Breaking
Mon. Dec 23rd, 2024

ಉದ್ಯೋಗ ಕೋಟಾ ಸುಧಾರಣೆಗಳ ಕುರಿತು ವಾರದಿಂದ ನಡೆಸುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ನಂತರ ಬಾಂಗ್ಲಾದೇಶ ಪ್ರಧಾನಿ ರಾಜೀನಾಮೆ…!

ಡಾಕಾ : ಉದ್ಯೋಗ ಕೋಟಾ ಸುಧಾರಣೆಗಳ ಕುರಿತು ವಾರದಿಂದ ನಡೆಸುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ನಂತರ ಬಾಂಗ್ಲಾದೇಶ ಪ್ರಧಾನಿ ರಾಜೀನಾಮೆ ನೀಡಿದ್ದಾರೆ ಎಂದು ಬಾಂಗ್ಲಾದೇಶ್ ಹೈ ಕಮಿಷನ್ ಅಧಿಕಾರಿಗಳು ದೆಹಲಿಯಲ್ಲಿ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಶೇಖ್ ಹಸೀನಾ ರಾಜೀನಾಮೆ ಬಳಿಕ ಇಂದು ಡಾಕಾದಿಂದ ಸುರಕ್ಷಿತ ಸ್ಥಳಕ್ಕೆ ಪಲಾಯನ ಮಾಡಿದ್ದಾರೆ. ರೋಹಿಟರ್ಸ್ ಪ್ರಕಾರ ಅವರು ಇಂದು ಭಾರತಕ್ಕೆ ಬಂದಿಳಿದಿದ್ದಾರೆ.

ಆಕೆ ಮತ್ತು ಸಹೋದರಿ ತನ್ನ ಅಧಿಕೃತ ನಿವಾಸದ ಗೊನೂ ಭಾಬನ್ನಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬಾಂಗ್ಲಾದೇಶದಲ್ಲಿ ಕನಿಷ್ಠ 300 ಜನರನ್ನು ಬಲಿ ತೆಗೆದುಕೊಂಡ ಹಿಂಸಾಚಾರದ ಹಿನ್ನೆಲೆಯಲ್ಲಿ ಪ್ರಧಾನಿ ಶೇಕ್ ಹಸೀನಾ ಇಂದು ರಾಜೀನಾಮೆ ನೀಡಿದ್ದಾರೆ ಎಂದು ದೆಹಲಿಯಲ್ಲಿರುವ ಬಾಂಗ್ಲಾದೇಶ ಕಮಿಷನ್ ಅಧಿಕಾರಿಗಳು ತಿಳಿಸಿದ್ದಾರೆ. 

ಬಾಂಗ್ಲಾದ ದಿನಪತ್ರಿಕೆ ವರದಿಗಳ ಪ್ರಕಾರ ಅವರು ತನ್ನ ಸಹೋದರಿಯೊಂದಿಗೆ ದೇಶವನ್ನು ತೆರೆದಿದ್ದಾರೆ ಈಗಾಗಲೇ ಬಾಂಗ್ಲಾದೇಶ ಪ್ರಧಾನಿ ಹಸೀನಾ ಅವರು ಭಾರತದ ಅಗರ್ತಲಾಕೆ ಬಂದು ಇಳಿದಿದ್ದಾರೆ. ದೇಶದ ಸೇನಾ ಮುಖ್ಯಸ್ಥ ವಾಕರ್- ಉಜ್- ಜಮಾನ್  ಅವರು ಇಂದು ಸಂಜೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎಂದು ಡೈಲಿ ಸ್ಟಾರ್ ವರದಿ ಮಾಡಿದೆ. ಬಾಂಗ್ಲಾದೇಶದ ಬೀದಿಗಳಲ್ಲಿ ಭಾನುವಾರ ಬೇಕಾದರೆ ನಡೆದಿದ್ದು ಸಾವಿನ ಸಂಖ್ಯೆ 300ಕ್ಕೆ ಏರಿದೆ ಎಂದು ಎ.ಎಫ್.ಪಿ ವರದಿ ಮಾಡಿದೆ.

ಭಾರತದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಎಲ್ಲಾ ನಾಗರಿಕರಿಗೆ ಬಾಂಗ್ಲಾದೇಶಕ್ಕೆ ಪ್ರಯಾಣಿಸುವುದನ್ನು  ತಪ್ಪಿಸುವಂತೆ ಮತ್ತು ಈಗಾಗಲೇ ಅಲ್ಲಿರುವ ತೀವ್ರ ಎಚ್ಚರಿಕೆ ವಹಿಸಲು ಢಾಕಾದಲ್ಲಿರುವ ಐ ಕಮಿಷನ್ ನೊಂದಿಗೆ  ಸಂಪರ್ಕದಲ್ಲಿರಲು ಸಲಹೆ ನೀಡಿದ್ದಾರೆ. 

ಬಾಂಗ್ಲಾದೇಶದಲ್ಲಿ ಐದು ದಶಕದ ಹಿಂದೆ ದಕ್ಷಿಣ ಏಷ್ಯಾ ರಾಷ್ಟ್ರದ ಜನನದ ನಂತರ ನಡೆದ ಈ ಕೆಟ್ಟ ಹಿಂಸಾಚಾರದಲ್ಲಿ ಹೆಚ್ಚಿನ ಜನರು ಸಾವನ್ನಪ್ಪಿರುವುದು ಅವರು ಸೋಮವಾರ ದೇಶವನ್ನು ತೆರೆದಿದ್ದಾರೆ ಎಂದು ಮಾಧ್ಯಮಗಳು ವರದಿಯಲ್ಲಿ ತಿಳಿಸಿವೆ.

ಪ್ರತಿಭಟನೆಕಾರರು ಪ್ರಧಾನಿಯವರ ಅಧಿಕೃತ ನಿವಾಸಕ್ಕೆ ನುಗ್ಗಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಭಾನುವಾರ ನಡೆದ ಘರ್ಷಣೆಯಲ್ಲಿ 14 ಪೊಲೀಸರು ಸೇರಿದಂತೆ ಕನಿಷ್ಠ 101 ಜನರು ಸಾವನ್ನಪ್ಪಿದ್ದಾರೆ ಎಂದು ಬಂಗಾಳಿ ಭಾಷೆಯ ಪ್ರಮುಖ ಪತ್ರಿಕೆ ಪ್ರೋಥೋಮ್  ಅಲೋ ವರದಿ ಮಾಡಿದೆ. ಹಿಂಸಾಚಾರದಿಂದ ಮೊಬೈಲ್ ಇಂಟರ್ನೆಟ್ ಅನ್ನು ಕಡಿತಗೊಳಿಸಲಾಗಿದೆ ಮತ್ತು ಅನಿರ್ದಿಷ್ಟ ಅವಧಿಗೆ ರಾಷ್ಟ್ರ ವ್ಯಾಪ್ತಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

 

 

Related Post

Leave a Reply

Your email address will not be published. Required fields are marked *