ಚಿತ್ರದುರ್ಗ : ನಗರದ ಚಳ್ಳಕೆರೆ ರಸ್ತೆಯ ಶ್ರೀ ರಾಮ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 61ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸಹಕಾರ ಕೇಂದ್ರ ಬ್ಯಾಂಕ್ 202324ನೇ ಸಾಲಿನಲ್ಲಿ ರೂ. 11.83 ಕೋಟಿ ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ತಿಳಿಸಿದರು.
ಬ್ಯಾಂಕ್ 2023 24ನೇ ಸಾಲಿಗೆ 573 ಕೋಟಿ ಸಂಗ್ರಹಣೆ ಮಾಡಿದ್ದು, 57921 ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ರೂ 480.77 ಕೋಟಿ ಅಲ್ಪಾವಧಿ ಬೆಳೆ ಸಾಲ ವಿತರಣೆ ಮಾಡಿದೆ ಈ ಪೈಕಿ ಪರಿಶಿಷ್ಟ ಜಾತಿಯ 6980 ರೈತರಿಗೆ ರೂ 45 ಪಾಯಿಂಟ್ 33 ಕೋಟಿ ಮತ್ತು ಪರಿಶಿಷ್ಟ ಪಂಗಡ 8805 ರೈತರಿಗೆ ರೂ 65.04 ಕೋಟಿ ಸಾಲ ವಿಸ್ತರಿಸಿದೆ.