ಹೈದರಾಬಾದ್ : ಯುವಕನೊಬ್ಬ ಐಷಾರಾಮಿ ಜೀವನ ನಡೆಸಲು ಎಟಿಎಂಗೆ ತುಂಬಿಸಬೇಕಿದ್ದ ಬ್ಯಾಂಕ್‌ನ ಹಣ 2.20 ಕೋಟಿ ರೂ. ಹಣ ಹೊಡೆದಿದ್ದ. ಆದರೆ ಕೂಡಲೇ ಎಚ್ಚೆತ್ತ ಆತನನ್ನು ಹಿಡಿದು ಅಷ್ಟೂ ಹಣ ಜಪ್ತಿ ಮಾಡಿದ್ದಾರೆ.
ಅಶೋಕ್ ಕುಮಾರ್ ಬಂಧಿತ. ಇವನು ರಾಜಮಹೇಂದ್ರವರನ್ನ ಖಾಸಗಿ ಏಜೆನ್ಸಿಯೊಂದರಲ್ಲಿ ಎಟಿಎಂಗಳಲ್ಲಿ ಹಣ ತುಂಬಿಸುವ ಕೆಲಸ ಮಾಡುತ್ತಿದ್ದಾನೆ. ಶುಕ್ರವಾರ ತಾನು ಕೆಲಸ ಮಾಡುವ ಏಜೆನ್ಸಿ ನೀಡಿದ ಚೆಕ್ ಬ್ಯಾಂಕ್‌ಗೆ ಸಲ್ಲಿಸಿ 3.32.50,000 ರೂ. ಡ್ರಾ ಮಾಡಿದ್ದಾನೆ. ಇದರಲ್ಲಿ ಕೆಲವು ನೌಕರರಿಗೆ 1.12 ಕೋಟಿ ರೂ. ನೀಡಿ ಎಟಿಎಂಗೆ ತುಂಬಿಸುವಂತೆ ತಿಳಿಸಿ ಅಶೋಕ್ ಬಾಡಿಗೆ ಕಾರ್ನಲ್ಲಿ 2.20ಕೋಟಿ ರೂ.ನೊಂದಿಗೆ ಪರಾರಿಯಾಗಿದ್ದಾನೆ.
ಅಲ್ಲಿಂದ ಕಾರ್ ಮೂಲಕ ಅಂಬೇಡ್ಕರ್ ಕೋನಸೀಮಾ ಜಿಲ್ಲೆಯ ಕೊತಪೇಟ್ ತಲುಪಿದ ಆಸಾಮಿ ಕಾರಿನ ಬಳಿಗೆ 50 ಸಾವಿರ ರೂ. ಕೊಟ್ಟು, ತನ್ನ ಪ್ಲಾಟ್‌ನಲ್ಲಿ ಸ್ವಲ್ಪ ಹಣ ಮತ್ತು ಬೈಕ್‌ನಲ್ಲಿ ಪರಿಚಿತರೊಬ್ಬರ ಬಳಿ ಹೋಗಿ 9 ಲಕ್ಷ ರೂ. ನೀಡಿ ಹೊರಟಿದ್ದಾನೆ. ಆದರೆ ಈ ಗುರುತು ಸಿಗದಿರಲೆಂದು ಗಡ್ಡ, ಮೀಸೆ ತೆಗಿಸಿ ಮುಂದೆ ಮಂಡಪೇಟ ಬಳಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಪೊಲೀಸರು ತಡೆದು ಪರಿಶೀಲಿಸಿದ್ದಾರೆ.
ಆಗ ಅವನ ಬಳಿ | ಲಕ್ಷ ರೂ.ಸಿಕ್ಕಿದ್ದು, ಅನುಮಾನಗೊಂಡು ತಪಾಸಣೆ ನಡೆಸಿದಾಗ ಬ್ಯಾಂಕ್ ಹಣ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅಶೋಕನನ್ನು ಬಂಧಿಸಲಾಯಿತು. ಐಷಾರಾಮಿ ಜೀವನ ನಡೆಸಲು ಕಳ್ಳತನ ಮಾಡಿರುವುದನ್ನು ಆರೋಪಿ ತನಿಖೆ ವೇಳೆ ತಿಳಿಸಬಹುದು ಎಸ್ಪಿ ನರಸಿಂಹಕಿಶೋರ್.