ಚಿತ್ರದುರ್ಗ : ಜಿಲ್ಲೆಯಲ್ಲಿ ಏಳು ಶಿಶು ಅಭಿವೃದ್ಧಿ ಯೋಜನೆ ಬರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕ
ಚಿತ್ರದುರ್ಗ, ಚಳ್ಳಕೆರೆ, ಭರಮ ಸಾಗರ, ಹೊಳಲ್ಕೆರೆ, ಹಿರಿಯೂರು, ಹೊಸದುರ್ಗ ಮತ್ತು ಮೊಳಕಾಲ್ಮೂರು ಅಭಿವೃದ್ಧಿ ಯೋಜನೆ ವಿವಿಧ ಕಾರಣಗಳಿಂದ ಖಾಲಿ ಇರುವ 63 ಅಂಗನವಾಡಿ ಕಾರ್ಯಕರ್ತೆಯರು 3 ಮಿನಿ ಅಂಗನವಾಡಿ ಹುದ್ದೆಗಳಿಗೆ ಹಾಗೂ 1049 ಅಂಗನವಾಡಿ ಸಹಾಯಕರ ಹುದ್ದೆಗಳಿಗೆ ಸೇರಿ ಒಟ್ಟು 215 ಹುದ್ದೆಗಳಿಗೆ ಅರ್ಜಿ ಸಲ್ಲಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ದ್ವಿತೀಯ ಪಿಯುಸಿ ಹಾಗೂ ಸಹಾಯಕ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ ಉತ್ತರಾಧಿಕಾರಿಗಳು 19 ರಿಂದ 35 ವರ್ಷದೊಳಗಿನ ಸ್ಥಳೀಯ ಅಭ್ಯರ್ಥಿಗಳು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಜುಲೈ 30 ರಿಂದ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು ಖಾಲಿ ಹುದ್ದೆಗಳ ವಿವರ ಕೆಳಗಿನಂತಿವೆ.
- ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನೆ ಯೋಜನೆ ಮೂರು ಮುಖ್ಯ ಅಂಗನವಾಡಿ ಕಾರ್ಯಕರ್ತೆಯರು 12 ಅಂಗನವಾಡಿ ಸಹಾಯಕಿಯರ 15 ಹುದ್ದೆಗಳು ಖಾಲಿ ಇವೆ.
- ಭರಮಸಾಗರ ಶಿಶು ಅಭಿವೃದ್ಧಿ ಯೋಜನೆ ಎಂಟು ಮುಖ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ 21 ಸಹಾಯಕಿಯರ ಹುದ್ದೆಗಳಿಗೆ ಸೇರಿ ಒಟ್ಟು 29 ಹುದ್ದೆಗಳ ನೇಮಕಾತಿ ನಡೆಯುತ್ತಿದೆ.
- ಚಳ್ಳಕೆರೆ ಶಿಶು ಅಭಿವೃದ್ಧಿ ಯೋಜನೆ ಯೋಜನೆ 16 ಮುಖ್ಯ ಅಂಗನವಾಡಿ ಕಾರ್ಯಕರ್ತೆಯರು 30 ಅಂಗನವಾಡಿ ಸಹಾಯಕಿಯರಿಗೆ ಸೇರಿ 46 ಹುದ್ದೆಗಳು ಖಾಲಿ ಇವೆ.
- ಹಿರಿಯೂರು ಶಿಶು ಅಭಿವೃದ್ಧಿ ಯೋಜನೆ ಮುಖ್ಯ ಅಂಗನವಾಡಿ ಕಾರ್ಯಕರ್ತೆಯರು 1 ಮೆನಿ ಅಂಗನವಾಡಿ ಕಾರ್ಯಕರ್ತೆ ಹಾಗೂ 35 ಅಂಗನವಾಡಿ ಸಹಾಯಕಿಯರ ಹುದ್ದೆಗಳು ಸೇರಿ 40 ಹುದ್ದೆಗಳು ಖಾಲಿ ಇವೆ.
- ಹೊಳಲ್ಕೆರೆ ಶಿಶು ಅಭಿವೃದ್ಧಿ ಯೋಜನೆ 9 ಮುಖ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ 14 ನವಾಡಿ ಸಹಾಯಕಿಯರು ಸೇರಿ 42 ಹುದ್ದೆಗಳು ಖಾಲಿ ಇವೆ.
- ಮೊಳಕಾಲ್ಮೂರು ಶಿಶು ಅಭಿವೃದ್ಧಿ ಯೋಜನೆ ಐದು ಮುಖ್ಯ ಅಂಗನವಾಡಿ ಕಾರ್ಯಕರ್ತೆಯರು 14 ಅಂಗನವಾಡಿ ಸಹಾಯಕಿಯರ ಸೇರಿ 19 ಹುದ್ದೆಗಳು ಖಾಲಿ ಇವೆ.
ಈ ಎಲ್ಲಾ ಹುದ್ದೆಗಳಿಗೆ ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಯ ಕಚೇರಿಯನ್ನು ಸಂಪರ್ಕಿಸಬಹುದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಭಾರತಿ ಆರ್ ಬಣಕಾರ್.