ಹಾಸನ : ಸಕಲೇಶಪುರ ತಾಲೂಕಿನ ಶಿರಡಿ ಘಾಟ್ ಬಳಿ ಇತ್ತೀಚಿಗೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು ಇದೀಗ ಮತ್ತೆ ಭಾರಿ ಭೂಕುಸಿತ ಉಂಟಾಗಿದ್ದು ಟ್ಯಾಂಕರ್ ಸೇರಿ ಮಣ್ಣಿನ ಅಡಿ ಸುಮಾರು ಆರು ವಾಹನಗಳು ಸಿಲುಕಿಕೊಂಡಿರುವ ಘಟನೆ ನಡೆದಿದೆ.
ಬಾರಿ ಮಳೆಯಿಂದ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಡಿ ಕ್ಯಾಟ್ ನಲ್ಲಿ ದೊಡ್ಡ ತೆಪ್ಪಲೆ ಬಳಿ ರಾಷ್ಟ್ರೀಯ ದಾರಿಯ 75ರಲ್ಲಿ ಭೂಕುಸಿತ ಸಂಭವಿಸಿದ್ದು ಹಲವು ವಾಹನಗಳು ಮಣ್ಣಿನಡಿ ಸಿಲುಕಿಕೊಂಡಿರುವ ಘಟನೆ ನಡೆದಿದ್ದು ಇದರಲ್ಲಿ ಎರಡು ಕಾರು ಒಂದು ಟ್ಯಾಂಕರ್ ಸೇರಿ ಆರು ವಾಹನಗಳು ಮಣ್ಣಿನಲ್ಲಿ ಸಿಕ್ಕಿ ಹಾಕಿಕೊಂಡಿದೆ ಎಂದು ತಿಳಿಸಲಾಗಿದೆ ಈ ಘಟನೆಯು ಸತತ ಮಳೆಯಿಂದ ದೊಡ್ಡ ತಪ್ಪಲೆ ಬಳಿ ಬಾರಿ ಪ್ರಮಾಣದ ಭೂಕುಸಿತ ಉಂಟಾಗಿದೆ.
ಹಾಸನದಲ್ಲಿ ಇದು ಮತ್ತೆ ಭಾರಿ ಪ್ರಮಾಣದ ಮಣ್ಣಿನ ಕುಸಿತ ಉಂಟಾಗಿದ್ದು ಈ ವೇಳೆಯಲ್ಲಿ ಕಾರಿನಲ್ಲಿ ಸಂಚರಿಸುತ್ತಿರುವಾಗ ಈ ಮಣ್ಣಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಸದ್ಯ ಕಾರ್ಯಾಚರಣೆ ಪ್ರಗತಿಯಲ್ಲಿದೆ ರಕ್ಷಣಾ ಸಿಬ್ಬಂದಿ ಜೆಸಿಬಿ ಮೂಲಕ ಮಣ್ಣು ತೆರವು ಮಾಡಿದ್ದಾರೆ ಸ್ಥಳದಲ್ಲಿ ಹೆಚ್ಚು ಆತಂಕದ ವಾತಾವರಣ ಉಂಟು ಮಾಡಿದೆ.
ಮಣ್ಣು ಕುಸಿತ ಉಂಟಾಗಿರುವುದರಿಂದ ಬಾರಿ ದೊಡ್ಡ ಅನಾಹುತವೇ ಸಂಭವಿಸುವ ಭೀತಿ ಎದುರಾಗಿದೆ ಹೀಗಾಗಿ ಸಮರೋಪಾದಿಯಲ್ಲಿ ಮಣ್ಣು ತೆರವು ಮಾಡಲು ಪ್ರಯತ್ನಿಸಲಾಗುತ್ತದೆ ಸದ್ಯ ಶರಡಿ ಘಾಟ್ ರಸ್ತೆಯಲ್ಲಿ ಸಂಚಾರ ಸಂಪೂರ ಸ್ಥಗಿತಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಿಗಿಂದ ಬರುತ್ತಿರುವ ವಾಹನಗಳನ್ನು ಗುಂಡ್ಯದಲ್ಲೇ ಪೊಲೀಸರು ತಡೆಯುತ್ತಿದ್ದಾರೆಂದು ಮಾಹಿತಿ ತಿಳಿಸಲಾಗಿದೆ.