ರಾಮನಗರ : ರಾಷ್ಟ್ರೀಯ ದಾರಿಯಲ್ಲಿ ಅತಿ ವೇಗವಾಗಿ ಸಂಚರಿಸುವ ಪ್ರಯಾಣಿಕರಿಗೆ ಎಚ್ಚರ ರಾಜ್ಯದ್ಯಂತ ಹೊಸ ನಿಯಮ ಒಂದು ಜಾರಿಗೆ ಬರಲಿದೆ ಇದರ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಅವರು ವಾಹನ ಚಾಲಕರಿಗೆ ವೇಗದ ಮಿತಿ 130 ಕಿಲೋಮೀಟರ್ ದಾಟಿಸಿದರೆ ಕೇಸ್ ಬೀಳುವ ಸಂಭವವಿದೆ ಎಂದು ಟ್ರೀಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಈ ನಿಯಮವು ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯುವುದಕ್ಕೆ ಈ ನಿಯಮವನ್ನು ಜಾರಿಗೆ ತಂದಿದ್ದಾರೆ.
ಬೆಂಗಳೂರು ಟು ಮೈಸೂರ್ ಕ್ಸ್ಪ್ರೆಸ್ ನಲ್ಲಿ ಒಂದೇ ದಿನ 155 ವಾಹನಗಳು 130 ಕಿಂತ ಹೆಚ್ಚು ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿರುವ ಬಗ್ಗೆ ಅವರು ಸಹ ದಾಖಲೆ ಬಿಡುಗಡೆ ಮಾಡಿದ್ದಾರೆ ಈ ನಿಯಮವು ಆಗಸ್ಟ್ ಒಂದರಿಂದ ಜಾರಿಗೊಳ್ಳಲಿದೆ ಎಂದು ತಿಳಿಸಿದರು ಈ ನಿಯಮದಲ್ಲಿ 130 ಕಿಲೋಮೀಟರ್ ವೇಗದ ಮಿತಿ ಮೀರುವ ವಾಹನಗಳ ವಿರುದ್ಧ ಎಫ್ಐಆರ್ ದಾಖಲಿಸಲು ಪೋಲಿಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯದಲ್ಲಿ ಹೊಸದಾಗಿ ಜಾರಿ ಬರುವ ಭಾರತೀಯ ನ್ಯಾಯ ಸಮ್ಮೇತ ಅಡಿಯಲ್ಲಿ ಪೊಲೀಸರು 130 ಕಿಲೋಮೀಟರ್ ಗಿಂತ ಹೆಚ್ಚು ವೇಗವಾಗಿ ಸಂಚರಿಸುವ ವಾಹನಗಳ ವಿರುದ್ಧ ಕೇಸ್ ದಾಖಲಿಸಲು ಮುಂದಾಗಿದ್ದಾರೆ. ಈ ಹೊಸ ನಿಯಮದ ಅಡಿಯಲ್ಲಿ ರಾಜ್ಯದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಆದ್ದರಿಂದ ರಾಜ್ಯ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಎಡಿಜಿಪಿ ಅಶೋಕ್ ಕುಮಾರ್ ಎಲ್ಲಾ ವಾಹನ ಸವಾರರಿಗೆ ವೇಗದ ಮಿತಿಯ 130 ಕಿಲೋಮೀಟರ್ ದಾಟದಂತೆ ನೋಡಿಕೊಳ್ಳಬೇಕೆಂದು ತಿಳುವಳಿಕೆ ನೀಡಿದರು.