ಗೀತಾ ನಂದಿನಿ ಗೌಡ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಮುನಿರಾ ಮುಕ್ದಾರ್, ಮೋಕ್ಷ ರುದ್ರ ಸ್ವಾಮಿ, ರುದ್ರಣಿ ಗಂಗಾಧರ್, ಭಾಗ್ಯಮ್ಮ, ಸೇವಾದಳದ ಇಂದಿರಾ ಸುಧಾ ಸೈಯದ್ ವಾಲಿ ಖಾದ್ರಿ, ಯು.ಲಕ್ಷ್ಮೀಕಾಂತ್, ಪ್ರಕಾಶ್ ರಾಮ ನಾಯಕ್, ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾಧ್ಯಕ್ಷ ಬಿ ಮಂಜುನಾಥ್, ಚೋಟು, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಡಿ ಎನ್ ಕುಮಾರ್, ಮಹಮದ್ ಫಕ್ರುದ್ದೀನ್, ಟಿ ರಂಗಯ್ಯ, ಖಾದಿ ರಮೇಶ್, ಮೋಹನ್ ಪೂಜಾರಿ, ನಗರಸಭೆ ಮಾಜಿ ಅಧ್ಯಕ್ಷ ಸಿ ಟಿ ಕೃಷ್ಣಮೂರ್ತಿ, ಪಿಳ್ಳೇಕನಹಳ್ಳಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್ ಶಿವಣ್ಣ, ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.