ಚಿತ್ರದುರ್ಗ : ಆಗಸ್ಟ್ 10 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ತುರ್ತು ನಿರ್ವಹಣಾ ಕಾಮಗಾರಿ ನಿಮಿತ್ತ ಚಿತ್ರದುರ್ಗ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬಾಜಿನಲ್ಲಿ ವ್ಯತ್ಯಯವಾಗಲಿದೆ.
ನಗರದ ಕಾರ್ಯ ಮತ್ತು ಪಾಲನಾ ನಗರ ಉಪ-ವಿಭಾಗದ ವ್ಯಾಪ್ತಿಯಲ್ಲಿ ಎಫ್-1 ಮತ್ತು ಎಫ್-2, ಕೆಳಗೋಟೆ 11ಕೆವಿ ಮಾರ್ಗದ ಆರ್.ಟಿ.ಓ ಕಚೇರಿ ಸುತ್ತಮುತ್ತ, ಬಿ.ಎಲ್.ಬಡಾವಣೆ, ವಾಸವಿ ಮಹಲ್ ಸುತ್ತಮುತ್ತ, ಲಕ್ಷ್ಮಿ ಬಜಾರ್, ಬಿ.ಡಿ ರಸ್ತೆ, ದೊಡ್ಡಪೇಟೆ, ಚಿಕ್ಕಪೇಟೆ, ಎಸ್.ಆರ್.ಇ ಲೇಔಟ್, ಎಸ್.ಪಿ. ಕಚೇರಿ ಸುತ್ತಮುತ್ತ, ಕೆಳಗೋಟೆ ಪ್ರದೇಶ, ಮುನ್ಸಿಪಲ್ ಕಾಲೋನಿ, ಪೊಲೀಸ್ ಬಾರ್ ಲೈನ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ. ಗ್ರಾಹಕರು ಸಹಕರಿಸಬೇಕೆಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.