ಚಿತ್ರದುರ್ಗ : ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯಕ್ಕೆ 974 ಕ್ಯೂಸಿಯಸ್ ಒಳಹರಿವು ನೀರು ಹರಿದು ಬಂದಿದ್ದು 130 ಅಡಿ ಸಂಗ್ರಹ ಸಾಮರ್ಥ್ಯವಿದೆ
ಜಲಾಶಯದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಳೆದ ಎರಡು ತಿಂಗಳ ಹಿಂದೆ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ.
ಚಿಕ್ಕಮಂಗಳೂರು ಜಿಲ್ಲೆಯ ಕೆರೆ ಬಾರಿ ಮಳೆಯಾಗುತ್ತಿರುವ ಕಾರಣಗಳು ವಿವಿ ಸಾಗರ ಜಲಾಶಯಕ್ಕೆ ನೀರಿನ ಒಳಹರಿವು ಏರಿಕೆಯಾಗಿದೆ. ಇನನಿ ಪ್ರವಾಸಿ ತಾಣವು ಆಗಿರುವ ವಾಣಿವಿಲಾಸ ಸಾಗರ ಡ್ಯಾಮಿನಲ್ಲಿ ಸೋಮವಾರ 974 ಕ್ಯೂಸೆಕ್ ಒಳಹರಿವು ಕಂಡು ಬಂದಿದೆ.
ಚಿತ್ರದುರ್ಗ ಜಿಲ್ಲೆಯ ಅಷ್ಟಾಗಿ ಮಳೆ ಆಗಲಿಲ್ಲ ಆದರೆ ಚಿಕ್ಕಮಂಗಳೂರು ಅರಣ್ಯ ಪ್ರದೇಶಗಳಲ್ಲಿ ಮಳೆ ನೀರು ಆಸರೆಯಾಗಿದೆ ಈಗ ಅದೆಲ್ಲ ನದಿಯ ಕೆರೆಗಳು ಭರ್ತಿಯಾಗಿ ವೇದಾವತಿ ನದಿ ಹರಿಯುತ್ತಿವೆ. ಈ ನೀರು ಮುಂದಿನ ನೀರಾವರಿಗೆ ಮತ್ತು ಕುಡಿಯಲು ಅನುಕೂಲವಾಗಿದೆ.
ಬರ ಪ್ರದೇಶ ಅಂತಲೇ ಕರೆಸಿಕೊಂಡಿರುವ ಈ ಭಾಗದ ವಾಣಿವಿಲಾಸ ಮೇರೆ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ವ್ಯಾಪ್ತಿಯ ಜನರಿಗೆ ನೀರು ನೀಡುವ ಡ್ಯಾಂಗೆ ಚಿಕ್ಕಮಂಗಳೂರು ಸಮೀಪದ ಅಯ್ಯನಕೆರೆಯಿಂದ ನೀರು ಬಂದಿದೆ. ಮಳೆಯಿಂದಾಗಿ ಅಯ್ಯನಕೆರೆ ನದಿಯ ಒಳಹರಿವು ಹೆಚ್ಚಾಗಿದ್ದು ಅದು ವೇದಾವತಿ ನದಿಗೆ ಬಂದು ಸೇರುತ್ತದೆ.