Breaking
Wed. Dec 25th, 2024

ತೋಟಗಾರಿಕೆ ದಿನಾಚರಣೆ” ಕಾರ್ಯಕ್ರದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಭಿಪ್ರಾಯ : ಪರಿಶ್ರಮದಿಂದ ತೋಟಗಾರಿಕೆ, ಕೃಷಿ ಹೆಚ್ಚು ಲಾಭದಾಯಕ

ಚಿತ್ರದುರ್ಗ : ಹೆಚ್ಚಿನ ಪರಿಶ್ರಮ ಪಟ್ಟರೆ ಕೃಷಿ ಮತ್ತು ತೋಟಗಾರಿಕೆ ಲಾಭದಾಯಕವಾಗಬಹುದಾಗಿದ್ದರೆ, ನೌಕರಿಯಲ್ಲಿ ಹೆಚ್ಚು ಆದಾಯ ಗಳಿಸಲು. ಜೊತೆಗೆ ಇದೊಂದು ದೇಶಸೇವೆಯೂ ಆಗಲಿದೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಭಿಪ್ರಾಯ.

ನಗರದ ತೋಟಗಾರಿಕೆ ಇಲಾಖೆ ಸಭಾಂಗಣದಲ್ಲಿ ಗುರುವಾರ ತೋಟಗಾರಿಕೆ ಇಲಾಖೆ ವತಿಯಿಂದ ತೋಟಗಾರಿಕೆ ಪಿತಾಮಹಾ ದಿ. ಡಾ. ಎಂ.ಹೆಚ್.ಮರಿಗೌಡರ ಜನ್ಮದಿನದ ಅಂಗವಾಗಿ ತೋಟಗಾರಿಕೆ ದಿನಾಚರಣೆ ಹಾಗೂ 2024-25ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಗಳ ವಿಸ್ತರಣೆ ಮತ್ತು ತರಬೇತಿ ಕಾರ್ಯಕ್ರಮದ ಶಾಲಾ ಮಕ್ಕಳಿಗೆ ತೋಟಗಾರಿಕೆ ಕುರಿತು ಏರ್ಪಡಿಸಿದ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.

ಇಂದಿನ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಮತ್ತು ರೈತರ ಶ್ರಮದ ಬಗ್ಗೆ ಮಾಹಿತಿಯ ಕೊರತೆಯಿದೆ. ನಾವು ತಿನ್ನುವ ಆಹಾರ, ಹಣ್ಣು, ತರಕಾರಿ ಬೆಳೆಗಳು ಯಾವ ರೀತಿಯಾಗಿ ಬೆಳೆಯುತ್ತವೆ ಎಂಬುವುದರ ಕುರಿತು ಪ್ರಾಥಮಿಕ ಜ್ಞಾನ ಅತ್ಯವಶ್ಯಕವಾಗಿ ಬೇಕಾಗಿದೆ. ಈ ಹಿನ್ನಲೆಯಲ್ಲಿ ಶಾಲಾ ಮಕ್ಕಳಿಗೆ ತೋಟಗಾರಿಕೆ ಬಗ್ಗೆ ತರಬೇತಿ ನೀಡಲಾಗುತ್ತಿದೆ, ಇದು ಅತ್ಯಗತ್ಯ. ಹೆಚ್ಚಿನ ಗಮನಹರಿಸಿ ತರಬೇತಿ ಕಾರ್ಯಕ್ರಮದ ಸದುಪಯೋಗವನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು. ತೋಟಗಾರಿಕೆ ಬಗ್ಗೆ ತರಬೇತಿ ಪಡೆಯುವ ಮೂಲಕ ತಮಗೆ ಬೇಕಾಗಿರುವ ಹಣ್ಣು, ತರಕಾರಿಗಳನ್ನು ತಾವೇ ಬೆಳೆಯಲು ಮುಂದಾಗಬೇಕು.

