Breaking
Mon. Dec 23rd, 2024

ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೆಂಬಲಿಸಿ ವಿವಿಧ ಸಮುದಾಯಗಳ ಮುಖಂಡರು ಆಗಸ್ಟ್ 5 ರಂದು ಬೃಹತ್ ಪ್ರತಿಭಟನೆ….!

ಚಿತ್ರದುರ್ಗ : ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೆಂಬಲಿಸಿ ವಿವಿಧ ಸಮುದಾಯಗಳ ಮುಖಂಡರು ಆಗಸ್ಟ್ 5ರಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಸಿಟಿ ಕೃಷ್ಣಮೂರ್ತಿ ತಿಳಿಸಿದರು. ರಾಜ್ಯದಲ್ಲಿ ಇತ್ತೀಚಿಗೆ ವಿರೋಧ ಪಕ್ಷಗಳ ಷಡ್ಡಿಯಾಂತರ ಮತ್ತು ರಾಜ್ಯದ ರಾಜ್ಯಪಾಲರ ಅನುಮಾನಾಸ್ಪದ ನಡೆಯಿಂದ ಚಿತ್ರದುರ್ಗ ಜಿಲ್ಲಾ ಶೋಷಿತ ಸಮುದಾಯಗಳ ಮಹಾ ಒಕ್ಕೂಟವು ಘೋರವಾಗಿ ಖಂಡಿಸಿದೆ.

ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯನವರು ಕಳೆದ ಸರ್ಕಾರದಲ್ಲಿ ಕೊಟ್ಟಂತಹ 165 ಭರವಸೆಗಳಲ್ಲಿ ಬಹುತೇಕ ಭರವಸೆಗಳನ್ನು ಈಡೇರಿಸಿ ರಾಜ್ಯದ ಶೋಷಿತ ಸಮುದಾಯಗಳಿಗೆ ಶಕ್ತಿ ನೀಡುವ ಕೆಲಸ ಮಾಡಿದ್ದಾರೆ ಇದಲ್ಲದೆ ಈ ಬಾರಿಯೂ ಕೂಡ ಎಲ್ಲಾ ಜಾತಿಯ ಎಲ್ಲಾ ವರ್ಗದ ಬಡವರಿಗೆ ಪಂಚ ಗ್ಯಾರಂಟಿಯನ್ನು ಯಥವತ್ತಾಗಿ ಜಾರಿಗೊಳಿಸಿ ಈ ಸಮುದಾಯಗಳ ಧ್ವನಿಯಾಗಿ ಆಡಳಿತ ನಡೆಸಿಕೊಂಡು ಬಂದ ರಾಜ್ಯದ್ಯಂತ ಜನಪ್ರಿಯತೆಯನ್ನು ಗಳಿಸಿದ್ದಾರೆ.

ಅವರ ರಾಜಕೀಯ ಜೀವನದ ಇತಿಹಾಸದಲ್ಲೇ ಒಂದೇ ಒಂದು ಕಪ್ಪು ಚುಕ್ಕಿ ಇಲ್ಲದೆ ಆಡಳಿತ ನಡೆಸುತ್ತಿರುವುದು ವಿರೋಧ ಪಕ್ಷಗಳಿಗೆ ಸಹಿಸಲಾಗದೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಕುತಂತ್ರ ಕುಯುಕ್ತಿಗಳನ್ನು ನಡೆಸಿ ಶ್ರದ್ಧಾಧ್ಯಾಂತರ ರೂಪಿ ಅವರ ತೇಜೋವಧೆಯನ್ನು ಮಾಡಲು ಯತ್ನಿಸುತ್ತಿದ್ದಾರೆ ಇದು ನಡೆಯುವುದಿಲ್ಲ  ಎಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧರ್ಮಪತ್ನಿಯ ಅಣ್ಣ ಅವರು ತವರೂರಿನ ಬಳುವಳಿಯಾಗಿ ನೀಡಿದ ಭೂಮಿಯನ್ನು ಮೂಡ ಆಕ್ರಮಿಸಿಕೊಂಡು ಶೇಕಡ 50-50 ಅನುಪಾತದಲ್ಲಿ ನಿವೇಶನ ನೀಡಲು ನಿರ್ಧರಿಸಿದ್ದು ಸರಿ ಅಷ್ಟೇ ಆದರೆ ತವರಿನ ಬಳುವಳಿಯನ್ನು ಬಿಟ್ಟುಕೊಡಲು ಮನಸ್ಸಿಲ್ಲದೆ ಮೋಡದಿಂದ ಬದಲಿಗೆ ನಿವೇಶನ ಕೊಡುವಂತೆ ಮುಖ್ಯಮಂತ್ರಿ ಅವರ ಧರ್ಮಪತ್ನಿ ಶ್ರೀಮತಿ ಪಾರ್ವತಮ್ಮ ಬೇಡಿಕೆ ಇಟ್ಟಿದ್ದು ಅದರಂತೆ 2020ರಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷದ ಸರ್ಕಾರ ಆಡಳಿತದಲ್ಲಿದ್ದಾಗ ಬದಲಿ ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಇದರಲ್ಲಿ ಮುಖ್ಯಮಂತ್ರಿ ಯಾವ ತಪ್ಪಿದೆ ಎಂದು ಪ್ರಶ್ನಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಮುಖ್ಯಮಂತ್ರಿಗೆ ಹೇಗೆ ಸಂಬಂಧ ಪಡಲಿಕ್ಕೆ ಸಾಧ್ಯ. ಅದು ನಿಯಮಾನುಸಾರ ಬಜೆಟಿನಲ್ಲಿ ಮೀಸಲಿಟ್ಟ ಹಣವನ್ನು ಖಜಾನೆ ಮುಖಾಂತರ ನಿಗಮಕ್ಕೆ ವರ್ಗಾವಣೆಗೊಂಡಿರುತ್ತದೆ.

