ಚಿತ್ರದುರ್ಗ : ಗ್ರಾಮ ಪಂಚಾಯಿತಿ ಪಿಡಿಒ ಶ್ರೀದೇವಿ ಎಂಬ ಸಾರ್ವಜನಿಕರಿಂದ ಹಣ ದುರುಪಯೋಗ ಪಡಿಸಿಕೊಂಡು ಸರ್ಕಾರಕ್ಕೆ ಕರ್ತವ್ಯ ಲೋಪ ಯಾಸಗಿದ್ದಾರೆ ಎಂಬ ಆರೋಪದ ಅಡಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ ಹಾಗೂ ಶ್ರೀದೇವಿ ವಿರುದ್ಧ ವಿಚಾರಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಭರಮಸಾಗರ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀದೇವಿ ಅವರಿಗೆ ಕಾನೂನು ಬಹಿರಂಗ ಸಾರ್ವಜನಿಕರ ವಿರೋಧಿ ಸರ್ವಾಧಿಕಾರಿ ಧೋರಣೆಯಿಂದ ಕರ್ತವ್ಯ ನಿರ್ವಹಣೆ ಆಡಳಿತ ಮಂಡಳಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಯಾವುದೇ ಬೆಲೆ ಕೊಡದೆ ಕಚೇರಿಯ ನೌಕರರ ಸಿಬ್ಬಂದಿಗಳು. ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕ ಪಕ್ಷಿಯಾಗಿ ಆಡಳಿತ ನಿರ್ವಹಿಸುತ್ತಿದ್ದಾರೆ ಎಂದು ದೂರು ದಾಖಲಾಗಿದೆ.
ಗ್ರಾಮ ಪಂಚಾಯಿತಿಯ ವಿವಿಧ ಕೆಲಸಗಳಿಗೆ ಬರುವ ಸಾರ್ವಜನಿಕರಿಂದ ರಶೀದಿ ಹಣ ಪಡೆದು ಗ್ರಾಮ ಪಂಚಾಯಿತಿಗೆ ಜಮಾ ಮಾಡದೆ ಹಣ ದುರುಪಯೋಗ ಮಾಡಿದ್ದು ಕೆಲವು ಈ ಸ್ವತ್ತುಗಳ ವಿತರಣೆಯನ್ನು ಹಣಕ್ಕಾಗಿ ರಶೀದಿ ನೀಡದೆ ಸ್ವಂತ ಉಪಯೋಗಕ್ಕೆ ನೀಡಲಾಗಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷರು ಕಾರ್ಯದರ್ಶಿಗಳು ದೂರುಗಳ ಆಧಾರದ ಮೇಲೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಿಶೇಷ ತನಿಖೆ ನಡೆಸಿ ತನಿಖಾ ಸಲ್ಲಿಸಿದರು.
96,000 ಗಳಿಗೆ ಸಾರ್ವಜನಿಕರಿಂದ ಶುಲ್ಕ ಪಡೆದು ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಮ್ಯಾನುಯೆಲ್ ನಲ್ಲಿ ಜನರಲ್ ಲೈಸೆನ್ಸ್ ನೀಡಿರುವುದು ಗ್ರಾಮ ಪಂಚಾಯಿತಿಗೆ ಬರಬೇಕಾದ ಸಾರ್ವಜನಿಕ ಹಣದ ದುರುಪಯೋಗವಾಗಿದೆ ಎಂಬ ಹಂತ ಮೇಲ್ನೋಟಕ್ಕೆ ಕಂಡುಬಂದಿದೆ. ಆರೋಪಿಗಳ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ನೋಟಿಸ್‌ಗೆ ಪಿಡಿಓ ಶ್ರೀದೇವಿ ಅವರು ನೀಡಿರುವ ಉತ್ತರವು ಅಸಮಂಜಸವಾಗಿರುವುದರಿಂದ ನಿಯಮಾನುಸರ ಶ್ರೀದೇವಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.