Breaking
Mon. Dec 23rd, 2024

ಸೈಕಲ್ ಓಡಿಸುವ ಮೂಲಕ ಫೇಮಸ್ ಆಗಿದ್ದ ಮೂವರು ಪುಟ್ಟ ಬಾಲಕಿಯರು ಭೂಕುಸಿತಕ್ಕೆ ಬಲಿ….!

ಕೇರಳ : ಒ0ದು ವರ್ಷದ ಹಿಂದೆ ವಯನಾಡಿನ ಮುಂಡಕ್ಕೆನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಶಿಕ್ಷಕಿ, ತನ್ನ ಶಾಲಾ ಮಕ್ಕಳಿಗೆ ಸೈಕಲ್ ಕಲಿಸುತ್ತಿದ್ದರು. ಈಗ ಮತ್ತೆ ಅದೇ ಸ್ಥಳ ವೈರಲ್ ಆಗಿದೆ. ಆದ್ರೆ ಸ್ಥಳದಲ್ಲಿ ಈಗ ದುಃಖ ಮಡುಗಟ್ಟಿದೆ.

ಇಷ್ಟು ದಿನ ಮಕ್ಕಳ ಸಂತೋಷ, ನಗುವಿನಿಂದ ಕೂಡಿದ್ದ ಶಾಲೆಯ ಮೈದಾನ ಕೆಸರು ಗದ್ದೆಯಾಗಿದೆ. ಹಳೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡ ಶಾಲಿನಿ ತಂಕಚನ್, ತಮ್ಮನನ್ನು ತೋಡಿದ್ದಾರೆ. 4ನೇ ತರಗತಿಯ ಶಿಕ್ಷಕಿಯಾಗಿದ್ದ ಶಾಲಿನಿ ತಂಕಚನ್, ಈ ವಿಡಿಯೋ ಪೋಸ್ಟ್ ಮಾಡಿ ನನ್ನ ಪ್ರೀತಿ ಪಾತ್ರರು ಹೋದ್ರು ಅಂತ ಬರೆದಿದ್ದಾರೆ. ಸೈಕಲ್ ಓಡಿಸುವುದು

ಮೂವರು ಸೇರಿದಂತೆ ಭೂಕುಸಿತದಲ್ಲಿ ಒಂಭತ್ತು ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ. ಮೈದಾನದಲ್ಲಿ ಸೈಕಲ್ ಓಡಿಸುತ್ತಿದ್ದ ವಿಕಲಾಂಗ ವಿದ್ಯಾರ್ಥಿ ಜೊತೆ ನಾನು ಮಾತನಾಡಿದ್ದೆ. ಜೊತೆಗೆ ಎಲ್ಲರೂ ಖುಷಿಯಿಂದ ಸೈಕಲ್ ಓಡಿಸಿದೆವು. ಈಗ ಈ ವಿಡಿಯೋ ನನಗೆ ನೋಡಲು ಸಾಧ್ಯವಿಲ್ಲ. ಇದ್ರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಜೊತೆಗೆ ಈ ವರ್ಷ ನಾಲ್ಕನೇ ತರಗತಿ ಪಾಸ್ ಆದ ವಿದ್ಯಾರ್ಥಿಗಳು ಕೂಡ ಸಾವನ್ನಪ್ಪಿದ್ದಾರೆ. ಬಾಲಕಿಯರ ಕುಟುಂಬದ ಒಬ್ಬ ಸದಸ್ಯ ಕೂಡ ಬದುಕುಳಿದಿಲ್ಲ. ಇಡೀ ಕುಟುಂಬ ಸಾವನ್ನಪ್ಪಿದೆ. ಶಾಲಾ ಮಕ್ಕಳು, ಪಾಲಕರು, ಶಿಕ್ಷಕರು ಒಂದೇ ಕುಟುಂಬದ ರೀತಿ ಇಬ್ಬರು ಎಂದು ಶಿಕ್ಷಕಿ ಬರೆದಿದ್ದಾರೆ.

Related Post

Leave a Reply

Your email address will not be published. Required fields are marked *