ಚಿತ್ರದುರ್ಗ : ಭೀಮ ಸಮುದ್ರದಲ್ಲಿ ಇತ್ತೀಚಿಗೆ ಅತಿಯಾದ ಮಳೆಯಿಂದ ಜಯಣ್ಣ ಎಂಬವರ ಮನೆ ಕುಸಿದು ಬಿದ್ದಿದ್ದು ಸಂತ್ರಸ್ತ ಮನೆಗೆ ಮಾನ್ಯ ಶಾಸಕರಾದ ಕೆ ಸಿ ವೀರೇಂದ್ರ ಭೇಟಿ ನೀಡಿ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಪರಿಹಾರದ ಚೆಕ್ ವಿತರಿಸಿ ಮಾತನಾಡಿದ ಅವರು ಸರ್ಕಾರದಿಂದ ಚೆಕ್ ಕೊಟ್ಟಿದ್ದು ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಯಿಂದ ಬರುವ ಮನೆ ಮೃತಪಟ್ಟ ಮೇಕೆ ಗಳಿಗೆ ಪಶು ಇಲಾಖೆಯಿಂದ ಒಂದಕ್ಕೆ 5000 ಬರುತ್ತದೆ ಆದ್ದರಿಂದ ಇನ್ನೂ ಹೆಚ್ಚಿನ ಸಹಾಯ ಮಾಡೋದಾಗಿ ತಿಳಿಸಿದರು.
ಕೆಲವು ದಿನಗಳ ಹಿಂದೆ ಅಷ್ಟೇ, ಅತಿಯಾದ ಮಳೆಯಿಂದ ಜಯಣ್ಣ ಅವರ ಮನೆ ಕಸಿದು ಬಿದ್ದು ಮೇಕೆಗಳು ಮೃತಪಟ್ಟಿದ್ದು, ಇವರಿಗೆ ಆರ್ಥಿಕ ಸಹಾಯ ಇಲ್ಲದಂತಾಯಿತು. ಇವರ ಆರ್ಥಿಕ ಪರಿಸ್ಥಿತಿಯು, ಚಿಂತಾ ಜನಕವಾಗಿದ್ದು ಸರ್ಕಾರದ ಮೊರೆ ಹೋದಾಗ ಶಾಸಕರು ಆರ್ಥಿಕ ಸಹಾಯ ನೀಡುವುದಾಗಿ ಭರವಸೆ ನೀಡಿದರು ಇಂದು ಇವರ ಮನೆಗೆ ಬಂದು 1,20,000 ಚೆಕ್ಕುಗಳನ್ನು ಕೊಡುವುದರ ಮೂಲಕ ಶಾತಕತೆ ನೆರದಿದ್ದಾರೆ ಮತ್ತು ಮೇಕೆಗೆ ಪಶು ಇಲಾಖೆಯಿಂದ ಒಂದಕ್ಕೆ 5000 ಗಳನ್ನು ಕೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ತಾಸಿಲ್ದಾರ್ ನಾಗವೇಣಿ ಉಪತಾಸಿಲ್ದಾರ್ ನಾಗರಾಜ್ ಆರ್ ಐ ಪ್ರಾಣೇಶ್ ವಿಎ ಶ್ರೀನಿವಾಸ್ ಭೀಮ್ ಸಮುದ್ರದ ಗ್ರಾಮಸ್ಥರಾದ ಶ್ರೀರಾಮಚಂದ್ರಪ್ಪ ಹಾಗೂ ಹಲವು ಹಿರಿಯ ಮುಖಂಡರು ಭಾಗವಹಿಸಿದ್ದರು.