ಹಿರಿಯೂರು : ಪಿಯುಸಿ ಓದುತ್ತಿರುವ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿ ಕೈಕೊಟ್ಟ ಯುವಕನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ರಾಪ ಬಾಲಕಿಯು ಸಂಬಂಧಿಕರ ಮನೆಯಲ್ಲಿದ್ದುಕೊಂಡು ನಗರದ ಕಾಲೇಜಿಗೆ ಬರುತ್ತಿದ್ದ ಬಾಲಕಿಯನ್ನು ಸಂಗೇನಹಳ್ಳಿ ಗ್ರಾಮದ ದರ್ಶನ್ ಎಂಬ ಯುವಕ ಪರಿಚಯಿಸಿಕೊಂಡು ಅಪರಾಧತೆಯಿಂದ ಮೊಬೈಲ್ ನಂಬರ್ ಪಡೆದು.
ಮೆಸೇಜ್ ಫೋನ್ ಕಾಲ್ ಮಾಡಿ ಮಾತನಾಡುತ್ತಾ ಮದುವೆ ಆಗುವುದಾಗಿ ನಂಬಿಸಿ, ಬಾಲಕಿಯನ್ನು ದೈಹಿಕವಾಗಿ ಬಳಸಿಕೊಂಡು ಪ್ರಾಣ ಬೆದರಿಕೆ ಹಾಕಿದ್ದಲ್ಲದೆ ಜಾತಿ ನಿಂದನೆ ಮಾಡಿದ್ದಾನೆಂದು ಬಾಲಕೀಯ ಪೋಷಕರು ಆರೋಪಿಯ ವಿರುದ್ಧ ಪ್ರೋಕ್ಷಕ್ ಕಾಯ್ದೆ ಮತ್ತು ಜಾತಿ ನಿಂದನೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