ಬೆಂಗಳೂರು : ನಗರದ ಬ್ಯಾಡರಣ್ಣಹಳ್ಳಿ ಮಹಿಳೆಯೊಬ್ಬರು ಪತಿಯು ಅಕ್ರಮ ಸಂಬಂಧ ಹೊಂದಿದ್ದು ಆರೋಪಿಸಿ ಲೈವ್ ವಿಡಿಯೋ ಮೂಲಕ ಮನನೊಂದು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ ಘಟನೆ ನಡೆದಿದೆ. ಮೃತ ದುರ್ದೈವಿ ಮಾನಸ 25 ವರ್ಷ ಎಂದು ಗುರುತಿಸಲಾಗಿದೆ.
ಮಾನಸ ಆರು ವರ್ಷದ ಹಿಂದೆ ದಿಲೀಪ್ ಎಂಬವರ ಜೊತೆ ವಿವಾಹವಾಗಿದ್ದರೂ ದಂಪತಿಗೆ ಐದು ವರ್ಷದ ಹೆಣ್ಣು ಮಗು ಇದೆ ಆದರೆ ದಿಲೀಪ್ 1.5 ವರ್ಷದಿಂದ ಬೇರೊಂದು ಮಹಿಳೆಯ ಸವಾಸವನ್ನು ಹೊಂದಿರುವ ಈ ವಿಚಾರಕ್ಕೆ ಪತಿ-ಪತ್ನಿಯ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿದ್ದು, ಮಾನಸ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾನಸ ಅಂದ್ರೆ ಹಳ್ಳಿ ಯ ಗಂಡನ ಮನೆಯಲ್ಲಿ ವಾಸವಾಗಿದ್ದರು ಭಾನುವಾರ ಸಂಜೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಘಟನೆ ಬಳಿಕ ದಿಲೀಪ್ ಮನೆಯವರ ವಿರುದ್ಧ ಮಾನಸ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತಿ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ. ಪೊಲೀಸ್ ಠಾಣಾ ಮುಂಭಾಗವೇ ಗಂಡನ ಕಡೆಯವರು ಅಲ್ಲೇ ಇದ್ದು ಬ್ಯಾಡರಾಯನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.