Breaking
Mon. Dec 23rd, 2024

ಮೆಟ್ರೋ, ಡಿ.ಆರ್.ಡಿ.ಓ, ಐ.ಐ.ಎಸ್.ಸಿ ಬ್ಲಾಸ್ಟ್ ಮಾಡುತ್ತೇನೆಂದು ಯುವಕ ವಿಡಿಯೋದಲ್ಲಿ ಬೆದರಿಕೆ…;

ಚಿತ್ರದುರ್ಗ : ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಕೆಲಸ ಮಾಡುತ್ತಿರುವ ಪೃಥ್ವಿರಾಜ್ ಎಂಬ ಚಿತ್ರದುರ್ಗದ ಯುವಕ ಪೊಲೀಸರ ವಿರುದ್ಧ ವಾಗ್ದಾಳಿ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸುದ್ದಿ ಮಾಡುತ್ತದೆ. ಈ ವೇಳೆ ಬೆದರಿಕೆ ಕೂಡ ಹಾಕಿದ್ದಾನೆ ನ್ಯಾಯ ಸಿಗದಿದ್ದರೆ ನಾನು ಟೆರರಿಸ್ಟ್ ಆಗುತ್ತೇನೆ ನನ್ನನ್ನು ಅರೆಸ್ಟ್ ಮಾಡಿದರೆ ದರ್ಶನ್ ಪಕ್ಕದ ಸೆಲ್ ಗೆ ಹಾಕಿ ಎಂದು ದರ್ಪ ಮೆರೆದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

ಮೆಟ್ರೋ, ಡಿ.ಆರ್.ಡಿ.ಓ, ಐ.ಐ.ಎಸ್.ಸಿ ಬ್ಲಾಸ್ಟ್ ಮಾಡುತ್ತೇನೆಂದು ಯುವಕ ವಿಡಿಯೋದಲ್ಲಿ ಬೆದರಿಕೆ ಹಾಕಿರುವುದು ಅಕಸ್ಮಾತ್ ನನ್ನನ್ನು ಬಂಧಿಸಿದರೆ ದರ್ಶನ್ ಇರುವ ಸೆಲ್ಫ್ ಪಕ್ಕಕ್ಕೆ ಹಾಕಿ ಎಂದು ಮನವಿ ಮಾಡಿದ್ದಾನೆ. ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ಪಟ್ಟಣದ ಗಾಂಧಿನಗರದ ಪೃಥ್ವಿರಾಜ್ ಎಂಬ ಯುವಕ ಈ ವಿಡಿಯೋ ಸದ್ಯ ಬಾರಿ ವೈರಲ್ ಆಗುತ್ತಿದೆ. ಪೃಥ್ವಿರಾಜ್ ಕೆಲ ದಿನಗಳ ಹಿಂದೆ ನಪತೆಯಾಗಿದ್ದಾನೆ ಎಂಬ ಈ ಬಗ್ಗೆ ಗೊಂದಲಕೊಳಗಾದ ಪೃಥ್ವಿರಾಜ್ ತಾಯಿ, ನಾಲ್ಕು ದಿನಗಳ ಹಿಂದೆ ಚಳ್ಳಕೆರೆ ಪೊಲೀಸ್ ಠಾಣೆಗೆ ಹೋಗಿ ನನ್ನ ಪುತ್ರ ಪೃಥ್ವಿರಾಜ್ ನಾಪತ್ತೆಯಾಗಿದ್ದಾನೆ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ದೂರು ನೀಡಿದರು ಆದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು ದೂರು ಸ್ವೀಕರಿಸದೆ ವಾಪಸ್ ಕಳಿಸಿದ್ದಾರೆ.

ಬಳಿಕ ಕೆಲ ದಿನಗಳ ನಂತರ ಪೃಥ್ವಿರಾಜ್ ವಾಪಸ್ ಮನೆಗೆ ಬಂದಿದ್ದು ತಾಯಿಯೇ ನನ್ನ ಮಗನ ಬಳಿ ಪೊಲೀಸ್ ಠಾಣೆಯಲ್ಲಿ ಆದ ವಿಚಾರವನ್ನು ತಿಳಿಸಿದರು ತನ್ನ ತಾಯಿಯ ದೂರು ಪಡೆಯದ ಪೊಲೀಸರು ವಾಪಸ್ ಕಳಿಸಿದ್ದಕ್ಕೆ ಕೆಂಡವಾಗಿದ್ದ ಪೃಥ್ವಿರಾಜ್ ಚಳಕೆರೆ ಪೊಲೀಸ್ ಠಾಣೆಗೆ ತೆರಳಿ ವಿಡಿಯೋ ಮಾಡಿದ್ದಾನೆ ದೂರು ಏಕೆ ಸ್ವೀಕರಿಸಿಲ್ಲ ಎಂದು ಪ್ರಶ್ನಿಸಿದ್ದಾನೆ ಪೊಲೀಸರು ಮೊಬೈಲ್ ಆಫ್ ಮಾಡು ಎಂದರು ಮಾತು ಕೇಳುತ್ತಿರಲಿಲ್ಲ ಕೊನೆಗೆ ಪೃಥ್ವಿರಾಜ್ ನನ್ನು ಹಿಡಿದು ಮೊಬೈಲ್ ಕಸಿದುಕೊಂಡು ಪೊಲೀಸರು ಬುದ್ಧಿ ಹೇಳಿ ಕಳಿಸಿದ್ದಾರೆ.

ಪೃಥ್ವಿರಾಜ್ ಪೊಲೀಸ್ ಠಾಣೆಯಿಂದ ಮತ್ತೊಂದು ವಿಡಿಯೋ ಮಾಡಿದ್ದಾನೆ ನಾವು ಪೊಲೀಸರಿಗೆ ಪ್ರಶ್ನೆ ಮಾಡಿದ್ದಕ್ಕೆ ಪೊಲೀಸರು ನನಗೆ ನಾಯಿಗೆ ಹೊಡದಂತೆ ಒಡೆಯುತ್ತಿದ್ದಾರೆ ನನ್ನ ತಾಯಿಯ ಎದುರೇ ಠಾಣೆಯೊಳಗೆ ಹಿಡಿದುಕೊಂಡು ಅಲ್ಲೇ ಮಾಡಿದ್ದಾರೆ ನಾನು ಎಸ್ ಪಿ ಡಿ ಸಿ ಬಳಿ ಹೋಗಿ ನ್ಯಾಯ ಕೇಳುತ್ತೇನೆ ನ್ಯಾಯ ಸಿಗದಿದ್ರೆ ನಾನು ಏನು ಮಾಡಬೇಕೆಂದು ಗೊತ್ತಾಗುತ್ತಿದೆ ಡಿಪ್ಲೋಮೋ ಇನ್ ಕಂಪ್ಲೇಟ್ ಆದರೂ ಎಲೆಕ್ಟ್ರಿಕಲ್ ಕೆಲಸ ಗೊತ್ತು ಬೆಂಗಳೂರಿನ ಮುಖ್ಯ ಕೇಂದ್ರಗಳಲ್ಲಿ ಎಲ್ಲಿಂದ ವಿದ್ಯುತ್ ಕನೆಕ್ಷನ್ ಆಗುತ್ತಿದೆ. ಅಂತ ಗೊತ್ತು. ರಾಜಾ ಭವನ, ವಿಧಾನಸೌಧ, ಮೆಟ್ರೋ, ಇಸ್ರೋ, ಡಿ.ಆರ್‌.ಡಿ.ಓ ಎಲ್ಲಾ ಗೊತ್ತು ಎಲ್ಲಿ ಏನು ಮಾಡಿದರೆ ಬ್ಲಾಸ್ಟ್ ಆಗುತ್ತೆ ಅನ್ನೋದು ಗೊತ್ತು ನ್ಯಾಯ ಸಿಗದಿದ್ರೇ ನಾನು ಟೆರರಿಸ್ಟ್ ಆಗುತ್ತೇನೆಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೃಥ್ವಿರಾಜ್ ಹರಿಬಿಟ್ಟಿದ್ದಾನೆ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

 

Related Post

Leave a Reply

Your email address will not be published. Required fields are marked *