ಬೆಂಗಳೂರು : ಗ್ಯಾರೆಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಮೇಲ್ವಿಚಾರಣೆಗೆ ರಚಿಸಲಾಗಿರುವ ಜಿಲ್ಲೆ ಮತ್ತು ತಾಲೂಕು ಮಟ್ಟದ ಸಮಿತಿಗಳ ಪದಾಧಿಕಾರಿಗಳಿಗೂ ಗೌರವ ಧನ ಮತ್ತು ಬತ್ತಿಯನ್ನು ನಿಗದೆಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸದಸ್ಯರ ಇರುವ ಸಮಿತಿಗಳಿಗೆ ತಿಂಗಳಿಗೆ ಗರಿಷ್ಠ ಎರಡು ಸಭೆಯನ್ನು ನಡೆಸಬಹುದು ಎಂದು ಈ ಮೂಲಕ ತಿಳಿಸಿದರು.
ಗ್ಯಾರಂಟಿ ಯೋಜನೆಗಳು ನಾನಾ ಇಲಾಖೆಯ ಮೂಲಕ ಅನುಷ್ಠಾನ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಮನ್ವಯ ಸಾಧಿಸುವ ದೃಷ್ಟಿಯಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ, ನೋಡಲು ಅಧಿಕಾರಿಯಾಗಿ ನೇಮಿಸಲಾಗಿದೆ ಜಿಲ್ಲಾ ಸಮಿತಿಗಳ ಸಭೆ ನಡೆಸಲು ಜಿಲ್ಲಾ ಪಂಚಾಯತ್ ಸಭಾಂಗಣ ಹಾಗೂ ತಾಲೂಕ ಪಂಚಾಯತ್ ಸಮಿತಿಗಳಲ್ಲಿ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು. ಬಿಬಿಎಂಪಿ ಅನುಷ್ಠಾನ ಸಮಿತಿಗೆ ವಿಶೇಷ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿದ್ದು ಪ್ರಧಾನ ಕಛೇರಿ ಆವರಣದಲ್ಲಿ ಸಭೆಗೆ ಬೇಕಾದ ಪೀಠೋಪಕರಣಗಳ ವ್ಯವಸ್ಥೆ ನಿಭಾಯಿಸಲಾಗಿದೆ ಜಿಲ್ಲಾ ಸಮಿತಿಗಳಿಗೆ ಸಂಬಂಧಿಸಿದ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಕಚೇರಿ ವ್ಯವಸ್ಥೆ ಹಾಗೂ ಅಗತ್ಯವಿರುವ ಪೀತಾಪಕರಣಗಳನ್ನು ಒದಗಿಸುವ ಹೊಣೆಯನ್ನು ಜಿಲ್ಲಾ ಪಂಚಾಯತ್ ಸಿಇಒ ಗೆ ನೀಡಲಾಗಿದೆ ಎಂದು ತಿಳಿಸಿದರು.
ತಾಲೂಕು ಸಮಿತಿ ಗಳಿಗೆ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಕಚೇರಿ ಹಾಗೂ ಪಿಠೋಪಕರಣಗಳನ್ನು ಒದಗಿಸುವ ವ್ಯವಸ್ಥೆ ಆಯಾ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳು ಮಾಡಲಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವರು ನಡೆಸುವ ಜಿಲ್ಲಾ ತ್ರೈಮಾಸಿಕ ಕೆಪಿಡಿ ಸಭೆಗೆ ಗ್ಯಾರಂಟಿ ಸಮಿತಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಆಹ್ವಾನಿಸಲಾಗಿದ್ದು ಕಡ್ಡಾಯವಾಗಿದೆ ತಾಲೂಕು ಮಟ್ಟದಲ್ಲಿ ಸ್ಥಳೀಯ ಶಾಸಕರು ನಡೆಸುವ ಕೆಪಿಡಿ ಸಭೆಗೆ ತಾಲೂಕು ಮಟ್ಟದ ಸಮಿತಿ ಅಧ್ಯಕ್ಷರನ್ನು ಆಹ್ವಾನಿಸಬೇಕೆಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಜಿಲ್ಲಾ ಸಮಿತಿಗಳಲ್ಲಿ ಅಧ್ಯಕ್ಷರು ಮಾಸಿಕ 40,000 ಗೌರವಧನ ನಿಗದಿಪಡಿಸಲಾಗಿದೆ ಉಪಾಧ್ಯಕ್ಷರಿಗೆ ಪ್ರತಿ ತಿಂಗಳು ಸಭೆಗೆ 1200 ಬತ್ತಿಯ ಒದಗಿಸಲಾಗಿದೆ ಹಾಗಾಗಿ ಸಮಿತಿ ಸದಸ್ಯರಿಗೆ 19 ಬತ್ತಿ ನೀಡಲಾಗುತ್ತದೆ ತಾಲೂಕು ಮಟ್ಟದಲ್ಲಿ ಅಧ್ಯಕ್ಷರಿಗೆ 25,000 ಮಾಸಿಕ ಗೌರವ ಧನ ನೀಡಲು ಆದೇಶ ಹೊರಡಿಸಿದೆ ಹಾಗಾಗಿ ತಾಲೂಕು ಸದಸ್ಯರಿಗೆ 1000 ಭತ್ಯೆ ನೀಡಲಾಗುವುದು. ಬಿಬಿಎಂಪಿ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ ಮಾಸಿಕ 40,000 ಗೌರವ ಧನ ನೀಡಲಾಗುತ್ತದೆ ಸದಸ್ಯರಿಗೆ ಪ್ರತಿ ಸಭೆಗೆ ಸಭಾ ಭತ್ಯೆಯಾಗಿ 1,200 ನೀಡಲಾಗುವುದು ಎಂದು ತಿಳಿಸಿದರು.