ತೋಟಗಾರಿಕೆ ಪಿತಾಮಹಾ ದಿ.ಡಾ.ಎಂ.ಹೆಚ್.ಮರಿಗೌಡರು ತೋಟಗಾರಿಕೆ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸಾಧನೆ ಮಾಡಿರುವ ಸಾಧಕರನ್ನು ಆದರ್ಶವಾಗಿಟ್ಟುಕೊಂಡು ತಾವುಗಳು ಸಹ ಸಮಾಜಕ್ಕೆ ಉತ್ತಮವಾದ ಕೊಡುಗೆಯನ್ನು ನೀಡಬೇಕಾಗಿದೆ ಎಂದು ಸಲಹೆ ನೀಡಿ.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶರಣಪ್ಪ ಭೋಗಿ ಮಾತನಾಡಿ, ತೋಟಗಾರಿಕೆ ಪಿತಾಮಹಾ ಡಾ.ಎಂ.ಹೆಚ್.ಮರಿಗೌಡರ ಜನ್ಮ ದಿನಾಚರಣೆ ಅಂಗವಾಗಿ ತೋಟಗಾರಿಕಾ ದಿನ ಆಚರಣೆ ಮಾಡಲಾಗುತ್ತಿದೆ. ತೋಟಗಾರಿಕೆ ದಿನದ ಅಂಗಗಳಿಗಾಗಿ ಶಾಲಾ ಮಕ್ಕಳಿಗೆ ಕಿಚನ್ ಗಾರ್ಡನ್ ಮಾಡುವ ಬಗೆ, ಮನೆಯ ಅಕ್ಕಪಕ್ಕ ಹಣ್ಣಿನ ಗಿಡಗಳನ್ನು ಬೆಳೆಯುವ ಪದ್ಧತಿಯ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿಯ ನಂತರ ಶಾಲಾ ಮಕ್ಕಳಿಗೆ ವಿವಿಧ ಬಗೆಯ ತರಕಾರಿಗಳ ಬೀಜದ ಕಿಟ್‌ನ್ನು ವಿತರಿಸಲಾಯಿತು.

ಸಿಗುವ ಹಣ್ಣು, ತರಕಾರಿಗಳು ಸಾಕಷ್ಟು ರಾಸಾಯನಿಕಗಳಿಂದ ಕೂಡಿದ್ದು, ಕೆಲವು ರಾಸಾಯನಿಕಗಳು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ನಮ್ಮ ಮನೆಗೆ ಬೇಕಾದ ಹಣ್ಣು, ತರಕಾರಿಗಳು ಬೆಳೆದು ಜನರ ಉತ್ತಮ ಆರೋಗ್ಯ, ಪೌಷ್ಠಿಕ ವೃದ್ಧಿ ಮಾಡುವ ಉದ್ದೇಶದಿಂದ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ.

ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಡಾ.ಎಂ.ಹೆಚ್.ಮರಿಗೌಡರ ಕುರಿತು ಸವಿವರವಾಗಿ ಸಾಧನೆ ಮಾಹಿತಿ ತೋರಿಸಲಾಗಿದೆ.

ಇದೇ ಸಂದರ್ಭದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ತರಕಾರಿ, ಹಣ್ಣು ಬೀಜಗಳ ಕಿಟ್‌ಗಳನ್ನು ವಿತರಿಸಿದರು. ನಂತರ ತೋಟಗಾರಿಕೆ ಗಿಡನೆಟ್ಟು ನೀರೆರೆದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ನಗರಸಭೆ ಸದಸ್ಯ ವೆಂಕಟೇಶ್, ಕೆಡಿಪಿ ಸದಸ್ಯ ನಾಗರಾಜ್ ಸೇರಿದಂತೆ ತೋಟಗಾರಿಕೆ ಇಲಾಖೆ ಸಿಬ್ಬಂದಿ ಹಾಗೂ ಶಾಲಾ ವಿದ್ಯಾರ್ಥಿಗಳು ಇದ್ದರು.

Related Post

Leave a Reply

Your email address will not be published. Required fields are marked *