ವಯನಾಡಿನಲ್ಲಿ ಸಂಭವಿಸಿದ ಬಾರಿ ಭೂಕುಸಿತದಲ್ಲಿ 150ಕ್ಕೂ ಹೆಚ್ಚಿನ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಈ ಪ್ರದೇಶಕ್ಕೆ ತೆರಳುವಾಗ ಆರೋಗ್ಯ ಸಚಿವೆ ವೀಣಾ ಜಾರ್ಜ್ ಇದ್ದ ಕಾರು ಅಪಘಾತ ಕೇಡಾಗಿದ್ದು ಸಚಿವರಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಸ್ತುತ ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಮುಂಜಾನೆ ಬಾರಿ ಮಳೆಯಿಂದ ಉಂಟಾದ ತೀವ್ರ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 150ಕ್ಕೆ ಏರಿದೆ ಭಾರತೀಯ ಹವಮಾನ ಇಲಾಖೆಯು ಪರ್ವತ ಜಿಲ್ಲೆ ವಾಯುನಾಡು ಮತ್ತು ಕೇರಳದ ಎಲ್ಲಾ ಉತ್ತರ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ 24 ಗಂಟೆಗಳಲ್ಲಿ 20 ಕಿ.ಮೀ ಗಿಂತ ಹೆಚ್ಚು ಮಳೆ ಆಗುವ ನಿರೀಕ್ಷೆಯೊಂದಿಗೆ ಈ ಪ್ರದೇಶಗಳಲ್ಲಿ ಅತ್ಯಂತ ಬಾರಿ ಮಳೆ ಆಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವೈನಾಡು, ಪಾಲಕ್ಕಾಡ್, ಮಲಪ್ಪುರಂ, ಕೋಳಿ ಕೋಡ್, ಕಣ್ಣೂರ್, ಕಾಸರಗೋಡು, ಇಡುಕ್ಕಿ ಮತ್ತು ತ್ರಿಶೂಲ್ಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಆರೆಂಜ್ ಅಲರ್ಟ್ ಅತ್ಯಂತ ಬಾರಿ ಮಳೆಯನ್ನು ಸೂಚಿಸುತ್ತದೆ ಆದರೆ ಹಳದಿ ಅಲರ್ಟ್ ಬಾರಿ ಮಳೆಯನ್ನು ಸೂಚಿಸುತ್ತದೆ.
ಭಾರಿ ಮಳೆಯ ಸೂಚನೆಯಿಂದಾಗಿ ಪತ್ತನಂತಿಟ್ಟ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪುರಂ, ಕೋಯಿ ಕೋಡ್, ವೈನಾಡ್, ಕಣ್ಣೂರ್ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಅಧಿಕಾರಿಗಳು ರಜೆ ಘೋಷಿಸಿದ್ದಾರೆ ಉತ್ತರ ಕೇರಳ ಪ್ರವಾಹ ಮತ್ತು ಮರಗಳು ಧರೆಗೆ ಉರುಳಿ ಇರುವುದರಿಂದ ರೈಲು ಸೇವೆ ಸ್ಥಗಿತಗೊಂಡಿದೆ.