ಮಂಡ್ಯ : ಕಾಂಗ್ರೆಸ್ ಆಂದೋಲನ ಸಭೆಯಲ್ಲಿ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯ 2010 ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು ಇದಕ್ಕೆ ಬರಲ್ಲ ಎಂದು ಹೇಳಿದರು ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಎರಡು ತಿಂಗಳಿಂದ ಹಣ ಬಿಡುಗಡೆಯಾಗಿಲ್ಲ ಎನ್ನುತ್ತಲೇ ದೊಡ್ಡ ಅಪ್ಡೇಟ್ ಮಾಹಿತಿ ನೀಡಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಮಂಗಳವಾರ ನಡೆದ ಜನಾಂಗನ ಸಭೆಯಲ್ಲಿ ಉಪ ಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಭಾಷಣ ಮಾಡುತ್ತಾ ಬಡವರ ಪರವಾಗಿರುವ ಕಾಂಗ್ರೆಸ್ ಅಧಿಕಾರದಲ್ಲಿದೆ ಬೆಲೆ ಏರಿಕೆಯಿಂದ ಬಡವರು ತತ್ತರಿಸಿದ್ದರು ಈ ವೇಳೆ ಪಂಚ ಗ್ಯಾರಂಟಿ ಕೊಟ್ಟ ಕಾಂಗ್ರೆಸ್ ಸರ್ಕಾರ ನೋಡಿದಂತೆ ನಡೆದಿದೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಬರುತಿದೆಯೋ ಇಲ್ಲವೋ ಎಂಬ ಪ್ರಶ್ನೆ ಮಾಡಿದರು ಆಗ ವೇದಿಕೆ ಮುಂಭಾಗ ನೆರೆದಿದ್ದ ಮಹಿಳೆಯರು ಬರುತ್ತಿಲ್ಲ ಬರುತ್ತಿಲ್ಲ ಎಂದು ಕೂಗಿದರು ಇದರಿಂದ ಶಿವಕುಮಾರ್ ಬರುತ್ತೆ ಬರುತ್ತೆ ಕಾಯುತ್ತೀರಿ ಕಳೆದ ಒಂದು ಎರಡು ತಿಂಗಳಿಂದ ಮಾತ್ರ ಬಂದಿಲ್ಲ ಅನುದಾನ ಬಿಡುಗಡೆಯಾಗಿದೆ ನಿಮ್ಮ ಖಾತೆಗೆ ಹಣ ಬರಲಿದೆ ಎಂದು ದೊಡ್ಡ ಮಾಹಿತಿ ನೀಡಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಆಗಿ ನಮ್ಮ ಸರ್ಕಾರದ ಗ್ಯಾರಂಟಿ ನಿಲ್ಲಿಸಬೇಕೆಂದು ಪ್ರಯತ್ನ ಮಾಡುತ್ತಿವೆ. 10 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ತೆಗೆಯುವುದಾಗಿ ಎಚ್ ಡಿ ಕುಮಾರಸ್ವಾಮಿ ಹೇಳುತ್ತಾರೆ ಬ್ರಿಟಿಷರ ಕೈಯಲ್ಲಿ ಕಾಂಗ್ರೆಸ್ ಮುಗಿಸಲು ಆಗ್ಲಿಲ್ಲ ಕುಮಾರಸ್ವಾಮಿ ಕೈಯಲ್ಲಿ ಆಗುತ್ತಾ ನಂದು 10 ತಿಂಗಳು ಸರ್ಕಾರ ಅಲ್ಲ ಕುಮಾರಣ್ಣ ನಮ್ದು 10 ವರ್ಷದ ಸರ್ಕಾರ ನಿಮ್ಮ ಹಣೆಬರಯಲ್ಲಿ ಕಾಂಗ್ರೆಸ್ ಸರ್ಕಾರ ಒಂದೇ ಒಂದು ಕಾರ್ಯಕ್ರಮವನ್ನು ನಿಲ್ಲಿಸಲು ಆಗಲ್ಲ ನಾವು ಭಾವನೆ ಮೇಲೆ ರಾಜಕಾರಣ ಮಾಡಲ್ಲ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ ಎಂದು ತಿರುಗೇಟು ನೀಡಿದರು.
