Breaking
Mon. Dec 23rd, 2024

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಜನರಲ್ ಸರ್ಜನ್ ಡಾ. ಸಾಲಿ ಮಂಜಪ್ಪ ಸೇವೆಯಿಂದ ಅಮಾನತು….!

ಚಿತ್ರದುರ್ಗ : ಜಿಲ್ಲಾಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿರುವ ಸಾಲಿ ಮಂಜಪ್ಪನವರು ಸಾರ್ವಜನಿಕ ಉಚಿತ ಸೇವೆಗಾಗಿ ಬರುವ ರೋಗಿಗಳ ಬಳಿ ಶಸ್ತ್ರ ಚಿಕಿತ್ಸೆಗಾಗಿ ಹಣದ ಬೇಡಿಕೆ ಇಟ್ಟು ಸರ್ಕಾರಿ ವೈದ್ಯ ಹುದ್ದೆಗೆ ಅವಮಾನ ಮಾಡಿರುವ ಇವರು ಸರ್ಕಾರದ ನಿಯಮ ಉಲ್ಲಂಘನೆ ಮಾಡಿ ಕರ್ತವ್ಯ ಲೋಪ ಎಸೆಗಿರುವುದು ಸಾಬೀತಾಗಿದೆ. ವಿಡಿಯೋ ಚಿತ್ರೀಕರಣಗೊಂಡು ಮಾಧ್ಯಮಗಳಲ್ಲಿ ಪ್ರಸಾರವಗುವುದರಿಂದ ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತು ಮಾಡಲಾಗಿದೆ. 

ಜಿಲ್ಲಾ ಸರ್ಜನ್ ಸಾಲಿ ಮಂಜಪ್ಪ ಅವರು ರೋಗಿಯ ಬಳಿ 6,000 ಲಂಚಕ್ಕೆ ಬೇಡಿಕೆ ಇಟ್ಟರು ಕೊನೆಗೆ 4000 ಹಣ ಪಡೆದು ಲಂಚ ಪಡೆಯುವಾಗ ದೃಶ್ಯಾವಳಿಯಲ್ಲಿ ರೋಗಿಯ ಸಂಬಂಧಿ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ರಾಜ್ಯ ಆರೋಗ್ಯ ಇಲಾಖೆಯು ಜುಲೈ 28ರಂದು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. 

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸ ನಾಯಕರ ಹಟ್ಟಿ ಮೂಲದ ಚಂದ್ರಶೇಖರ್ ಎಂಬ ವ್ಯಕ್ತಿಯಿಂದ ಲಂಚ ಸ್ವೀಕರಿಸುತ್ತಿದ್ದರು. ಲಂಚ ಸ್ವೀಕರಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆಗೂ ಕಾರಣವಾಯಿತು. ಕಳೆದ ಜುಲೈ 25ರಂದು ಮಹಾ ನಾಯಕ ದಲಿತ ಸೇನೆಯು ಸರ್ಜನ್ ಅವರ ವಿರುದ್ಧ ಕ್ರಮ ಆಗ್ರಹಿಸಿ ಚಿತ್ರದುರ್ಗ ಜಿಲ್ಲೆ ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಯ ವರೆಗೆ ಪ್ರತಿಭಟನೆ ನಡೆಸಿದರು. 

ತಮ್ಮ ವ್ಯಾಪ್ತಿಯ ಅಧಿಕಾರವನ್ನು ಚಲಾಯಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ರಂದೀಪ್ ಈ ಆದೇಶ ಹೊರಡಿಸಿದ್ದಾರೆ ಅಮಾನತಿನ ಅವಧಿಯಲ್ಲಿ ಆರೋಪಿ ವೈದ್ಯರು ನಿಯಮಾನುಸಾರ ಜೀವನಾಂಶ ಬತ್ತೆಗೆ ಅರ್ಹರಾಗಿರುವುದರಿಂದ ಅವರು ಶಿವಮೊಗ್ಗ ಜಿಲ್ಲೆಯ ಸೊರಬದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು ಅಮಾನತ್ತಿನ ಅವಧಿಯಲ್ಲಿ ತಮ್ಮ ಕೇಂದ್ರದ ಸ್ಥಾನವನ್ನು ಬಿಟ್ಟು ಕೊಡುವ ಮುನ್ನ ಪೂರ್ವವಾನಮತಿ ಪಡೆಯಬೇಕೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

 

Related Post

Leave a Reply

Your email address will not be published. Required fields are marked *