ಬೆಂಗಳೂರು : ಶ್ರಾವಣ ಮಾಸ ಆರಂಭಗೊಂಡಿದ್ದು ಸಾಲು ಸಾಲು ಸಾಲು ಹಬ್ಬಗಳಿಗೆ ದಿನಗಣನೆ ಆರಂಭದ ಬೆನ್ನಲ್ಲೇ ಹಬ್ಬಕ್ಕೆ ಬೇಕಾದ ಎಲ್ಲಾ ವಸ್ತುಗಳ ದರ ವಾರದಲ್ಲಿ ಡಬಲ್ ಆಗಿ ಹೋಗಿದೆ ಇದೀಗ ಬೆಂಗಳೂರಿನಲ್ಲಿ ತರಕಾರಿ ಹಣ್ಣು ಹಂಪಲುಗಳ ದರ ಮತ್ತು ಹೂವುಗಳ ಬೆಲೆ ಒಂದೇ ಬಾರಿ ಏರಿಕೆಯಾಗಿದೆ ಹೀಗಾಗಿ ಕಳೆದ ವಾರ ಹೋಲಿಕೆ ಮಾಡಿದರೆ ತರಕಾರಿಗಳ ಬೆಲೆ 10 ರಿಂದ 20 ರೂಪಾಯಿ ಏರಿಕೆಯಾಗಿದೆ ಹೂವಿನ ಬೆಲೆ 200 ಏರಿಕೆಯಾಗಿದೆ. . ಅವುಗಳ ಪರಿಷ್ಕೃತ ದರದ ವಿವರಗಳು ಈ ಕೆಳಗಿನಂತೆ ಗೋಚರಿಸುತ್ತವೆ.
ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆಯೇ ನಾಗರಪಂಚಮಿ, ವರಮಹಾಲಕ್ಷ್ಮಿ, ಶ್ರಾವಣ ಶನಿವಾರ, ಗೌರಿ ಗಣೇಶ ಚತುರ್ಥಿಗಳು ಒಂದರ ಮೇಲೊಂದು ಬರುತ್ತಲೇ ಇರುತ್ತವೆ. ಈ ಅವಧಿಯಲ್ಲಿ ತರಕಾರಿ, ಹೂವು, ಹಣ್ಣುಗಳ ಬೇಡಿಕೆ ಹೆಚ್ಚು ಹೀಗಾಗಿ ತರಕಾರಿಗಳ ಬೆಲೆ ದುಪ್ಪಟ್ಟಾಗಿದೆ ಟೊಮೊಟೊ, ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ಕ್ಯಾರೆಟ್, ಬೀನ್ಸ್, ಬೀನ್ಸ್ ಬೆಲೆ ವಿಪರೀತ ಜಾಸ್ತಿಯಾಗಿದೆ.
ಕೆಜಿ ತರಕಾರಿಗಳ ಬೆಲೆ ಪಟ್ಟಿ
- ನಾಟಿ ಬೀನ್ಸ್ – 100
- ಟೊಮ್ಯಾಟೋ – 50
- ಬಿಳಿ ಬಂದನೆ – 120
- ಮೆಣಸಿನ ಕಾಯಿ – 80
- ನುಗ್ಗೆಕಾಯಿ – 200
- ಊಟಿ ಕ್ಯಾರೆಟ್ – 200
- ನವಿಲ್ಕೋಸು – 60
- ಮೂಲಂಗಿ – 60
- ಹಿರೇಕಾಯಿ – 80
- ಆಲೂಗಡ್ಡೆ – 60
- ಈರುಳ್ಳಿ – 60
- ಕ್ಯಾಪ್ಸಿಕಂ – 85
- ಹಾಗಲಕಾಯಿ – 85
- ಕೊತ್ತಂಬರಿ ಸೊಪ್ಪು – 70
- ಶುಂಠಿ – 185
- ಬೆಳ್ಳುಳ್ಳಿ – 350
- ಪಾಲಕ್ – 46
- ಪುದಿನ – 92
- ನಾಟಿ ಬಟಾಣಿ – 300
- ಫಾರಂ ಬಟಾಣಿ – 200
ಹಣ್ಣುಗಳ ಬೆಲೆ ಪಟ್ಟಿ ಕೆಜಿಗೆ
- ಸೇಬು- 350
- ದ್ರಾಕ್ಷಿ – 300
- ಮೋಸಂಬಿ – 140
- ಸಪೋಟ – 200
- ಡ್ರ್ಯಾಗನ್ – 200
- ಬಟರ್ – 250
- ಯಾಲಕ್ಕಿ – 200
- ಪಪ್ಪಾಯಿ – 50
- ಕಲ್ಲಂಗಡಿ – 50
- ಅನಾನಸ್ – 120
- ಕಿವಿ ಫ್ರೂಟ್ –
ಹೂವುಗಳ ಬೆಲೆ ರೂಪಾಯಿಗಳಲ್ಲಿ
- ಗುಲಾಬಿ ಸೇವಂತಿಗೆ – 120
- ಸೇವಂತಿಗೆ 200
- ಅಣಗಲು 200
- ಸುಗಂಧರಾಜ 100
- ಮಲ್ಲಿಗೆ 300
- ಚೆಂಡು 20
- ತುಳಸಿ 40
- ವೈಟ್ ಸೇವಂತಿಗೆ 150
- ಹಳದಿ ಸೇವಂತಿಗೆ ಮೊಳಕೆ 250
- ಕಾಕಡ ಕೆಜಿ 400
- ಸಂಪಿಗೆ 200
ತರಕಾರಿ ಹಣ್ಣುಗಳ ಜೊತೆ ಹೂಗಳ ಬೆಲೆ ಸಿಕ್ಕಾಪಟ್ಟೆ ದುಬಾರಿಯಾಗಿದೆ. ಹಬ್ಬಗಳ ಕಾರಣದಿಂದ ಈ ವಾರದ ಕೊಂಚ ಬೆಲೆ ಏರಿಕೆಯಾಗುತ್ತಿರುವ ವ್ಯಾಪಾರಸ್ಥರು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಮಳೆ ಇರುವ ಕಾರಣ ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ ಜೊತೆಗೆ ಹೂಗಳ ಪ್ರಮಾಣವೂ ಕಡಿಮೆಯಾಗುತ್ತಿದೆ ಹೀಗಾಗಿ ಬೆಲೆ ಏರಿಕೆಯಾಗಲಿದೆ ಎಂದು ವ್ಯಾಪಾರಸ್ಥರು ಪ್ರಕಟಿಸಿದ್ದಾರೆ.