Breaking
Tue. Dec 24th, 2024

ಆ.10ರಂದು ಜೈವಿಕ ಇಂಧನ ಹಾಗೂ ಸೌರಶಕ್ತಿ ವಿಚಾರ ಸಂಕಿರಣ

ಚಿತ್ರದುರ್ಗ ಆ.06 : ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇದೇ ಆಗಸ್ಟ್ 10 ರಂದು ಬೆಳಿಗ್ಗೆ 10ಕ್ಕೆ ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಅಂಗವಾಗಿ ರೈತರಿಗೆ ಜೈವಿಕ ಇಂಧನ ಹಾಗೂ ಸೌರಶಕ್ತಿ ಕುರಿತು ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಚಿತ್ರದುರ್ಗ ಜೆ.ಐ.ಟಿ ಕಾಲೇಜಿನ ಜೈವಿಕ ಸಂಶೋಧನಾ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ, ಸೋಲಾರ್ ಹಾಗೂ ಬೆಂಗಳೂರಿನ ಸೆಲ್ಕೋ ಫೌಂಡೇಶನ್ ಸಂಸ್ಥೆಯಲ್ಲಿ ಕಾರ್ಯಾಗಾರವನ್ನು ನಿರ್ವಹಿಸಲಾಗಿದೆ, ಕಾರ್ಯಗಾರದಲ್ಲಿ ಜೆ.ಎಂ.ಐ.ಟಿ ಕಾಲೇಜಿನ ಜೈವಿಕ ಸಂಶೋಧನಾ ಸಂಸ್ಥೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕ ಕೇಂದ್ರದ ಮುಖ್ಯ ಸಂಯೋಜಕ ಡಾ.ರಾಜೇಶ್, ತಾಂತ್ರಿಕ ಅಧಿಕಾರಿ ಬಿ. ಕೆ.ಸುನೀಲ್ ಕುಮಾರ್ ಅವರು ಜೈವಿಕ ಇಂಧನ-ಪರಿಸರ ಸ್ನೇಹಿತ (ಡಿಸೇಲ್& ಪೆಟ್ರೋಲ್‌ಗೆ ಪರ್ಯಾಯ ಇಂಧನ) ಕುರಿತು ಮಂಡನೆ ಮಾಡುತ್ತಾರೆ.

ಸೆಲ್ಕೋ ಸೋಲಾರ್ನ ವಲಯ ವ್ಯವಸ್ಥಾಪಕ ಮಂಜುನಾಥ ಭಾಗವತ್ ಹಾಗೂ ಸೆಲ್ಕೋ ಫೌಂಡೇಶನ್ನ ತಿಪ್ಪೇಶ್ ಅವರು ಸೌರಶಕ್ತಿ ಆಧಾರಿತ ಜೀವನೋಪಾಯ ಚಟುವಟಿಕೆ ಹಾಗೂ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆ ಕುರಿತು ಮಾಹಿತಿ ಲಭ್ಯವಿದೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಹುಲಿಕೆರೆಯ ಪ್ರಗತಿಪರ ಕೃಷಿಕ ಹೆಚ್.ವಿ.ಸಜ್ಜನ್ ಅವರು ರೈತರಿಗೆ ತಾವು ಮಾಡುತ್ತಿರುವ ವೈವಿದ್ಯಮಯ ಕೃಷಿ, ಹೈನುಗಾರಿಕೆ, ಎಣ್ಣೆಗಾಣದಿಂದ 30ಕ್ಕೂ ಹೆಚ್ಚು ಮೌಲ್ಯಯುತ ಉತ್ಪನ್ನಗಳ ಕುರಿತು ಅನುಭವವನ್ನು ಹಂಚಿಕೊಂಡಿದ್ದಾರೆ. ನಂತರ ಸೌರಶಕ್ತಿ ಉಪಕರಣ ಬಳಸಿ ಯಶಸ್ವಿ ವಿಶೇಷಚೇತನ ಚಿಪ್ಸ್ ಉದ್ದಿಮೆದಾರ ಚಿತ್ರದುರ್ಗದ ಮಾನಂಗಿಯ ಕುಮಾರ್ಸ್ವಾಮಿ ಮತ್ತು ಡಿ.ಎಸ್.ಹಳ್ಳಿಯ ರೊಟ್ಟಿಉದ್ಯಮೇದಾರರಾದ ಎನ್. ಕೆ. ಪದ್ಮಾಕ್ಷಿ ಮತ್ತು ಇತರ ಯಶಸ್ವಿ ಉದ್ದಿಮೆದಾರರು ತಮ್ಮ ಅನುಭವ ಹಂಚಿಕೊಂಡವರು.

ಆಸಕ್ತ 70ಜನ ರೈತಭಾಂದವರ ಕಾರ್ಯಗಾರದಲ್ಲಿ ಭಾಗವಹಿಸಿದವರು ದೂರವಾಣಿ ಸಂಖ್ಯೆ 8277931058, 9845249832 ಮತ್ತು 9535412286 ಕರೆ ಮಾಡಿ ನೋಂದಣಿ ತರಬೇತಿ ಸದುಪಯೋಗ ಪಡೆದುಕೊಳ್ಳಲು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಆರ್. ಆರ್.ರಜನೀಕಾಂತ ಕೋರಿದ್ದಾರೆ.

ಮೊದಲು ನೋಂದಾವಣಿ ಮಾಡಿಕೊಂಡ 70 ಜನ ಭಾಂದವರಿಗೆ ಆದ್ಯತೆ ತರಬೇತಿ ಮತ್ತು ತರಬೇತಿಗೆ ಹಾಜರಾಗುವ ರೈತ ಬಾಂಧವರು ಕಡ್ಡಾಯವಾಗಿ ತಮ್ಮ ಎಫ್ ಐಡಿ ಕಾರ್ಡ್ ಅಥವಾ ಚುನಾವಣಾ ಗುರುತಿನ ಚೀಟಿ ತರಬೇಕು ಎಂದು ಪ್ರಕಟಣೆ ನೀಡಲಾಗುತ್ತದೆ.

Related Post

Leave a Reply

Your email address will not be published. Required fields are marked *