Breaking
Tue. Dec 24th, 2024

80 ವರ್ಷ ಹುಚ್ಚಮ್ಮ ಎಂಬವರು ಗೃಹ ಲಕ್ಷಿ ಹಣದ ಜೊತೆಗೆ ವೃದ್ಧಾಪ್ಯ ವೇತನವೂ ಸಿಗದೇ ಕಷ್ಟವಾಗಿರುವ ವಯೋವೃದ್ಧೆ ಮುಖ್ಯಮಂತ್ರಿಗಳ ಆಸರೆ…!

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮದ 80 ವರ್ಷದ ವಯೋವೃದ್ಧೆ ಹುಚ್ಚಮ್ಮ ಎಂಬವರು ಗೃಹಲಕ್ಷಿ ಹಣದ ಜೊತೆಗೆ ವೃದ್ಧಾಪ್ಯ ವೇತನವೂ ಸಿಗದೇ ಕಷ್ಟಪಡುತ್ತಿರುವುದಾಗಿ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ʼಎಕ್ಸ್‌ʼ ಖಾತೆಯ ಮೂಲಕ ರಘುರಾಜ್‌ ಎಂಬವರು ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರು.

ಕೂಡಲೇ ಸ್ಪಂದಿಸಿದ ಅಧಿಕಾರಿಗಳು ಹುಚ್ಚಮ್ಮ ಅವರ ಕಷ್ಟಕ್ಕೆ ನೆರವಾಗಿದ್ದಾರೆ. ಆಗಸ್ಟ್‌ 5 ರಂದು ತಿಪಟೂರಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ವೃದ್ಧೆಯ ಮನೆ ಭೇಟಿ ಮಾಡಿ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ತಿಳಿದು ಬಂದಿರುವುದೇನೆಂದರೆ, ಹುಚ್ಚಮ್ಮನವರು 2023ರ ಸೆಪ್ಟೆಂಬರ್‌ನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಇನ್‌ ಆಕ್ಟಿವ್‌ ಬ್ಯಾಂಕ್‌ ಅಕೌಂಟ್‌ನಿಂದಾಗಿ ಗೃಹಲಕ್ಷ್ಮಿ ಹಣವು ಅವರಿಗೆ ಸಿಕ್ಕಿರುವುದಿಲ್ಲ. ಸದ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ವೃತ್ತ ಮೇಲ್ವಿಚಾರಕಿಯರು ಹುಚ್ಚಮ್ಮನವರ ಮನೆಗೆ ಭೇಟಿ ನೀಡಿ ಹಾಲ್ಕುರಿಕೆ ಅಂಚೆ ಕಚೇರಿಯಲ್ಲಿ ಹೊಸದಾಗಿ ಐ.ಪಿ.ಪಿ.ಬಿ. ಖಾತೆ ತೆರೆದಿರುತ್ತಾರೆ. ಬ್ಯಾಂಕ್‌ ಸಂಬಂಧಿತ ಸಮಸ್ಯೆ ಬಗೆಹರಿದಿದ್ದು, ಗೃಹಲಕ್ಷ್ಮಿ ಯೋಜನೆಯ ಹಣ ಹುಚ್ಚಮ್ಮನವರಿಗೆ ಮುಂದಿನ ದಿನಗಳಲ್ಲಿ ಪಾವತಿಯಾಗಲಿದೆ ಎಂದು ತುಮಕೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *