ಮಂಡ್ಯ : ಕೆಲವು ವರ್ಷಗಳಿಂದ ಸರಿಯಾಗಿ ಮಳೆಯಾಗದ ಕಾರಣ ಕಾವೇರಿ ಜಲಾಶಯವು ಬರಿದಾಗಿ ರೈತರಿಗೆ ಸಂಕಷ್ಟ ಒದಗಿಸಿತು ಆದರೆ ರಾಜ್ಯದಲ್ಲಿ ತಿಂಗಳಗಟ್ಟಲೆ ಮಳೆಯಾಗಿರುವುದು ಜಲಾಶಯ ಭರ್ತಿಯಾಗಿರುವುದರಿಂದ ಈ ಭಾಗದ ರೈತರಿಗೆ ಖುಷಿಯ ಸಂಭ್ರಮದ ವಾತಾವರಣ ಉಂಟು ಮಾಡಿದೆ. ಇಂತಹ ಸಂಭ್ರಮದಲ್ಲಿ ಅಧಿಕಾರಿಗಳು ಬಾಡೂಟ ಏರ್ಪಡಿಸಿ ಸಂಭ್ರಮಿಸಿರುವುದು ವಿಪರ್ಯಾಸವೇ ಸರಿ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಸಚಿವರು ಶಾಸಕರು ಇನ್ನು ಮುಂತಾದವರು ಕೆ ಆರ್ ಎಸ್ ಗೆ ಬಾಗಿನ ಅರ್ಪಣಾ ಮಾಡುವುದಕ್ಕೆ ಹೊರಟಾಗ ಇಲಾಕೆಯ ಅಧಿಕಾರಿಗಳು ಖಾಸಗಿ ಹೋಟೆಲ್ ನಲ್ಲಿ ಬಾಡೂಟ ಆಯೋಜಿಸಲಾಗಿದ್ದು ಇವರು ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ ಈ ಮೂಲಕ ಕಾವೇರಿ ನೀರಾವರಿ ನಿಗಮ ಅಧಿಕಾರಿಗಳು ಸಂಪ್ರದಾಯಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯವು ಭರ್ತಿಯಾಗಿದ್ದ ಪರಿಣಾಮದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಸಚಿವರು ಸೇರಿ ಬಾಗಿನ ಅರ್ಪಣೆಗೆ ತೆರಳಿದ್ದಾಗ ಇತ್ತ ಅಧಿಕಾರಿಗಳು ಜನಪ್ರಧಿಗಳ ಬೆಂಬಲಿಗರು ಆರ್‌ಎಸ್‌ನ ಖಾಸಗಿ ಹೋಟೆಲ್ ನಲ್ಲಿ ಭರ್ಜರಿ ಬಾಡೂಟ ಬ್ಯಾಟಿಂಗ್ ಮಾಡುವ ಮೂಲಕ ಸಾಂಪ್ರದಾಯವನ್ನು ಮುರಿದಿದ್ದಾರೆ ಎಂದು ಬಾಗಿನ ಸಲ್ಲಿಸುವ ದಿವಸ ಬಾಡೂಟವನ್ನು ಆಯೋಜಿಸುವ ಉದಾಹರಣೆಗಳೇ ಇಲ್ಲ.
ಆದರೆ ಇವರು ಇದೆ ಮೊದಲ ಬಾರಿಗೆ ಬಾಡೂಟವನ್ನು ಮಾಡಲಾಗಿದ್ದು ಈ ಮೂಲಕ ಕಾವೇರಿ ನೀರಾವರಿ ನಿಗಮ ಅಧಿಕಾರಿಗಳು ಇಂದು ಸಂಪ್ರದಾಯಕ್ಕೆ ಧಕ್ಕೆಯನ್ನು ಉಂಟು ಮಾಡಿ ಎಲ್ಲಾ ಕಟ್ಟುಪಾಡುಗಳನ್ನು ಮುರಿದಿದ್ದಾರೆ ಇದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ ಇನ್ನು ಇದಕ್ಕೆ ವಿಪಕ್ಷಗಳಾದ ಬಿಜೆಪಿ ಜೆಡಿಎಸ್ ಶಾಸಕರು ಏನು ಹೇಳುತ್ತಾರೋ ಎಂಬುದನ್ನು ಕಾದು ನೋಡಬೇಕು ಈ ರೀತಿ ಬಾಡೂಟ ಆಯೋಜಿಸಿ ಇರುವ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕೆಂಬುದನ್ನು ಇಲ್ಲಿನ ಜನರು ಒತ್ತಾಯ ಮಾಡಿದ್ದಾರೆ.