ವಯನಾಡು : 320ಕ್ಕೂ ಅಧಿಕ ಜನರನ್ನು ಬಲಿ ಪಡೆದ ವಯನಾಡು ಭೂಕುಸಿತಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಮಣ್ಣಿನಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಪಡೆಗಳು, ಸ್ಥಳೀಯ ಪೊಲೀಸರು ಮತ್ತು ಸ್ವಯಂಸೇವಾ ಸಂಸ್ಥೆಗಳ ಸದಸ್ಯರು ರಾತ್ರಿ ಹಗಲೆನ್ನದೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಭೂಕುಸಿತಕ್ಕೆ ತುತ್ತಾಗಿ ಕೇರಳದ ಮೂರು ಜಿಲ್ಲೆಗಳ ಜೀವನದಿಯಾಗಿರುವ ಚಾಲಿಯಾರ್ ನಿನಾಶದ ಸಂಕೇತವಾಗಿ ಬದಲಾಗಿದೆ.
ವಯನಾಡಿನ ಮುಂಡಕ್ಕೆ, ಚೂರಲ್‌ಮಲ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದ ಬಳಿಕ ವಯನಾಡು, ಮಲಪ್ಪುರಂ ಹಾಗೂ ಕೋಯಿಕ್ಕೋಡ್ ಜಿಲ್ಲೆಯ ಜನರ ಜೀವನಾಡಿಯಾಗಿರುವ ಈ ನದಿಯಲ್ಲಿ ಪ್ರಾಣ ಕಳೆದುಕೊಂಡವರ ಶವಗಳು ತೇಲಿ ಬರುತ್ತಿದ್ದು, ಹಲವರನ್ನು ಬೆಚ್ಚಿ ಬೀಳಿಸಿದೆ. ನದಿಯಲ್ಲಿ ತೇಲು ಬರುತ್ತಿರುವ ಮೃರತದೇಹಗಳ ಬಿಡಿಭಾಗಗಳನ್ನು ರಕ್ಷಣಾ ಪಡೆಗಳು ಹೊರತೆಗೆಯುತ್ತಿವೆ.
ಈ ಕುರಿತು ಮಾತನಾಡಿರುವ ಅಧಿಕಾರಿಯೊಬ್ಬರು, ಈವರೆಗೆ ನದಿಯಿಂದ 73 ದೇಹಗಳು ಹಾಗೂ 132 ಭಾಗಗಳನ್ನು ಹೊರತೆಗೆಯಲಾಗಿದೆ. ಎರಡರ ಒಟ್ಟು ಸಂಖ್ಯೆ 205ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 37 ಪುರುಷರು, 29 ಮಹಿಳೆಯರು, 3 ಬಾಲಕರು ಹಾಗೂ 4 ಬಾಲಕಿಯರ ಮೃತದೇಹಗಳಿವೆ.
ಈ ಪೈಕಿ 198 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮುಂದಿನ ಪ್ರಕ್ರಿಯೆಗೆ 195 ದೇಹಗಳನ್ನು ವಯನಾಡ್‌ಗೆ ರವಾನಿಸಲಾಗಿದೆ. ಚಾಲಿಯಾರ್ ನದಿಯ 40 ಕಿ.ಮಿ ವ್ಯಾಪ್ತಿಯಲ್ಲಿ ಶೋಧ ಕಾರ್ಯಚರಣೆ ಮುಂದುವರಿಸಲಾಗಿದೆ. ನೌಕಾಪಡೆ, ಪೊಲೀಸರು, ಅಗ್ನಿ ಶಾಮಕ, ಎನ್‌ಡಿಆರ್‌ಎಫ್ ಹಾಗೂ ಸ್ಥಳೀಯರು ಸೇರಿ ಹಲವು ರಕ್ಷಣಾ ತಂಡಗಳು ಮೃತದೇಹಗಳನ್ನು