ಬೆಂಗಳೂರು : ವ್ಯಾಪಾರಿ ಒಬ್ಬರಿಂದ ಮೂರು ಟನ್ ಟೊಮೊಟೊ ಪಡೆದು 30 ಲಕ್ಷ ರೂಪಾಯಿ ಹಣ ನೀಡದೆ ವಂಚನೆ ಮಾಡಿರುವ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟು 32 ಲಕ್ಷ ರೂಪಾಯಿ ಪೈಕಿ 20 ಲಕ್ಷ ರೂಪಾಯಿ ಗಳಿಸಿದ ಆರೋಪಿಗಳು ಹಣದಲ್ಲಿ ಬಿಳಿ ಹಾಳೆ ಇಟ್ಟು ಮೋಸ ಮಾಡಿದ್ದಾರೆಂದು ಸಂಜಯ್ ಮತ್ತು ಮುಕೇಶ್ ಎಂಬುವರು ವಿರುದ್ಧ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಆದಿತ್ಯ ದೂರು ದಾಖಲಿಸಿದ್ದಾರೆ. ಆದಿತ್ಯ ಶಾ ಎಂಬುವವರು ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೊಟೊ ವ್ಯಾಪಾರಸ್ಥರಾಗಿದ್ದು ಪಶ್ಚಿಮ ಬಂಗಾಳದ ಸಿಲಿಗಿರಿ ಮಾರುಕಟ್ಟೆ ನ ಮುಕೇಶ್ ಎಂಬುವರಿಗೆ ಆದಿತ್ಯ ಮೂರು ಲೋಡು ಟೊಮೇಟೊ ಕಳಿಸಿದ್ದರು.
ಮುಕೇಶ್ ಬೆಂಗಳೂರಿನ ಸಂಜಯ್ ಎಂಬತನ ಬಳಿ ಹಣ ಕಳಿಸುವುದಾಗಿ ಹೇಳಿದಂತೆ 15ರಂದು ಸಂಜಯ್ ವೈಟ್ ಫೀಲ್ಡ್ ಬಳಿ ಹಣದ ಬ್ಯಾಗು ತೆಗೆದುಕೊಂಡು ಬಂದಿದ್ದ ಅವರು ಹಣ ಇದೆ ಎಂದು ತೆಗೆದು ತೋರಿಸಿದ ಆದಿತ್ಯ 500 ಮುಖಬೆಲೆಯ ನೋಟಿನ ಮೇಲೆ ಆಕ್ಸಿಸ್ ಬ್ಯಾಂಕ್ ಸೇಲ್ ಕವರ್ ನೋಡಿ ಮನೆಗೆ ತೆಗೆದುಕೊಂಡು ಹೋದರು ನಂತರ ಮನೆಯಲ್ಲಿ ಹಣ ಎಣಿಕೆ ಮಾಡುವಾಗ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ ಮತ್ತು ಕೆಳಗೆ ಅಸಲಿ ನೋಟುಗಳನ್ನು ತುಂಬಿದ್ದು ಮೋಸ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ವ್ಯಾಪಾರಿಯಿಂದ ಮೂರು ಟನ್ ಟೊಮೊಟೊ ಪಡೆದು ಬದಲಿಗೆ 30 ಲಕ್ಷ ಹಣ ನೀಡಿರುವುದಾಗಿ ವಂಚನೆ ಮಾಡಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಈ ಬಗ್ಗೆ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪಶ್ಚಿಮ ಬಂಗಾಳದ ಸಿಲಿಗುರಿ ಮಾರುಕಟ್ಟೆಗೆ ಟೊಮೆಟೊ ಕಳಿಸಲಾಗಿತ್ತು ಎಂದು ತಿಳಿಸಿದರು.