ರಾಮನಗರ : ಸಮೀಪವಿರುವ ಜಾನಪದ ಲೋಕದಲ್ಲಿ ಜಾನಪದ ಮತ್ತು ಪ್ರದರ್ಶಕ ಕಲೆಗಳ ಡಿಪ್ಲೋಮ ಕೋರ್ಸುಗಳು 2024-25 ನೇ ಸಾಲಿಗೆ ಇಲ್ಲಿಗೆ ಪ್ರವೇಶ ಪಡೆಯುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ಜಾನಪದ ಪರಿಷತ್ತು, ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಈ ಕೋರ್ಸ್ ನಡೆಸಲಾಗುತ್ತಿದೆ. 2024-2025ನೇ ಶೈಕ್ಷಣಿಕ ಸಾಲಿಗೆ ಕನಿಷ್ಠ ಎಸ್‌ಎಸ್‌ಎಲ್‌ಸಿ ಮತ್ತು ಅದಕ್ಕೆ ಪೂರಕವಾದ ವಿದ್ಯಾರ್ಹತೆ ಹೊಂದಿರುವ ಆಸಕ್ತರಿಂದ ಜಾನಪದ ಮತ್ತು ಪ್ರದರ್ಶಕ ಕಲೆಗಳ ಡಿಪ್ಲೊಮಾ ಕೋರ್ಸ್‌ಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಡಿಪ್ಲೊಮಾ ಒಂದು ವರ್ಷದ ಅವಧಿಯದ್ದಾಗಿದ್ದು, ಪ್ರತಿ ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ತರಗತಿಗಳು ನಡೆಯಲಿವೆ. ಕಲೆಗಳ ತರಬೇತಿ ಹಾಗೂ ಕಲಿಕೆಯ ಪ್ರಾತ್ಯಕ್ಷಿತೆಗಳನ್ನೊಳಗೊಂಡ ಈ ಡಿಪ್ಲೊಮಾ ಕೋರ್ಸ್ ವಿಶಿಷ್ಟ ಸ್ವರೂಪದಲ್ಲಿರುತ್ತದೆ. ಆಸಕ್ತರು 21/08/2024 ರಂದು ತಮ್ಮ ಸಂಪೂರ್ಣ ಮಾಹಿತಿಗೆ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬೇಕಾಗಿದೆ.
ಹೆಚ್ಚಿನ ವಿವರಗಳಿಗಾಗಿ: ಡಾ. ಸಂದೀಪ್ ಕೆ.ಎಸ್, ಸಂಚಾಲಕರು, ಎಚ್. ಎಲ್. ಎನ್. ಸಂಶೋಧನಾ ಕೇಂದ್ರ, ಜಾನಪದ, ಬೆಂಗಳೂರು-ಮೈಸೂರು ಹೆದ್ದಾರಿ, ಐಜೂರು ಅಂಚೆ, ಬೆಂಗಳೂರು, ಜಿಲ್ಲೆ-562159 ಅಥವಾ ಕರ್ನಾಟಕ ಜಾನಪದ ಪರಿಷತ್ತು, ಜಾನಪದ ಸಿರಿಭುವನ, ನಂ.1, ಜಲದರ್ಶಿನಿ ಬಡಾವಣೆ, ಎಂ.ಎಸ್.ರಾಮಯ್ಯ ಆಸ್ಪತ್ರೆ ಮಹಾದ್ವಾರದ ಹತ್ತಿರ, ನ್ಯೂ ಬಿ.ಐ.ಎಲ್. ರಸ್ತೆ, ಬೆಂಗಳೂರು-560 054.
ಈ ವಿಳಾಸಗಳಿಗೆ ಖುದ್ದು ಭೇಟಿ ನೀಡಿ ಅಥವ ದೂರವಾಣಿ-9844673191, 7795632294,080- 23605033 ಮೂಲಕ ಸಂಪರ್ಕಿಸಬಹುದು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ಪ್ರಕಟಣೆಯಲ್ಲಿ.