ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 45 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ದರ್ಶನವನ್ನು ನೋಡಲು ಬನಶಂಕರಿ ದೇವಿ ಪ್ರಸಾದದೊಂದಿಗೆ ಪತ್ನಿ ವಿಜಯ್ ಲಕ್ಷ್ಮಿ ಆಗಮಿಸಿದ್ದಾರೆ. ನೆನ್ನೆ ಭೀಮನ ಅಮಾವಾಸ್ಯೆ ನಿಮ್ಮಿತ್ತ ಶಕ್ತಿ ದೇವತೆ ಬನಶಂಕರಿ ದೇವಾಲಯದಲ್ಲಿ ಸಂಕಲ್ಪ ಪೂಜೆ ಮಾಡಿದರು ಈ ಹಿನ್ನಲೆ ದೇವಿ ಪ್ರಸಾದ ಹಿಡಿದು ದಿನಕರ ತೂಗುದೀಪ್ ಜೊತೆ ಮತ್ತೆ ವಿಜಯಲಕ್ಷ್ಮಿ, ಜೈಲಿಗೆ ಭೇಟಿ ಕೊಟ್ಟಿದ್ದಾರೆ.
ಅಂದಾಗೆ ಕಳೆದ ವಾರ ದರ್ಶನ್ ಸಂಕಷ್ಟವೆಲ್ಲ ನಿವಾರಣೆಯಾಗಲಿ ಎಂದು ಪತ್ನಿ ವಿಜಯಲಕ್ಷ್ಮಿ ಕೊಲ್ಲೂರು ಮೂಕಾಂಬಿಕೆ ದೇವಿಗೆ ಚಂಡಿಕಾ ಯಾಗ ಮಾಡಿದರು. ಅದೇ ರೀತಿ ಇಂದು ಸಹ ವಿಜಯಲಕ್ಷ್ಮಿ ಅವರು ಭೀಮನ ಅಮಾವಾಸ್ಯೆ ಪ್ರಯುಕ್ತ ತಮ್ಮ ಪತಿಯು ಸಂಕಷ್ಟದಿಂದ ಬೇಗ ಬಿಡುಗಡೆ ಹೊಂದಿದರು ಎಂದು ಶ್ರೀ ಬನಶಂಕರಿ ದೇವಸ್ಥಾನಕ್ಕೆ ಹೋಗಿ ಸಂಕಲ್ಪ ಪೂಜೆ ಮಾಡಿದರು.
ಇವರ ಜೊತೆಯಲ್ಲಿಯೇ ದಿನಕರ್ ತೂಗುದೀಪ್ ಅಣ್ಣನ ಕಷ್ಟಗಳಿಗೆ ಸ್ಪಂದಿಸುವಂತೆ ಅತ್ತಿಗೆಯ ಜೊತೆಯಲ್ಲಿಯೇ ಇದ್ದು ಅವರ ಕೆಲಸಗಳಿಗೆ ಸಹಾಯ ಮಾಡುತ್ತಾ ಕಾನೂನು ಹೋರಾಟಕ್ಕೆ ಸಿದ್ಧ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ ಸಂಕಲ್ಪ ಮಾಡಿಕೊಂಡರು.
ವಿಜಯಲಕ್ಷ್ಮಿ ಅವರು ದರ್ಶನ್ ಅವರನ್ನು ಪಾರು ಮಾಡಲು ಮತ್ತು ಹಲವಾರು ದೇವಾಲಯಗಳಿಗೆ ಭೇಟಿ ನೀಡಿ ಹೋರಾಟಕ್ಕೆ ಸಿದ್ಧವಾಗಲು ಅವರ ಪ್ರಯತ್ನವನ್ನು ಯಾವಾಗಲೂ ಬಿಡದೆ ಒಂಟಿಯಾಗಿ ಹೊರಡುತ್ತಿದ್ದ ವಿಜಯಲಕ್ಷ್ಮಿಗೆ ದಿನಕರ್ ತೂಗುದೀಪ್ ಶಕ್ತಿ ಅವರಿಂದ ಬಂದಿದ್ದು ಕುಟುಂಬದಲ್ಲಿ ಯಾವುದೇ ಪ್ರಯಾಣಕ್ಕೆ ಹೋದರೂ ಕಷ್ಟ ಬಂದಾಗ ಮಾತ್ರ ತಮ್ಮ ಬಂಧು ಬಳಗ ಇರುತ್ತಾರೆ.