ಅನುದಾನ ವರ್ಗಾವಣೆಗೊಂಡ ಮೇಲೆ ಅದರ ನಿರ್ವಹಣೆಯ ಜವಾಬ್ದಾರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಇದರ ವ್ಯಾಪ್ತಿಯಲ್ಲಿ ಇರುತ್ತಾರೆ ತಪ್ಪು ಯಾರೇ ಮಾಡಲಿ ಎರಡು ಪ್ರಕರಣಗಳನ್ನು ಈಗಾಗಲೇ ಮುಖ್ಯಮಂತ್ರಿಗಳು ಪ್ರತ್ಯೇಕ ತನಿಖಾ ಸಂಸ್ಥೆಯನ್ನು ಸ್ಥಾಪಿಸಿ ತನಿಖೆಗೆ ಒಳಪಡಿಸಿರುತ್ತಾರೆ. ಅದಾಗಿಯೂ ಸಹ ವಿರೋಧ ಪಕ್ಷಗಳು ಷಡ್ಯಂತರಗಳನ್ನು ರೂಪಿಸಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆಯನ್ನು ಮಾಡಲು ಹೊರಟಿರುವುದು ರಾಜ್ಯದ ಜನತೆಯಲ್ಲಿ ವಿರೋಧ ಪಕ್ಷಗಳ ನಡೆ ಬಗ್ಗೆ ಅಸಹ್ಯ ಮೂಡುತ್ತಿದೆ ಅಲ್ಲದೆ ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಯಾರೋ ಒಬ್ಬ ದಾರಿಹೋಕಕೊಟ್ಟ 200 ಪುಟಗಳ ದೂರನ್ನು ಪರಿಶೀಲಿಸದೇ ಕೇವಲ 6 ಗಂಟೆಯಲ್ಲಿ ನೋಟಿಸ್ ಜಾರಿ ಮಾಡಿರುವುದು ಇಡೀ ರಾಜ್ಯದ ಜನತೆಗೆ ನೋವುಂಟು ಮಾಡಿದೆ ಎಂದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ನಗರಸಭೆ ಮಾಜಿ ಅಧ್ಯಕ್ಷ ಎಚ್ ಮಂಜಪ್ಪ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್ ಮೂರ್ತಿ ಉಪ್ಪಾರ್ ಸಮುದಾಯದ ಮುಖಂಡ ಮೂರ್ತಿ ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ಕರವೇ ಅಧ್ಯಕ್ಷ ನಗರಸಭಾ ಸದಸ್ಯ ರಮೇಶ್, ಟಿಪ್ಪು ಕಾಸಿಂ ಅಲಿ ಅಲೆಮಾರಿ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್, ಕುರುಬ ಸಂಘದ ಅಧ್ಯಕ್ಷ ಶ್ರೀ ರಾಮ್, ನಗರಸಭಾ ಸದಸ್ಯ ಪಿಕೆ ಮೀನಾಕ್ಷಿ, ರಾಜ್ಯ ಅಲ್ಪಸಂಖ್ಯಾತರ ಮಹಿಳಾ ಮುಖಂಡರಾದ ಮುನಿರಾ ಮಗ್ದರ್, ಚಲವಾದಿ ಸಮುದಾಯ ಮುಖಂಡರ ರವಿ ಪೂಜಾರಿ, ಸವಿತಾ ಸಮಾಜದ ಮುಖಂಡ ಎಂಡಿ ಕುಮಾರ್, ಯುವ ಮುಖಂಡ ಯಾಸಿನ್, ಕುರುಬ ಸಮಾಜದ ಖಜಾಂಚಿ ಮೃತುಂಜಯ, ಕುರುಬ ಸಮಾಜದ ಮುಖಂಡರಾದ ಮಾಲತೇಶ್, ಬಡಗಿ ಸಂಘದ ಅಧ್ಯಕ್ಷರಾದ ಜಾಕೀರ್, ಎದ್ದೇಳು ಕರ್ನಾಟಕ ಸಂಘಟನೆಯ ಟಿ ಶಫಿವುಲ್, ಮುಖಂಡರಾದ ಅಕ್ಬಲ್ ಹುಸೇನ್, ವಾಲಿ ಖಾದ್ರಿ, ನೇತಾ, ಲಂಬಾಣಿ ಸಮಾಜದ ಜಿಲ್ಲಾಧ್ಯಕ್ಷ ಪ್ರಕಾಶ್ ರಾಮ ನಾಯಕ್, ಗ್ಯಾರೆಂಟಿ ಸಮಿತಿಯ ಜಲಾಧ್ಯಕ್ಷರಾದ ಗಂಜಿಗಟ್ಟೆ ಶಿವಣ್ಣ, ಸೈಯದ್ ಕುದ್ದುಸ್, ರಾಜ್ಯ ಸಂಚಾಲಕರಾದ ಬಿಟಿ ಜಗದೀಶ್, ಯಾದವ ಸಮುದಾಯದ ಮುಖಂಡರಾದ ಪ್ರಜೋರಿ ಮೈಲಾರಪ್ಪ, ಪೈಲ್ವಾನ್ ತಿಮ್ಮಣ್ಣ, ವೀರಶೈವ ಸಮಾಜದ ಅಧ್ಯಕ್ಷ ಹುಲ್ಲೂರು ಮಂಜುನಾಥ್ ಇನ್ನು ಮುಂತಾದ ಸಮುದಾಯದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Post

Leave a Reply

Your email address will not be published. Required fields are marked *