Breaking
Mon. Dec 23rd, 2024

ಕೊಡಗು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದ ಜಿಲ್ಲಾಧಿಕಾರಿ…!

ಕೊಡಗು : ಕರ್ನಾಟಕದ ಹಲವಡೆ ಬಾರಿ ಮಳೆಯಾಗುತ್ತಿದ್ದು ಉತ್ತರ ಕನ್ನಡ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಸೇರಿದಂತೆ, ಅಳವಡೆ ಗುಡ್ಡ ಕೋಸಿತ ಆಗಿ ಅವಘಡಗಳು ಸಂಭವಿಸಿವೆ ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಕೊಡಗು ಜಿಲ್ಲಾಡಳಿತ ಮುಂದಿನ ಎರಡು ದಿನಗಳಲ್ಲಿ ಕೊಡಗು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಿದ್ದು ಗುಡ್ಡ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದೆ ಇದರಿಂದ ಕೊಡಗು ಜಿಲ್ಲೆಯಲ್ಲಿ ಜನರು ಆತಂಕದಲ್ಲಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯ ವಿರಾಜ್ ಪೇಟೆ ತಾಲೂಕಿನ ಬೇತ್ರಿ ಗ್ರಾಮದಲ್ಲಿ ಬಾರಿ ಮಳೆಗೆ ಕಾವೇರಿ  ನೀರಿನಲ್ಲಿ ಸಿಲ್ಕ್ ಎದ್ದ ಆರು ಜನರನ್ನು ಹಾಗೂ ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ ಮನೆಯಲ್ಲಿದ್ದ ಆರು ಜನರ ಎರಡು ಜಾನುವಾರುಗಳು ಮತ್ತು ಎರಡು ನಾಯಿಗಳನ್ನು ಮಡಿಕೇರಿ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ ಪ್ರವಾಹದಿಂದ ದ್ವೀಪದಂತಾಗಿದ್ದು ಗ್ರಾಮದಲ್ಲಿ ನಿವಾಸಿಗಳು ಸಿಲುಕಿದ್ದರು, ಕೂಡಲೇ ಅಗ್ನಿಶಮಕ ಸಿಬ್ಬಂದಿ ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.

ಇನ್ನು ವರುಣನ ಆರ್ಭಟಕ್ಕೆ ತುಂಡಾಗಿ ಬಿದ್ದ ವಿದ್ಯುತ್ ತಂತೆ ತೊಳೆದು ಆರು ಜಾನುವಾರುಗಳು ಸಾವನಪ್ಪಿದ ಘಟನೆ ಪೊನ್ನಂ ಪೇಟೆ ತಾಲೂಕಿನ ತೆರಲು ಗ್ರಾಮದಲ್ಲಿ ನಡೆದಿದೆ ಮೃತ ಹಸುಗಳು ಬೊಜ್ಜಂಗಡ ನಟರಾಜ ಎಂಬವರಿಗೆ ಸೇರಿದ್ದು, ರೈತ ಕಂಗಾಲಾಗಿದ್ದಾನೆ ಜೊತೆಗೆ ಮಡಿಕೇರಿ ತಾಲೂಕಿನ ಪೆರಾಜೆ ಬಳಿ ಮಾಜಿ ಕೊಡಿ ಹೊಸ ಗದ್ದೆಯಲ್ಲಿ ಏಕಾಏಕಿ ಗುಡ್ಡ ಹೊಸತಿ ಬಿದ್ದು ಅಡಿಕೆ ತೋಟಗಳಿಗೆ ರಾಣಿ ಆಗಿದೆ ಯಾವುದೇ ಮನೆಗಳು ಇರದೇ ಇರುವುದರಿಂದ ಅನಾಹುತಗಳು ತಪ್ಪಿದೆ.

Related Post

Leave a Reply

Your email address will not be published. Required fields are marked *