ಚಿತ್ರದುರ್ಗ : ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಪೀಠ ತ್ಯಾಗ ಮಾಡಿ ಉತ್ತರ ಅಧಿಕಾರಿಯನ್ನು ನೇಮಕ ಮಾಡುವ ವಿಚಾರ ಸದ್ಯ ಚರ್ಚೆಯಲ್ಲಿದೆ. ಶ್ರೀಗಳ ಪೀಠ ತ್ಯಾಗ ಉತ್ತರ ಅಧಿಕಾರಿಯನ್ನು ನೇಮಿಸಿ ಮತ್ತು ಹಿರಿಯರ ಗುರುಗಳ ಅವಧಿಯ ರೂಪಿತವಾದ ಬೈಲಾ ಯಥಾವತ್ತಾಗಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾ ಸಭಾಾಧ್ಯಕ್ಷ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ಸಾದರ ಲಿಂಗಾಯತ ಸಮಾಜದ ಮುಖಂಡರ ಸಭೆ ನಡೆಯಿತು.
ಡಾಕ್ಟರ್ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ನಿವೃತ್ತಿ ಘೋಷಿಸಿ ಉತ್ತರಾಧಿಕಾರಿ ಘೋಷಣೆ ಮಾಡಬೇಕೆಂದು ಶ್ರೀ ಏಕವ್ಯಕ್ತಿ ಡೀಡ್ಸಿ ಮಠದ ಶಿವಕುಮಾರ ಸ್ವಾಮೀಜಿಗಳ ಮೂಲ ಬೈಲಾ ಯಥಾವತ್ತಾಗಿ ಜಾರಿಗೊಳಿಸಿದ ಲಿಂಗಾಯತ ಸಮಾಜ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳಿಂದ ರೂಪಿತವಾದ ನಿಯಮಗಳ ಪ್ರಕಾರ 60 ವರ್ಷದ ನಂತರ ಪೀಠ ತ್ಯಾಗ ಮಾಡಿ ಉತ್ತರ ಅಧಿಕಾರಿ ನೇಮಿಸಬೇಕು ಆದರೆ ಡಾ. ಶಿವಮೂರ್ತಿ ಶ್ರೀಗಳಿಂದ 78 ವರ್ಷ ವಯಸ್ಸಾಗಿದೆ ಹಿರಿಯ ಗುರುಗಳ ನಿಯಮ ಪಾಲನೆಯಾಗಿಲ್ಲ ಎಂಬುದು ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಡಾಕ್ಟರ್ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ 30 ವರ್ಷಗಳ ಹಿಂದೆ ಟ್ರಸ್ಟ್ ರಚಿಸಿ ಏಕವ್ಯಕ್ತಿ ಡೀಡ್ ರಚಿಸಿದ್ದಾರೆ. ಆದರೆ ಇದು ಮಠದ ನೇಮದ ಪ್ರಕಾರದ ವಿರುದ್ಧ ಭಕ್ತರ ತೀರ್ಮಾನವೇ ಅಂತಿಮ ಆಗಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ 30 ವರ್ಷಗಳ ಹಿಂದೆ ಟ್ರಸ್ಟ್ ರಚಿಸಿ ಏಕವ್ಯಕ್ತಿ ಡೀಡ್ ರಚಿಸಿದ್ದಾರೆ ಇದು ಭಕ್ತರಿಗೆ ಈಗ ಗೊತ್ತಾಗಿದೆ ಈ ನ್ಯಾಯಾಲಯದ ಮೆಟ್ಟಿಲೇರಿದ್ದು ಇದು ಸಹಜವಾಗಿ ಭಕ್ತರ ಆಕ್ರೋಶಕ್ಕೆ ಸ್ವಾಮೀಜಿಗಳ ಪೀಠ ತ್ಯಾಗಕ್ಕಾಗಿ ಕಳೆದ ಹಲವು ವರ್ಷಗಳಿಂದ ಸಭೆಗಳು ನಡೆಯುತ್ತಿದ್ದರೂ ಮುನ್ನಡೆಗೆ ಬಂದಿಲ್ಲ ಆದರೆ ಇದೀಗ ಶಾಸಕ ಶಾಮನೂರು ಶಿವಶಂಕರಪ್ಪ ಪ್ರವೇಶಕ್ಕೆ ಮಹತ್ವವಿದೆ.
ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಹಿಂದೆ ಬಹಿರಂಗ ಸಭೆಯಲ್ಲಿ ಪೀಠ ತ್ಯಾಗ ಮಾಡುವುದಾಗಿ ಹೇಳಿದ್ದರು ಆದರೆ ಭಕ್ತರು ಇಂತಹ ನಿರ್ಧಾರ ಕೈಗೊಂಡಿರಿ ನೀವೇ ಮುಂದುವರಿಯಬೇಕು ಎಂಬ ಒತ್ತಾಯದ ಸ್ವಾಮೀಜಿಯವರು ಪೀಠದಲ್ಲಿ ಮುಂದುವರೆದಿದ್ದಾರೆ. ಜೊತೆಗೆ ಉತ್ತರ ಅಧಿಕಾರಿ ನೇಮಕ ವಿಚಾರವನ್ನು ಭಕ್ತರಿಗೆ ಬಿಟ್ಟಿದ್ದಾರೆ ಅಧಿಕಾರಿಯನ್ನು ಭಕ್ತರ ನೇಮಕ ಮಾಡಿ ಎಂದು ಸ್ವಾಮೀಜಿ ಹೇಳಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
ಪೀಠ ತ್ಯಾಗ ಉತ್ತರಾಧಿಕಾರಿ ನೇಮಕ ಮತ್ತು ಹಿರಿಯ ಗುರುಗಳ ಅವಧಿಯಲ್ಲಿ ರೂಪಿತವಾದ ಬೈಲಾ ಯಥಾವತ್ತಾಗಿ ಜಾರಿಗೊಳಿಸಲು ಶಾಮನೂರು ಶಿವಶಂಕರಪ್ಪ ನವರ ನೇತೃತ್ವದ ಸಾಗರ ಲಿಂಗಾಯಿತ ಸಮಾಜದ ಮುಖಂಡ ಆಗಸ್ಟ್ 18 ರಂದು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಮನವಿ ಮಾಡಲಿದ್ದಾರೆ.
ದಾವಣಗೆರೆಯ ಅಪೂರ್ವ ರೆಸಾರ್ಟ್ ನಲ್ಲಿ ನಡೆದ ಸಮಾಲೋಚನಾ ಸಭೆಯನ್ನು ವಿರೋಧಿಸಿ ತರಳುಬಾಳು ಮಠದ ಭಕ್ತರು ಇಂದು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿಯಾಗಿ ಸಭೆ ನಡೆಸಲಿದ್ದಾರೆ ಈ ಸಭೆಗೆ ಎಲ್ಲಾ ಭಕ್ತರು ಆಗಮಿಸುವಂತೆ ಮನವಿ ಮಾಡಿಕೊಂಡರು.