ರಾಯಚೂರು : ತಾಲೂಕಿನ ಕಲ್ಮಲಾ ಗ್ರಾಮದ ಶ್ರೀ ಕರಿಯಪ್ಪ ತಾತಾ ದೇವಸ್ಥಾನದ ಜಾತ್ರೆ ಸುಗಮವಾಗಿ ನಡೆಯಲು ಆಯ್ದ ದಿನಗಳಂದು ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಅವರು ತಿಳಿಸಿದ್ದಾರೆ.
ಅಬಕಾರಿ ಕಾಯ್ದೆ 1965ರ ಕಲಂ.21 (1)ರನ್ವಯ ರಾಯಚೂರು ತಾಲೂಕಿನ ಕಲ್ಮಲಾ ಗ್ರಾಮದ ಶ್ರೀ ಕರಿಯಪ್ಪ ತಾತಾ ಜಾತ್ರೆಯಲ್ಲಿ ಭಕ್ತಾದಿಗಳಿಗೆ ತೊಂದರೆಯಾಗದAತೆ ಹಾಗೂ ಕಾನೂನು, ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಮತ್ತು ಜಾತ್ರೆಯು ಸುಗಮವಾಗಿ ನಡೆಯಲು ಮುಂಜಾಗ್ರತಾ ಕ್ರಮವಾಗಿ ದಿನಾಂಕ:09-08-2024ರAದು ಸಂಜೆ 05ಗಂಟೆಯಿAದ ದಿನಾಂಕ:10-08-2024 ರಂದು ಬೆಳಿಗ್ಗೆ 6ಗಂಟೆಯವರೆಗೆ, ದಿನಾಂಕ:12-08-2024 ರಂದು ಬೆಳಿಗ್ಗೆ 6ಗಂಟೆಯಿAದ ಮರು ದಿನ ಬೆಳಿಗ್ಗೆ 6ಗಂಟೆಯವರೆಗೆ, ದಿನಾಂಕ:19-08-2024 ರಂದು ಬೆಳಿಗ್ಗೆ 6ಗಂಟೆಯಿAದ ಮರು ದಿನ ಬೆಳಿಗ್ಗೆ 6-00 ಗಂಟೆಯವರೆಗೆ ಹಾಗೂ ದಿನಾಂಕ:26-08-2024 ರಂದು ಬೆಳಿಗ್ಗೆ 6ಗಂಟೆಯಿAದ ಮರು ದಿನ ಬೆಳಿಗ್ಗೆ, 6ಗಂಟೆಯವರೆಗೆ ಕಲ್ಮಲಾ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಎಲ್ಲ ರೀತಿಯ ಮಧ್ಯ ತಯಾರಿಕಾ ಘಟಕಗಳು, ಸಾಗಾಣಿಕೆ ಮತ್ತು ಸಂಗ್ರಹಣೆಯನ್ನು/ ಮಾರಾಟ ಮಳಿಗೆಗಳನ್ನು ಬಂದ್ ಇಡಲು ಆದೇಶ ಹೊರಡಿಸಿದ್ದಾರೆ.
ಈ ಅವಧಿಯಲ್ಲಿ ಹೊರಗಿನಿಂದ ಮದ್ಯ ಇತ್ಯಾದಿಗಳನ್ನು ತಂದು ಮಾರಾಟ ಮಾಡುವುದು ಕಂಡುಬAದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆ ತಿಳಿಸಿದ್ದಾರೆ.