ಬೆಂಗಳೂರು ಗ್ರಾಮಾಂತರ ಜಿಲ್ಲೆ, : 2024 ನೇ ಸಾಲಿನ ಮುಂಗಾರು ಹಂಗಾಮಿಗೆ ರಾಜ್ಯ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ಪ್ರೀಮಿಯಂ ಪಾವತಿಸಿ ನೋಂದಾಯಿಸಿಕೊಳ್ಳುವಂತೆ ರೈತರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಇಲಾಖೆಯಿಂದ ಸಲಹೆ ನೀಡಿದೆ.
ಬೆಳೆ ನಷ್ಟ ಸಂಭವಿಸಿದರೆ ವಿಮೆಗೆ ನೋಂದಾಯಿಸಿದ್ದಲ್ಲಿ ಮಾತ್ರ ವಿಮೆ ಪರಿಹಾರ ಪಡೆಯಲು ಅನುಕೂಲವಾಗಲಿದೆ. ರಾಗಿ ಎಕರೆಗೆ (ಮಳೆಯಾಶ್ರಿತ) 340 ರೂ, ರಾಗಿ ಎಕರೆಗೆ (ನೀರಾವರಿ) 406 ರೂ., ಭತ್ತ (ನೀರಾವರಿ) ಎಕರೆಗೆ 746 ರೂ., ಮುಸುಕಿನ ಜೋಳ ಎಕರೆಗೆ (ಮಳೆಯಾಶ್ರಿತ) 452 ರೂ., ಮುಸುಕಿನ ಜೋಳ ಎಕರೆಗೆ (ನೀರಾವರಿ) ಎಕರೆಗೆ 516 ರೂ., ಹುರುಳಿ (ಮಳೆಯಾಶ್ರಿತ) ಎಕರೆಗೆ 164 ರೂ. ನಂತೆ ವಿಮಾ ಕಂತು ಪಾವತಿಸಬಹುದು.
ವಿಮೆ ಪಾವತಿಸಲು ಆಗಸ್ಟ್ 16 ಕೊನೆಯ ದಿನವಾಗಿದ್ದು, ಹತ್ತಿರದ ಗ್ರಾಮ ಒನ್, ಸಾಮಾನ್ಯ ಸೇವಾ ಕೇಂದ್ರ, ಕರ್ನಾಟಕ ಒನ್ ಅಥವಾ ಬ್ಯಾಂಕ್ ಗಳಲ್ಲಿ ನಿಗದಿತ ಪ್ರೀಮಿಯಂ ಪಾವತಿಸಿ ನೋಂದಾಯಿಸಿಕೊಳ್ಳಬಹುದು. ಬೆಳೆ ವಿಮೆ ನೋಂದಣಿಗೆ ‘ಫೂಟ್ಸ್’ ಐಡಿ, ಗುರುತಿನ ಸಂಖ್ಯೆ ಕಡ್ಡಾಯವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.