ಬೆಂಗಳೂರು : ಚಿತ್ರದುರ್ಗ ಮುರುಘಾ ರಾಜೇಂದ್ರ ಮಠದ ಹಣಕಾಸು ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚನೆ ಆರೋಪದಿಂದ ಎಸ್ ಕೆ ಬಸವರಾಜನ್ ಕೇಸ್ ನಲ್ಲಿ ಕುಲಾಸೆಗೊಂಡಿದ್ದಾರೆ. ಬೆಂಗಳೂರಿನ 42ನೇ ಎ.ಸಿ.ಎಂ.ಎಂ ನ್ಯಾಯಾಲಯವು ಎಸ್ ಕೆ ಬಸವರಾಜ ಅವರನ್ನು ವಂಚನೆ ಆರೋಪದಿಂದ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮುರುಘಾ ಮಠದ ಎಸ್.ಜೆ.ಎಂ ಕೋ ಆಪರೇಟಿವ್ ಸೊಸೈಟಿ ಹಣದಿಂದ ಆಸ್ತಿ ಖರೀದಿ ಮಾಡಿದ್ದಾರೆಂದು ಆರೋಪಿಸಿ ಬಸವರಾಜ ವಿರುದ್ಧ ದೂರು ದಾಖಲು ಮಾಡಲಾಗಿತ್ತು ಮಠದ ಪರವಾಗಿ ವಿಜಯಕುಮಾರ್ ಎನ್ನುವವರು 2013ರ ಆಗಸ್ಟ್ 16ರಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಈ ಪ್ರಕರಣವನ್ನು ಕೋರ್ಟ್ ವಜಾ ಮಾಡಿದೆ.
ಇದರಿಂದ ಮುರುಘರಾಜೇಂದ್ರ ಮಠದ ಹಣಕಾಸು ದುರುಪಯೋಗ ವಂಚನೆ ಆರೋಪದಿಂದ ಎಸ್ ಕೆ ಬಸವರಾಜನ ಅವರನ್ನು ಕುಲಾಸೆಗೊಂಡಿದ್ದಾರೆ. ಮಾಜಿ ಶಾಸಕರಾಗಿರುವ ಎಸ್ ಕೆ ಬಸವರಾಜನ್ ಅವರು ಮುರುಘಾ ಮಠದ ಮಾಜಿ ಆಡಳಿತ ಅಧಿಕಾರಿ ಆಗಿದ್ದರು 2008ರಲ್ಲಿ ಇವರು ಒಮ್ಮೆ ಜೆಡಿಎಸ್ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು ತದನಂತರ 2018ರಲ್ಲಿ ಇವರು ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಬಳಿಕ 2023ರಲ್ಲಿ ರಾಜ್ಯದ ವಿಧಾನಸಭಾ ಚುನಾವಣೆಗೆ ಇವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು ಆದರೆ ಹೈಕಮಾಂಡ್ ಟಿಕೆಟ್ ನೀಡಿರಲಿಲ್ಲ.