ಬೆಂಗಳೂರು : ಸಿದ್ದರಾಮಯ್ಯ ಅವರ ಆದೇಶಕ್ಕೂ ಕಿಮ್ಮತ್ತು ಕೊಡದೆ ಸಚಿವ ಜಮೀರ್ ಅಹ್ಮದ್ ನಿವೃತವನ್ನು ಮುಂದುವರಿಸುವಂತೆ ಸೂಚನೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ, ಅಧಿಕಾರಿಗಳನ್ನು ಸೇವೆಯಲ್ಲಿ ಮುಂದುವರಿಸಬಾರದೆಂದು ಸಿಎಂ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ನಿವೃತ್ತಿ ಆದೇಶ ಹೊರಡಿಸಿದ್ದಾರೆ. ಅಂದಾಗಿಯೂ ಆಗಸ್ಟ್ 31ಕ್ಕೆ ನಿವೃತ್ತಿಯಾಗಲಿರುವ ಇಂಜಿನಿಯರ್ ಎಸ್ ಆರ್ ಬಾಲರಾಜ್ ಅವರ ಸೇವೆಯಲ್ಲಿ ಮುಂದುವರಿಸಿರುವಂತೆ ಸಚಿವರು ಸೂಚಿಸಿದ್ದಾರೆ.
ಕೊಳಗೇರಿ ಮಂಡಳಿ ಚೀಪ್ ಇಂಜಿನಿಯರ್ ಎಸ್ ಆರ್ ಬಾಲರಾಜು ಅವರು ಈ ಎರಡು ವರ್ಷ ಸೇವೆಯಲ್ಲಿ ಮುಂದುವರಿಯುವಂತೆ ಸಚಿವ ಜಮೀರ್ ಅಹ್ಮದ್ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೂಚನೆ ಎಂದು ಸೆಪ್ಟೆಂಬರ್ ಒಂದರಿಂದ ಎರಡು ವರ್ಷಗಳ ಕಾಲ ಎಸ್ ಆರ್ ಬಾಲರಾಜ ರವರನ್ನು ಮುಂದುವರಿಸಲು ಆದೇಶ ಹೊರಡಿಸಲಾಗಿದೆ. ಎಸ್‌ಆರ್ ಬಾಲರಾಜು 35 ವರ್ಷಗಳ ಕಾಲ ಹಳೆ ಕಟ್ಟೆನಾ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು ಆಗಸ್ಟ್ 31ಕ್ಕೆ ನಿವೃತ್ತಿಯಾಗಲಿದ್ದಾರೆ.
ನಿವೃತ್ತ ಅಧಿಕಾರಿಗಳನ್ನು ಕರ್ತವ್ಯಕ್ಕೆ ತೆಗೆದುಕೊಳ್ಳದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಎಲ್ಲಾ ಸಚಿವರಿಗೆ ಆದೇಶ ನೀಡಿದ್ದಾರೆ ಆದರೆ ಸಿಎಂ ಸೂಚನೆಗಳನ್ನು ಧಿಕ್ಕರಿಸಿ ಸಚಿವ ಜಮೀರ್ ಅಹ್ಮದ್ ನಿವೃತ್ತ ಇಂಜಿನಿಯರ್ ಅವರ ಸೇವೆಯನ್ನು ಮುಂದುವರಿಸಲು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.