ಚಿತ್ರದುರ್ಗ : ಗ್ರಾಮೀಣ ಉಪ ವಿಭಾಗ ಬೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಪಂಡರಹಳ್ಳಿ ಶಾಖಾ ವ್ಯಾಪ್ತಿಯ ಜಾನುಕೊಂಡ ಗ್ರಾಮದಲ್ಲಿ ಹಾಲಿ ಇರುವ ಎಲ್.ಟಿ ಮಾರ್ಗದ 2/4 ಎ,ಸಿ.ಎಸ್.ಆರ್ ವಾಹಕ ತೆಗೆದು ರ‍್ಯಾಬಿಟ್ ವಾಹಕವನ್ನು ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇದೇ ಆಗಸ್ಟ್ 8 ರಿಂದ 14ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಫ್-8 ಸೊಲ್ಲಾಪುರ ಎನ್.ಜೆ.ವೈ 11ಕೆ.ವಿ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: 66/11 ಕೆವಿ ಪಂಡರಹಳ್ಳಿ ವ್ಯಾಪ್ತಿಯ ಜಾನುಕೊಂಡ, ಮಾಳಪ್ಪನಹಟ್ಟಿ, ಸೋಲ್ಲಾಪುರ, ಸಿದ್ದಾಪುರ, ಜಾಲಿಕಟ್ಟೆ, ಇದಾಯತ್‌ಪುರ, ಮಾನಂಗಿ, ಕಳ್ಳಿಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಚಿತ್ರದುರ್ಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
==========