ಬೆಂಗಳೂರು : ನಗರದಲ್ಲಿ ನಾಯಿ ಮಾಂಸದ ವದಂತಿಗೆ ಹರಳುತ್ತಿದ್ದಂತೆ ಮಾಂಸ ಎಂದರೆ ಒಂದು ಕ್ಷಣ ಯೋಚಿಸುವ ಪರಿಸ್ಥಿತಿ ಜನರ ಮನಸ್ಸಿನಲ್ಲಿ ನಿರ್ಮಾಣವಾಗಿದೆ ಇನ್ನು ವದಂತಿ ಬೆನ್ನಲ್ಲೇ ಆಹಾರ ಸಂರಕ್ಷಣಾ ಇಲಾಖೆ ಅಗತ್ಯ ಕ್ರಮಕ್ಕೆ ಮುಂದಾಗಿದ್ದು ಬೆಂಗಳೂರಿನ ಮಟನ್ ಅಂಗಡಿಗಳಲ್ಲೇ ಪರಿಶೀಲನೆ ನಡೆಸಲು ತೀರ್ಮಾನಿಸಿದೆ.
ಅಂಗಡಿಗಳಲ್ಲಿ ಮಟನ್ ಸ್ವಚ್ಛತೆ ಮತ್ತು ಕೋಲ್ಡ್ ಸ್ಟೋರೇಜ್ ನಲ್ಲಿ ಮಾಂಸ ಎಷ್ಟು ಸೇಫ್ಟಿ ಎಂಬ ಬಗ್ಗೆ ಪರಿಶೀಲನೆ ಮಾಡಲು ಇಲಾಖೆ ಸಿದ್ದತೆ ನಡೆಸಿದೆ ಇದಕ್ಕೆ ಬೆಂಗಳೂರಿನ ಹಳವಡೆ ಸ್ಯಾಂಪಲ್ ಗಳು ಸಹ ಸಂಗ್ರಹಿಸಲಾಗಿದೆ ಇನ್ನು ಈ ವದಂತಿ ಬೆನ್ನಲ್ಲೇ ಹೋಟೆಲ್ ಮಾಲೀಕರು ಕಳವಳ ವ್ಯಕ್ತಪಡಿಸಿದ್ದು ತಾವೇ ಖುದ್ದಾಗಿ ಮಾಂಸ ಖರೀದಿಗೆ ಮುಂದಾಗಿದ್ದಾರೆ.
ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜವಾಗುತ್ತಿದ್ದ ಮಾಂಸ ನಾಯಿಯದು ಎಂಬ ಆರೋಪವನ್ನು ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರು ಆರೋಪ ಮಾಡಿದ್ದರು ಇದೇ ವಿಚಾರವಾಗಿ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಮಾಂಸವಿದ್ದ ಬಾಕ್ಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದರು ಇದರ ಬೆನ್ನಲ್ಲೇ ಮಾಂಸದ ಕ್ವಾಲಿಟಿ ಬಗ್ಗೆ ಪ್ರಶ್ನಿಸಿ ಎಂದಿದ್ದ ಈ ಘಟನೆಯಿಂದ ಅಲರ್ಟ್ ಆಗಿರುವ ಆಹಾರ ಮತ್ತು ಸುರಕ್ಷಾ ಇಲಾಖೆ ಬೆಂಗಳೂರಿನ ಮಟನ್ ಅಂಗಡಿಗಳ ಪರಿಶೀಲನೆಗೆ ಮುಂದಾಗಿದೆ.
ಬೆಂಗಳೂರಿನ ಎಲ್ಲಾ ಪ್ರದೇಶದ ಮಟನ್ ಅಂಗಡಿಗಳು ದೊಡ್ಡ ಹೋಟೆಲ್ ಮತ್ತು ದೊಡ್ಡ ಮಟನ್ ಶಾಪ್ ಗಳಲ್ಲಿ ಮಾಂಸವನ್ನು ಕೋಲ್ಡ್ ಸ್ಟೋರೇಜ್ ನಲ್ಲಿ ಶೇಖರಣೆ ಮಾಡುತ್ತಿದ್ದಾರೆ ಕೋಲ್ಡ್ ಸ್ಟೋರೇಜ್ ಮಾಂಸದ ಕ್ವಾಲಿಟಿ ಚೆಕ್ ಮಾಡಲಿದೆ 18 ಡಿಗ್ರಿ ಸೆಲ್ಸಿಯಸ್ ಇದ್ದಾರೆ ಎಂಟರಿಂದ 10 ತಿಂಗಳ ಕಾಲ ತಿನ್ನಬಹುದೇಂದಿದೆ ನಾಲ್ಕು ಡಿಗ್ರಿ ಸೆಲ್ಸಿಯಸ್ ಇದ್ದರೆ ಮಾಂಸ ಚೆನ್ನಾಗಿರಲಿದೆ ಹೀಗಾಗಿ ಕೋಲ್ಡ್ ಸ್ಟೋರೇಜ್ ಮಾಡಲಾಗುತ್ತಿದೆ ಇದರಿಂದ ರಾಜಸ್ತಾನದಿಂದ ಬಂದಿರುವ ಮಾಂಸ ಯಾವ ಪ್ರಾಣಿ ಅದು ಎಂದು ತಿಳಿಯಲು ಹೈದರಾಬಾದಿನ ಎಸ್ಎಫ್ಎಲ್ ಲ್ಯಾಬ್ ಗೆ ಕಳಿಸಲಾಗಿದೆ ಈ ಬಗ್ಗೆ ವರದಿ ಬರಲು 10 ರಿಂದ 14 ದಿನಗಳು ಬೇಕಾಗಿದ್ದು ಈ ಅವಧಿಯಲ್ಲಿ ನಗರದ ಮಾಂಸದ ಅಂಗಡಿಗಳ ಪರಿಶೀಲನೆ ನಡೆಯುತ್ತಿದೆ ಎಂದು ಆಹಾರ ಸುರಕ್ಷಾ ಇಲಾಖೆ ತಿಳಿಸಿದೆ.