ಚಿತ್ರದುರ್ಗ : ಜವನಗೊಂಡನಹಳ್ಳಿ ಹೋಬಳಿಯ ಗಾಯತ್ರಿ ಡ್ಯಾಮ್ ಸೇರಿದಂತೆ 18 ಕೆರೆಗಳಿಗೆ ವಾಣಿವಿಲಾಸ ಜಲಾಶಯದಿಂದ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನಾವತಿಯಿಂದ ಜೆಜೆ ಹಳ್ಳಿ ಹೋಬಳಿಯಿಂದ ತಾಲೂಕು ಕಚೇರಿಯವರಿಗೆ ಸಾವಿರಾರು ರೈತರು, ನೂರಾರು ಟ್ಯಾಕ್ಟರ್, ಆಟೋ, ಕಾರು, ಬೈಕ್ ಗಳು ಸೇರಿದಂತೆ ಪಾದ ಯಾರ್ತ್ರೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆಯಲ್ಲಿ ಡಿವೈಎಸ್ಪಿ ಚೈತ್ರ ಅವರು ರೈತರ ವಿರುದ್ಧ ದರ್ಪ ತೋರಿದರು ಎಂದು ದೂರು ನೀಡಲಾಗಿದೆ ಚಳುವಳಿ ವೇಳೆ ರೈತರ ಬಗ್ಗೆ ಕೀಳಾಗಿ ಮಾತನಾಡಿ ಅವಾಜ್ ಹಾಕಿದ ಆರೋಪ ಕೇಳಿಬಂದಿದ್ದು ರೈತ ಮುಖಂಡರಿಗೆ ಡಿ ವೈ ಎಸ್ ಪಿ ಚೈತ್ರ ಅವಾಜ್ ಹಾಕಿರೋ ವಿಡಿಯೋ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಿತ್ರದುರ್ಗದಲ್ಲಿ ಎಸ್ ಪಿ ಧರ್ಮೇಂದರ್ ಕುಮಾರ್ ಮೀನಾ ಅವರಿಗೆ ದೂರು ನೀಡಿರುವ ರೈತ ಮುಖಂಡರು ವಿಡಿಯೋ ಸಾಕ್ಷಿಯನ್ನು ನೀಡಿದ್ದಾರೆ. ಡಿವೈಎಸ್ಪಿ ಚೈತ್ರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ ರೈತರ ಚಳುವಳಿ ವೇಳೆ ಈ ರೀತಿ ನಿಂದಿಸಿದ್ದು ತಪ್ಪು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಹಿರಿಯೂರು ಭಾಗದಲ್ಲಿ ನಿತ್ಯ ಕೊಲೆ ಸುಲಿಗೆ ಕಳ್ಳತನ ಹೆಚ್ಚಾಗುತ್ತಿದೆ ಕಾನೂನು ಸುವ್ಯವಸ್ಥೆಯ ಕಾಪಾಡುವಲ್ಲಿ ಆದರೆ ರೈತರ ಚಳುವಳಿಯನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆಂದು ಆರೋಪಿಸಿ ರಾಜ್ಯ ರೈತ ಸಂಘದ ಕಾರ್ಯದರ್ಶಿ ಸಿದ್ಧವೀರಪ್ಪ ಚಿತ್ರದುರ್ಗ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಹಿರಿಯೂರು ತಾಲೂಕು ಅಧ್ಯಕ್ಷ ತಿಪ್ಪೆ ಸ್ವಾಮಿ ನೇತೃತ್ವದಲ್ಲಿ ದೂರು ನೀಡಿದ್ದಾರೆ ಜೊತೆಗೆ ಡಿವೈಎಸ್ಪಿ ಚೈತ್ರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪ್ರತಿಭಟನೆ ಎಚ್ಚರಿಕೆಯನ್ನು ನೀಡಿದ್ದಾರೆ.