ಚಿತ್ರದುರ್ಗ : ಸರ್ಕಾರಿ ಇಲಾಖೆಯಲ್ಲಿ ಕೆಲವು ಅಧಿಕಾರಿಗಳು 5 ವರ್ಷಗಳ ಮೇಲ್ಪಟ್ಟು ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದು ಇವರನ್ನು ವರ್ಗಾವಣೆ ಮಾಡದೆ ಹಾಗೆ ಉಳಿದಿದ್ದಾರೆ. ಪೋಲಿಸ್ ಇಲಾಖೆ ಮತ್ತು ವಿವಿಧ ಇಲಾಖೆಯಲ್ಲಿ ಎಲ್ಲಾ ಅಂಗರಕ್ಷರನ್ನು ಈ ಕೂಡಲೇ ವರ್ಗಾವಣೆ ಮಾಡಬೇಕೆಂದು ಕರುನಾಡ ವಿಜಯ ಸೇನ ಇಂದ ಹೆಚ್ಚುವರಿ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು. ಪೊಲೀಸ್ ಠಾಣೆಯಲ್ಲಿ ಐದು ವರ್ಷಗಳಿಗೂ ಹೆಚ್ಚು ಕಾಲದಿಂದ ವರ್ಗಾವಣೆ ಯಾಗದಂತೆ ಗೃಹ ಇಲಾಖೆಯ ಗಮನಕ್ಕೆ ಬರದೆ ಇರುವುದು ಸೂಚನೆಯ ವಿಷಯವಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಕೆಲವು ಪೊಲೀಸರನ್ನು ವರ್ಗಾವಣೆಗೊಳಿಸದಿರುವುದು ಯಾವ ನ್ಯಾಯ ವರ್ಗಾವಣೆ ವಿಚಾರ ಬಂದಾಗ ನೇಮಾವಳಿ ಪ್ರಕಾರ ವರ್ಗಾವಣೆ ಯಾಗಬೇಕು ಎಲ್ಲಾ ತಾಲೂಕುಗಳ ಠಾಣೆಯಲ್ಲಿ ಹತ್ತು ವರ್ಷಗಳಿಂದ ಹೆಚ್ಚು ಕಾಲ ಕಾರ್ಯ ನಿರ್ವಹಿಸುತ್ತಿದ್ದಾರೆ ಇವರ ವಿರುದ್ಧ ಯಾವುದೇ ಅಧಿಕಾರಿಯು ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸದೆ ಇರುವುದು ನಾಚಿಕೆಯ ವಿಷಯವಾಗಿದೆ.
ಈ ಕೂಡಲೇ ಐದು ವರ್ಷಕ್ಕೂ ಹೆಚ್ಚು ಕಾಲ ಕೆಲಸ ನಿರ್ವಹಿಸಿದ ಅಧಿಕಾರಿಯನ್ನು ವರ್ಗಾವಣೆ ಮಾಡಿ ಆದೇಶ ಜಾರಿಗೊಳಿಸುವಂತೆ ಕನ್ನಡ ವಿಜಯ ಸೇನಾ ಜಿಲ್ಲಾ ಅಧ್ಯಕ್ಷ ಕೆ ಟಿ ಕುಮಾರಸ್ವಾಮಿ ಹೆಚ್ಚುವರಿ ರಕ್ಷಣಾಧಿಕಾರಿಯವರಿಗೆ ಮನವಿ ಮಾಡಿದರು. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಕಾರ್ಯದರ್ಶಿಗಳಾದ ಅಣ್ಣಪ್ಪ, ಜಗದೀಶ್ ಸಿ ಉಪಾಧ್ಯಕ್ಷರು, ನಗರಾಧ್ಯಕ್ಷ ಪಿ ಅವಿನಾಶ್, ಪಾಂಡು, ನಾಗರಾಜ್ ಮತ್ತು ಮಧುಸೂದನ್, ಸುರೇಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.