ನಿಮ್ಮೊಂದಿಗೆ ಮುಸ್ಲಿಮರು ಇಲ್ಲ ಎಂದರೆ ನೀವು ಎಂಎಲ್ಎ ಆಗ್ತಿರಲಿಲ್ಲ ನಿಮ್ಮ ತಂದೆ ಮುಖ್ಯಮಂತ್ರಿ ಆಗ್ತಾ ಇರ್ಲಿಲ್ಲ ಈಗ ಮುಸ್ಲಿಮರಿಗೆ ಹಾಕಿಲ್ಲ ಅಂತ ಧಮ್ಕಿ ಹಾಕುತ್ತಾರೆ ನಿಮ್ಮ ತಂದೆ ಮುಂದಿನ ಜನ್ಮದಲ್ಲಿ ಮುಸ್ಲಿಮಾಗಿ ಹುಟ್ಟುತ್ತೇನೆ ಎಂದಿದ್ದು ನೆನಪಿಸಿಕೊಳ್ಳಿ ಕುಮಾರಸ್ವಾಮಿ ಸರ್ವಧರ್ಮದ ಶಾಂತಿ ತೋಟ ಭಾರತ ನೇಣು ಬಿಜೆಪಿಗೆ ಹೋಗಿ ಮಂತ್ರಿಯಾದ ತಕ್ಷಣ ಯಾರನ್ನು ಸಂವಿಧಾನದಿಂದ ಓಡಿಸಲು ಆಗಲ್ಲ ನಿನ್ನ ಧಮ್ಕಿಗೆ ಮುಸ್ಲಿಮರು ಹೆದರಲ್ಲ ಪೆನ್ ಡ್ರೈವ್ ವಿಚಾರದಲ್ಲಿ ನಾವ್ಯಾರು ಬಂದಿರ್ಲಿಲ್ಲ ಮಹಾನ್ ನಾಯಕ ಪೆನ್ ಡ್ರೈ ಹಂಚಿದ್ದು ಎಂದಿದ್ದೆ ಅದಕ್ಕೆ ಆಗಬೇಕಾಗಿತ್ತು ನೀನು ಸಿಎಂ ಆಗಿದ್ದಾಗ ಡಿಕೆ ಶಿವಕುಮಾರ್ ಅಪ್ಪ-ಅಮ್ಮನಿಗೆ ಹುಟ್ಟಿಲ್ಲ ಅಂದಾಗೆ ಎದುರಲ್ಲಿ ಸಾತನೂರಿಗೆ ಬಂದು ಕ್ಷಮೆ ಕೇಳಿದೆ ದೊಡ್ಡ ಹಲದಹಳ್ಳಿ ಕೆಂಪೇಗೌಡನ ಮಗ ಯಾರಿಗೂ ಹೆದರುವ ಮಗ ಅಲ್ಲ. ನನ್ನ ಅಜ್ಜಯ್ಯನ ಸುದ್ದಿ ನಿಮಗೆ ಬೇಡ ಎಂದು ಕಿಡಿಕಾರಿದರು. ಯಡಿಯೂರಪ್ಪರನ್ನು ಜೈಲಿಗೆ ಹಾಕಿಸಿದ್ದು ಯಾರು ಧರ್ಮಸ್ಥಳ ಶ್ರೀ ಮಂಜುನಾಥ ಸನ್ನಿಧಿಯಲ್ಲಿ ಯಾಕೆ ಆಣೆ ಪ್ರಮಾಣ ಮಾಡಲು ಹೋಗಿದ್ರಿ, ಎಲ್ಲವೂ ರಾಜ್ಯದ ಜನತೆಗೆ ಗೊತ್ತಿದೆ ತಿಮ್ಮಪ್ಪನ ಕಾಸು ಬಿಡಲಿಲ್ಲ ಮಂಜುನಾಥ ಬಿಡಲ್ಲ ಮಂಜುನಾಥ ಸ್ವಾಮಿ ಸಹವಾಸಕ್ಕೆ ಹೋಗಬೇಡ ನನ್ನ ಅಧ್ಯಕ್ಷತೆಯಲ್ಲಿ 136 ಸೀಟುಗಳು ಬಂತು ನಿನ್ನ ಅಧ್ಯಕ್ಷತೆಯಲ್ಲಿ ಎಷ್ಟು ಬರಿ 19 ಸೀಟು ಬಂದಿದೆ ಈಗ ನೀನು ಎರಡು ಸೀಟ್ ಗೆದ್ದಿದ್ದು ಬಿಜೆಪಿ ಬ್ಲಾಕ್ಮೇಲ್ ಮಾಡ್ತಾ ಇದೆ. ರೇವಣ್ಣಂದು ಬೇರೆ ಕುಟುಂಬ ಅಂತ ಅಂದು ಈಗ ನನ್ನ ಕುಟುಂಬದ ಮರ್ಯಾದೆ ತೆಗೆದ ಅಂತ ಪ್ರೀತಂಗೆ ಹೇಳ್ತೀಯಾ ಪ್ರಜ್ವಲ್ಗೆ ಟಿಕೆಟ್ ಕೊಡಬೇಡಿ ಎಂದು ದೇವರಾಜ ಗೌಡ ಕೈಯಲ್ಲಿ ಪತ್ರ ಬರೆಸಿದ್ದು ಯಾರು ಸ್ವಂತ ಅಣ್ಣ ನ ಮಗನನ್ನೇ ಅವನು ಸಹಿಸಲಿಲ್ಲ ಇದು ನಿನ್ನ ನನ್ನ ಏಳಿಗೆಗೆ ಸಹಿಸುತಾನ ನೀನು ಹತ್ತುಸಾವಿರ ಜನರಿಗೆ ಕೆಲಸ ಕೊಡುವ ಕಾರ್ಖಾನೆ ತಂದರೆ ನನ್ನ ಬೆಂಬಲ ಇರುತ್ತೆ ಎಂದು ಹೇಳಿದರು.
ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಆದರೆ ಕಾಂಗ್ರೆಸ್ ಸಮಾಜ ಜೋಡಿಸುವ ಕೆಲಸ ಮಾಡುತ್ತಿದೆ ಕುಮಾರಸ್ವಾಮಿ ಪಾದ ಯಾತ್ರೆ ಬೇಡ ಎಂದು ಹೇಳಿ ಮತ್ತೆ ಏಕೆ ಒಪ್ಪಿಕೊಂಡೆ ಹೇಳು ಸಿದ್ದರಾಮಯ್ಯ ಏನು ಮಾಡಬಾರದ ತಪ್ಪು ಮಾಡಿದ್ದಾರೆ ಸಿದ್ದರಾಮಯ್ಯ ಕಳ್ತತನ ಮಾಡಿದ್ರಾ? ಸರ್ಕಾರದ ಜಮೀನು ಹೊಡೆದಿದ್ರಾ ? ಅಣ್ಣನ ಸೈಟು ಕೊಟ್ಟಿರೋದು ಸರ್ಕಾರ ಪಡೆದು ಬೇರೆ ಜಾಗ ಕೊಟ್ಟಿದೆ ತಪ್ಪೇನಿದೆ ಎಂದು ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದರು.