ಬೆಂಗಳೂರು : ರಾಜ್ಯದಲ್ಲೇ ಸರ್ಕಾರಿ ಹುದ್ದೆಗಳನ್ನು ಗೆಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚು ತಲೆ ಇದ್ದು ಕರ್ನಾಟಕ ಲೋಕಸೇವಾ ಆಯೋಗ ಈಗಾಗಲೇ ಅರ್ಜಿ ಆಹ್ವಾನಿಸಿರುವ ವಿವಿಧ ಇಲಾಖೆಗಳ ನಾನಾ ವೃಂದಗಳ 2,243 ಹುದ್ದೆಗಳಿಗೆ 10,79,236 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಉಳಿಕೆ ಮೂಲ ವೃಂದದ ಹೈದರಾಬಾದ್ ಕರ್ನಾಟಕ) 1772 ಹುದ್ದೆಗಳಿಗೆ 8,65,715 ಹೈದರಾಬಾದ್ ಕರ್ನಾಟಕದ 471 ಹುದ್ದೆಗಳಿಗೆ 2,13,521 ಅರ್ಜಿಗಳು ಬಂದಿವೆ ಎಂದು ಕೆಪಿಎಸ್ಸಿ ಮೂಲಗಳು ತಿಳಿಸಿವೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ತಾಲೂಕು ಕಲ್ಯಾಣ ಅಧಿಕಾರಿ ಗ್ರೂಪ್ ಬಿ ಹೈದರಾಬಾದ್ ಕರ್ನಾಟಕ ಏತರವದದ 21 ಹುದ್ದೆಗಳಿಗೆ 1,33,781 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಇನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 247 ಹೈದರಾಬಾದ್ ಕರ್ನಾಟಕ 97 ಹುದ್ದೆಗಳಿಗೆ 4,04,430 ಅರ್ಜಿಗಳು ಸಲ್ಲಿಕೆಯಾಗಿದೆ.
2023 ರಾ ಏಪ್ರಿಲ್ ನಿಂದ ಈವರೆಗೆ ವಿವಿಧ ಹುದ್ದೆಗಳ ನೇಮಕಾತಿ ಒಟ್ಟು 20 ಅಧಿಸೂಚನೆಗಳನ್ನು ಕೆಪಿಎಸ್ಸಿ ಹೊರಡಿಸಿದೆ ಈ ಪೈಕಿ 19 ಅಧಿಸೂಚನೆಗಳಿಗೆ ಅರ್ಜಿ ಆಹ್ವಾನ ಪ್ರಕ್ರಿಯೆ ಪೂರ್ಣಗೊಂಡಿದ್ದು ಒಂದು ಅಧಿಸೂಚನೆಗೆ ಪಶು ವೈದ್ಯಾಧಿಕಾರಿ 400 ಹುದ್ದೆಗಳು ಮಾತ್ರ ಆಗಸ್ಟ್ 9 ರಲ್ಲಿ ಅರ್ಜಿ ಸ್ವೀಕಾರ ಆರಂಭವಾಗಲಿದೆ. ಅರ್ಜಿ ಸಲ್ಲಿಕೆ ಅವಧಿ ಪೂರ್ಣಗೊಂಡ ಅದೇ ಸೂಚನೆಗಳ ಪೈಕಿ ವಾಣಿಜ್ಯ ತೆರಿಗೆ ಪರೀಕ್ಷಕ 245 ಹೈದರಾಬಾದ್ ಕರ್ನಾಟಕ ಹದಿನೈದು ಹುದ್ದೆಗಳಿಗೆ ನೇಮಕಾತಿಗೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆ ನಡೆದಿದೆ. ಉಳಿದ 18 ನೇಮಕಾತಿ ಅಧಿಸೂಚನೆಗಳಲ್ಲಿ ಅರ್ಜಿ ಅಹ್ವಾನ ಅವಧಿ ಪೂರ್ಣಗೊಂಡು ಕೆಲವು ತಿಂಗಳಾದರೂ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕೆಪಿಎಸ್‌ಸಿ ನಡೆಸಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದರೆ ಸರ್ಕಾರದಲ್ಲಿ ಖಾಲಿ ಇರುವ ಎಲ್ಲಾ ಅನುಮೋದಿತ ಹುದ್ದೆಗಳನ್ನು ಒಂದು ವರ್ಷದಲ್ಲಿ ಭರ್ತಿ ಮಾಡಲಾಗುವುದು ಎಂದು ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತು ಆದರೆ ಈ ಭರವಸೆ ಈಡೇರಿಸಿಲ್ಲ. 2023 24 ನೇ ಸಾಲಿನ ಕೆಎಎಸ್ 40 ಹುದ್ದೆಗಳು ಸೇರಿ ಕ್ರೇಜಿತೆದ್ ಪ್ರೊಫೆಷನಲ್ ಒಟ್ಟು 384 ಹುದ್ದೆಗಳಿಗೆ 2 ,10,910 ಅರ್ಜಿಗಳು ಸಲ್ಲಿಕೆಯಾಗಿವೆ ಕೆಪಿಎಸ್ಸಿ ಗಳಿಗೆ ಇದೇ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದರು ಯಾವ ಪದವಿ ಪಡೆದವರು ಎಷ್ಟು ಮಂದಿ ಅರ್ಜಿ ಸಲ್ಲಿಸಿದರೆ ಎಂಬ ಮಾಹಿತಿಯನ್ನು ನೀಡಿದೆ. ಆ ಮಾಹಿತಿಯ ಪ್ರಕಾರ ಬಿಎ 63769 ಶೇಕಡ 30.24, ಬಿ ಇ 38 692 ಶೇಕಡ 18.35, ಬಿ ಎಸ್ ಸಿ 36,091 ಶೇಕಡ 17.11, ಬಿಕಾಂ 34,795 ಶೇಕಡ 16.50, ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಈ ನಾಲ್ಕು ಪದವಿದಾರರು ಅತಿ ಹೆಚ್ಚು 173347 ಶೇಕಡ 82.19 ಅರ್ಜಿ ಸಲ್ಲಿಕೆಯಾಗಿದೆ. ಕೆಪಿಎಸ್ಸಿ ನೇಮಕಾತಿ ಬೆಳಂಬಕ್ಕೆ ಕಾರಣವೇನೆಂದರೆ ಈ ಕೆಳಕಂಡಂತಿವೆ.
- ಇಲಾಖೆಯಿಂದ ಬರುವ ಪ್ರಸ್ತಾವನೆಗಳಲ್ಲಿ ನ್ಯೂನ್ಯತೆ.
- ಪ್ರಸ್ತಾವನೆಗಳಲ್ಲಿರುವ ನೂನ್ಯತೆಗಳಿಗೆ ಸ್ಪಷ್ಟೀಕರಣ ಮಾಹಿತಿ ನೀಡಲು ಇಲಾಖೆಗಳು ಕಾಲಾವಕಾಶ ತೆಗೆದುಕೊಳ್ಳುತ್ತಿರುವುದು.
- ಕೆಇಎ ಸೇರಿದಂತೆ ಇತರ ಪ್ರಾಧಿಕಾರಗಳಲ್ಲಿಯೂ ಶನಿವಾರ ಮತ್ತು ಭಾನುವಾರ ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ ಆ ದಿನಗಳನ್ನು ಹೊರತುಪಡಿಸಿ ಪರೀಕ್ಷೆಗೆ ದಿನಾಂಕ ನಿಗದಿಪಡಿಸಬೇಕಾಗಿದೆ.
- ಹಬ್ಬ ಹರಿದಿನಗಳಲ್ಲಿ ಜಯಂತಿ ರಾಷ್ಟ್ರೀಯ ದಿನಗಳನ್ನು ಹೊರತುಪಡಿಸಿ ದಿನಾಂಕ ನಿಗದಿ ಪಡಿಸಬೇಕಿದೆ. ಆಯ್ಕೆಗೊಂಡ ಅಭ್ಯರ್ಥಿಗಳು ನಿಗದಿತ ಅವಧಿಯಲ್ಲಿ ಮೂಲ ದಾಖಲಾತಿ ಸಲ್ಲಿಸಿರುವುದು.
- ಅಂಗವಿಕಲ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ವಿಳಂಬ.
- ಎಲ್ಲ ನೇಮಕಾತಿ ಪ್ರಕ್ರಿಯೆಗಳಲ್ಲೂ ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗುತ್ತಿರುವುದು.
- ಸಿಬ್ಬಂದಿ ಕೊರತೆ
ಕೆ ರಾಕೇಶ್ ಕುಮಾರ್ ಕಾರ್ಯದರ್ಶಿ ಕೆಪಿಎಸ್ಸಿ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳಲ್ಲಿ ವಿಳಂಬ ತಡೆಗೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಪರಿಶೀಲನೆ ಯಾಗುತ್ತಿದೆ.